ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕು, ಕಸಬಾ ಹೋಬಳಿಯ ನಾಗಶೆಟ್ಟಹಳ್ಳಿ ಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯಿತು.
ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ಉದ್ಯಾನವನದ ಜಾಗದಲ್ಲಿ ಅಂಬೇಡ್ಕರ್ ಭವನ ಕಟ್ಟಬೇಕು ಅಂತ ದಲಿತ ಸಮುದಾಯ ತುಂಬ ವರ್ಷಗಳಿಂದ ಗಲಾಟೆ ಮಾಡ್ಕೊಂಡು ಬಂದಿದ್ದು. ಈ ಸಲ ಜಾತ್ರೆಯಲ್ಲೂ ಸಹ ಜಾತ್ರೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದ್ರೂ ಊರಿನ ಜನರು ಊರಿನ ಹೊರಗಡೆ ಜಾತ್ರೆ ಮಾಡಿದ್ದಾರೆ ಮತ್ತೆ ದಲಿತ ಸಮುದಾಯದವರು ದೇವಸ್ಥಾನದ ಒಳಗಡೆ ಅವರೇ ಹೋಗಿ ಪೂಜೆನೂ ಸಹ ಮಾಡ್ಕೊಂಡಿದ್ದಾರೆ.
