Wednesday, March 25, 2026
HomeUncategorizedಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚನ್ನಮ್ಮನ ಕಿತ್ತೂರು ತಾಲ್ಲುಕು ಘಟಕ ಚುನಾವಣೆಯಲ್ಲಿ ಈರಣ್ಣ ಬಣಜಗಿ ಅಧ್ಯಕ್ಷ,...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚನ್ನಮ್ಮನ ಕಿತ್ತೂರು ತಾಲ್ಲುಕು ಘಟಕ ಚುನಾವಣೆಯಲ್ಲಿ ಈರಣ್ಣ ಬಣಜಗಿ ಅಧ್ಯಕ್ಷ, ಶೇಖರ ಕಲ್ಲುರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

ಚನ್ನಮ್ಮನ ಕಿತ್ತೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲುಕು ಘಟಕದ ಮುಂದಿನ ಮೂರು ವರ್ಷಗಳ ಅವಧಿಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಈರಣ್ಣ ಬಣಜಗಿ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾದರು, ಉಪಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಶಿವಾನಂದ ವಿಭೂತಿಮಠ ಚುನಾಯಿತರಾದರು.ಶೇಖರ ಕಲ್ಲುರ ಪ್ರಧಾನ ಕಾರ್ಯದರ್ಶಿ, ಸೋಮಶೇಖರ ಕುಪ್ಪಸಗೌಡರ ಖಜಾಂಚಿಯಾಗಿ ಸರ್ವಾನುಮತದಿಂದ ಚುನಾಯಿತರಾದರು. ಚುನಾವಣಾಧಿಕಾರಿ ಜಿ. ಕೆ. ಪೂಜಾರ ಈ ಅವಿರೋಧ ಆಯ್ಕೆಗಳನ್ನು ಘೋಷಣೆ ಮಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ್ ಮಠದ ವೀಕ್ಷಕರಾಗಿ ಆಗಮಿಸಿದ್ದರು, ಜಿಲ್ಲಾ ಪ್ರತಿನಿಧಿಗಳಾದ ಉಳವಯ್ಯ ಹಿರೇಮಠ, ರುದ್ರೇಶ ಸಂಪಗಾಂವಿ, ತಾಲ್ಲುಕು ಘಟಕದ ಪದಾಧಿಕಾರಿಗಳಾದ ಶಿವಾನಂದ ತಾರಿಹಾಳ, ಮಹಾರುದ್ರ ಮಹಾಲ್ಮನಿ, ಸದಸ್ಯ ಅದೃಶ್ಯ ಬಣಜಗಿ ಹಾಗೂ ಇತರರು ಉಪಸ್ಥಿತರಿದ್ದ.

ಸಂಪಾದಕರು : ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

ಹೆಚ್ಚಿನ ಸುದ್ದಿ