Wednesday, March 11, 2026
Homeಜಿಲ್ಲಾ ಸುದ್ದಿಗಳುಅಕ್ರಮ ಮರ್ಮ ಗಣಿಗಾರಿಕೆ: ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಸುಲ ಬೆನ್ನೂರು ಆಗ್ರಹ

ಅಕ್ರಮ ಮರ್ಮ ಗಣಿಗಾರಿಕೆ: ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಸುಲ ಬೆನ್ನೂರು ಆಗ್ರಹ

ಹುಣಸಗಿ 10 : ಅರಕೆರ (ಜೆ) ಹಾಗೂ ಮಾಳನೂರು ಸೀಮೆಯಲ್ಲಿ ನಡೆಯುತ್ತಿರುವ ಅಕ್ರಮ ಮರ್ಮ ಗಣಿಗಾರಿಕೆಯನ್ನು ತಡೆಯುವಲ್ಲಿ ವಿಫಲರಾದ ಮತ್ತು ಕರ್ತವ್ಯ ಲೋಪ ಎಸಗಿದ ಕಂದಾಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷರಾದ ರಸುಲ ಬೆನ್ನೂರು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಫೆಬ್ರವರಿ 27, 2026 ರಂದು ಲಿಖಿತ ಮನವಿ ಸಲ್ಲಿಸಿರುವ ಅವರು, ಮಾಧ್ಯಮಗಳ ಮೂಲಕ ಘಟನೆಯ ಗಂಭೀರತೆಯನ್ನು ವಿವರಿಸಿದ್ದಾರೆ.
ಪ್ರಮುಖ ಆರೋಪಗಳು:
ಅಕ್ರಮ ಲೂಟಿ: ಸರ್ಕಾರಿ ಗುಡ್ಡಗಳು ಹಾಗೂ ಪಟ್ಟಾ ಭೂಮಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪೂರ್ವಾನುಮತಿ ಅಥವಾ ಪರವಾನಗಿ ಇಲ್ಲದೆ ಹಗಲು-ರಾತ್ರಿ ರಾಜಾರೋಷವಾಗಿ ಮರ್ಮ ಗಣಿಗಾರಿಕೆ ನಡೆಸಲಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಅಕ್ರಮದಲ್ಲಿ ತೊಡಗಿರುವ ಟಿಪ್ಪರ್‌ಗಳನ್ನು ಹಿಡಿದರೂ, ಅವುಗಳ ಮಾಲೀಕರ ಮೇಲೆ ಯಾವುದೇ ದಂಡ ವಿಧಿಸದೆ ಅಥವಾ ಎಫ್‌ಐಆರ್ (FIR) ದಾಖಲಿಸದೆ ಅಧಿಕಾರಿಗಳು ಕೈಬಿಡುತ್ತಿದ್ದಾರೆ.
ಆರೈಗಳ (RI) ವಿರುದ್ಧ ಕಿಡಿ: ಸಂಬಂಧಪಟ್ಟ ಭಾಗದ ಕಂದಾಯ ನಿರೀಕ್ಷಕರು (RI) ಮತ್ತು ಗ್ರಾಮ ಆಡಳಿತಾಧಿಕಾರಿಗಳು ಅಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ ಅಥವಾ ಮೌನ ವಹಿಸುವ ಮೂಲಕ ಸರ್ಕಾರಿ ಖಜಾನೆಗೆ ನಷ್ಟ ಉಂಟುಮಾಡುತ್ತಿದ್ದಾರೆ ಎಂದು ರಸುಲ ಬೆನ್ನೂರು ಕಿಡಿಕಾರಿದ್ದಾರೆ.
ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಿರುವ ಗಣಿ ಮಾಫಿಯಾ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇದಕ್ಕೆ ಸಹಕರಿಸುತ್ತಿರುವ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ