ಯಕರನೊಂದಿಗೆ ಲಾಡ್ಜ್‌ನಲ್ಲಿದ್ದ ಪತ್ನಿಯನ್ನು ಪತಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಈ ಹಿಂದೆ ಪತಿಯ ವಿರುದ್ಧವೇ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದ ಪತ್ನಿ, ಪ್ರಿಯಕರನ ಜೊತೆ ಹೊಸ ಜೀವನ ನಡೆಸಲು ಯೋಜಿಸಿದ್ದಳು. ಪೊಲೀಸರ ಸಹಾಯದಿಂದ ಪತಿ ಈ ಅಕ್ರಮ ಸಂಬಂಧವನ್ನು ಬಯಲಿಗೆಳೆದಿದ್ದಾನೆ.
ಲಾಡ್ಜ್ ಕೋಣೆಯಲ್ಲಿ ಪ್ರಿಯಕರನೊಂದಿಗೆ ಸರಸದಲ್ಲಿದ್ದಾಗಲೇ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಪತಿ ಹಿಡಿದಿದ್ದಾನೆ. ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾಳೆ. ಹೋಟೆಲ್‌ನಲ್ಲಿರುವಾಗಲೇ ಹಿಡಿದಾಗ ಮಖ ಮುಚ್ಕೊಂಡು ಹೊರಗೆ ಬಂದಿದ್ದಾಳೆ. ಪೊಲೀಸರ ಜೊತೆಯಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
