Wednesday, March 11, 2026
Homeಕ್ರೈಂ ಸುದ್ದಿಗಳುಬೈಲಹೊಂಗಲ ಬಸ್ ನಿಲ್ದಾಣದಲ್ಲಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡುವ ಆರೋಪಿಗಳ ಬಂಧನ...

ಬೈಲಹೊಂಗಲ ಬಸ್ ನಿಲ್ದಾಣದಲ್ಲಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡುವ ಆರೋಪಿಗಳ ಬಂಧನ…

ಬೈಲಹೊಂಗಲ: ಇತ್ತೀಚಿಗೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬೈಲಹೊಂಗಲ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಬಂಗಾರದ ಆಭರಣಗಳ ಕಳ್ಳತನಗಳು ಜರುಗಿದ್ದು ಕಳ್ಳತನ ಪ್ರಕರಣದ ಆರೋಪಿ ಮತ್ತು ಕಳವು ಮಾಲು ಪತ್ತೆ ಕುರಿತು ಮಾನ್ಯ ಶ್ರೀ ಕೆ ರಾಮರಾಜನ ಐಪಿಎಸ್. ಜಿಲ್ಲಾ ಪೊಲೀಸ ಅಧೀಕ್ಷಕರು ಬೆಳಗಾವಿ ಜಿಲ್ಲೆ, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ, ಡಾ: ಭಾನು ಪ್ರಕಾಶ ಐಪಿಎಸ್, ಪ್ರೋಬೇಶನರಿ ಪೊಲೀಸ್ ಅಧಿಕಾರಿ ಮತ್ತು ಡಾ: ವೀರಯ್ಯ ಹಿರೇಮಠ ಡಿಎಸ್‌ಪಿ ಬೈಲಹೊಂಗಲ ರವರ ಮಾರ್ಗದರ್ಶನದಲ್ಲಿ ಪ್ರಮೋದ ಸಿ ಯಲಿಗಾರ ಪಿಐ ಬೈಲಹೊಂಗಲ, ರವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತಂಡವು ವೈಜ್ಞಾನಿಕ ತನಿಖಾ ಸಾಧನಗಳನ್ನು ಬಳಸಿಕೊಂಡು ಕೆಳಕಂಡ ಆರೋಪಿತಳನ್ನು ದಸ್ತಗೀರ ಮಾಡಿರುತ್ತಾರೆ.

01] ಅನಿತಾ ನಿತೀನ ಚೌಗೂಲೆ, ವಯಾ: 45 ವರ್ಷ, ಸಾಃ ಗ್ಯಾಂಗವಾಡಿ ಬೆಳಗಾವಿ ತಾ:ಜಿ: ಬೆಳಗಾವಿ.

ಸದರಿ ಆರೋಪಿತಳು ಬೈಲಹೊಂಗಲ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 268/2025 ಕಲಂ: 303(2) ನೇ ಪ್ರಕರಣದಲ್ಲಿ ಕಳುವಾದ ಬಂಗಾರದ ಆಭರಣಗಳನ್ನು ಹಾಗೂ ಬೈಲಹೊಂಗಲ ಠಾಣಾ ವ್ಯಾಪ್ತಿಯ ಇನ್ನೂಳಿದ 02 ಪ್ರಕಣಗಳನ್ನು ಈ ದಿವಸ ಪತ್ತೆ ಮಾಡಿದ್ದು ಒಟ್ಟು ಸುಮಾರು 15,20,000/- ರೂ ಕಿಮ್ಮತ್ತಿನ 90 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿತಳಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸದರಿ ಪ್ರಕರಣದ ಪತ್ತೆ ಬಗ್ಗೆ ಶ್ರೀ ಪ್ರಮೋದ ಸಿ ಯಲಿಗಾರ ಪಿಐ ಬೈಲಹೊಂಗಲ ರವರ ನೇತೃತ್ವದಲ್ಲಿ ಶ್ರೀ ಎಫ್ ವಾಯ್ ಮಲ್ಲೂರ ಪಿಎಸ್‌ಐ (ಕಾ&ಸು) ಬೈಲಹೊಂಗಲ ರವರ ಹಾಗೂ ವಾಯ್ ಎಸ್ ಮುಂಡಲಿ ಎಎಸ್‌ಐ ಬೈಲಹೊಂಗಲ ಪಿಎಸ್. ಕೆ ಆರ್ ಇಮಾಮನವರ ಎಎಸ್‌ಐ ಬೈಲಹೊಂಗಲ ಪಿಎಸ್ & ಸಿಎಚ್‌ಸಿ ಎಮ್ ಎಸ್ ಅವರಾದಿ. ಡಬ್ಲೂ.ಎಚ್.ಸಿ ಎಸ್ ಎ ಮಾರಿಹಾಳ, ಅಪರಾಧ ವಿಭಾಗದ ಸಿಬ್ಬಂದಿಗಳು-ಸಿಪಿಸಿ ಚೇತನ ಬುದ್ದಿ, ಸಿಪಿಸಿ ಎಮ್ ಬಿ ಗಿಡಗಿರಿ, ಸಿಪಿಸಿ ಎಮ್ ಎಸ್ ದೇಶನೂರ, ಸಿಪಿಸಿ ಕೆ ಎಪ್ ವಕ್ಕುಂದ ಹಾಗೂ ಡಬ್ಲೂಪಿಸಿ ಕೆ ಸಿ ಮಠಪತಿ, ಡಬ್ಲೂಪಿಸಿ ಎಸ್ ಕೆ ಗದ್ದಿಹಳ್ಳಿ ಹಾಗೂ ಬೆಳಗಾವಿ ಟೇಕ್ನಿಕಲ್ ವಿಭಾಗದ ಸಿಪಿಸಿ ಸಚೀನ ಪಾಟೀಲ ಇವರೆಲ್ಲರೂ ಆರೋಪಿತಳ ಪತ್ತೆ ಕಾರಾಚರಣೆಯಲ್ಲಿ ಶ್ರಮಿಸಿರುತ್ತಾರೆ. ಈ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿಗಳು ಶ್ಲಾಘನೆ ವ್ಯಕ್ತ ಪಡಿಸಿರುತ್ತಾರೆ.

ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

ಹೆಚ್ಚಿನ ಸುದ್ದಿ