Monday, February 23, 2026
Homeಜಿಲ್ಲಾ ಸುದ್ದಿಗಳು“ಗ್ರಾಮಾಭಿವೃದ್ಧಿಯಿಂದ ಸುಸ್ಥಿರತೆಯತ್ತ” ಘೋಷವಾಕ್ಯದಡಿ 4ನೇ ಬುಡಕಟ್ಟು ಮತ್ತು ತಳ ಸಮುದಾಯಗಳು ಹಾಗೂ ವಿವಿಧ ಸಂಘಟನೆಗಳ ಒಕ್ಕೂಟಗಳ...

“ಗ್ರಾಮಾಭಿವೃದ್ಧಿಯಿಂದ ಸುಸ್ಥಿರತೆಯತ್ತ” ಘೋಷವಾಕ್ಯದಡಿ 4ನೇ ಬುಡಕಟ್ಟು ಮತ್ತು ತಳ ಸಮುದಾಯಗಳು ಹಾಗೂ ವಿವಿಧ ಸಂಘಟನೆಗಳ ಒಕ್ಕೂಟಗಳ ಸಾಂಸ್ಕೃತಿಕ ಕಲಾ ಮೇಳ–2026

ಮುಂಡಗೋಡ: ಬುಡಕಟ್ಟು ಮತ್ತು ತಳ ಸಮುದಾಯಗಳ ಸಾಂಸ್ಕೃತಿಕ ಪರಂಪರೆ, ಒಗ್ಗಟ್ಟು ಮತ್ತು ಹಕ್ಕು ಜಾಗೃತಿ ಹೆಚ್ಚಿಸುವ ಉದ್ದೇಶದಿಂದ “ಗ್ರಾಮಾಭಿವೃದ್ಧಿಯಿಂದ ಸುಸ್ಥಿರತೆಯತ್ತ” ಎಂಬ ಘೋಷವಾಕ್ಯದಡಿ ಆಯೋಜಿಸಲಾದ 4ನೇ ಬುಡಕಟ್ಟು ಮತ್ತು ತಳ ಸಮುದಾಯಗಳು ಹಾಗೂ ವಿವಿಧ ಸಂಘಟನೆಗಳ ಒಕ್ಕೂಟಗಳ ಸಾಂಸ್ಕೃತಿಕ ಕಲಾ ಮೇಳ – 2026 ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಟಿ.ವೈ. ದಾಸನಕೊಪ್ಪ ಅವರು ಪರಂಪರೆಯ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕವನ್ನು ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ಫಾದರ್ ಅನಿಲ್ ಡಿಸೋಜಾ ಅವರು ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಜನ ವೇದಿಕೆಯ ನಾಯಕರು ಬೀರು ಕಾತ್ರಟ್ ವಹಿಸಿಕೊಂಡಿದ್ದು, ಗೌರವ ಅಧ್ಯಕ್ಷರಾಗಿ ಬಸವಂತಪ್ಪ ಪೂಜಾರ ಉಪಸ್ಥಿತರಿದ್ದರು. ಸ್ವಾಗತವನ್ನು ಶ್ರೀಮತಿ ಅಂಜನಾ ತಹಶೀಲ್ದಾರ್ ನಿರ್ವಹಿಸಿದರು.

ಮುಖ್ಯ ಅತಿಥಿಗಳಾಗಿ ಜಂಪಾ ಲಾಮಾ (ಟಿಬೇಟಿಯನ್ ಕ್ಯಾಂಪ್), ನ್ಯಾಯವಾದಿ ನವೀನ್ ಸಿದ್ದಿ, ಫಾದರ್ ಅಲ್ವಿನ್ ಡಿಸೋಜಾ, ಪ್ರೊಫೆಸರ್ ಮಂಜುನಾಥ ಲಮಾಣಿ, ಚಲನಚಿತ್ರ ನಟ ಸುನಿಲ್ ಸಿದ್ದಿ, ಸಿಸ್ಟರ್ ಗ್ಲ್ಯಾಡಿಸ್ ಮೆನೆಜಸ್, ಸಿಸ್ಟರ್ ಶರಲ್ ಸಾಲ್ಡಾನಾ, ಸಿಸ್ಟರ್ ಟ್ರಿಜಾ ಕ್ರಾಸ್ತಾ, ಸುನಿಲ್ ಸೆಳಕೆ, ಫಾದರ್ ಜೇಸನ್ ಪಾಯಸ್, ಫಾದರ್ ವಿಲ್ಸನ್, ಫಾದರ್ ವಿನ್ಸೆಂಟ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಅರಣ್ಯ ಹಕ್ಕು ಕಾಯ್ದೆ ಸವಾಲುಗಳು ಹಾಗೂ ಮಹಜರ್ ಪ್ರಕ್ರಿಯೆ ಕುರಿತು ಚರ್ಚಾಗೋಷ್ಠಿ ನಡೆಯಿತು. ನಾಗರಾಜ್ ಕಟ್ಟಿಮನಿ ಅವರಿಂದ ನಿರ್ವಹಿಸಲ್ಪಟ್ಟ ಈ ಗೋಷ್ಠಿಗೆ ನ್ಯಾಯವಾದಿ ನವೀನ್ ಸಿದ್ದಿ ಅಧ್ಯಕ್ಷತೆ ವಹಿಸಿದರು. ಮಂಗಳಾ ಮೊರೆ ಅವರ ನೇತೃತ್ವದಲ್ಲಿ 12 ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬುಡಕಟ್ಟು ಜನಾಂಗದ ವಿಶಿಷ್ಟ ಹಬ್ಬಗಳು, ಸುಗ್ಗಿ ಮತ್ತು ಪ್ರಕೃತಿ ಆಚರಣೆಗಳ ಮಾದರಿ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.

ಕಲಾತಂಡಗಳಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿ ವಿತರಣೆ ನಡೆಯಿತು. ಜೊತೆಗೆ 30 ಅದೃಷ್ಟವಂತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜಕ್ಕೆ ನೀಡಿದ ವಿಶೇಷ ಕೊಡುಗೆ ಮತ್ತು ಸಹಕಾರವನ್ನು ಗುರುತಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಟಿ.ವೈ. ದಾಸನಕೊಪ್ಪ, ನ್ಯಾಯವಾದಿ ನವೀನ್ ಸಿದ್ದಿ, ಸುನಿಲ್ ಸೆಳಕೆ, ಚಲನಚಿತ್ರ ನಟ ಸುನಿಲ್ ಸಿದ್ದಿ, ಜಂಪಾ ಲಾಮಾ ಹಾಗೂ ಪ್ರೊಫೆಸರ್ ಮಂಜುನಾಥ ಲಮಾಣಿ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಗುಲ್ಜಾರ್ ಮಳಗಿ ಅವರು ಸುಂದರವಾಗಿ ನೆರವೇರಿಸಿದರು. ಕಾರ್ಯಕ್ರಮದ ಸಮಾರೋಪವನ್ನು ಫಾದರ್ ಅನಿಲ್ ಡಿಸೋಜಾ ನೆರವೇರಿಸಿದರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಕೈಜೋಡಿಸಿದ ಎಲ್ಲಾ 7 ಸಂಘಟನೆಗಳು, 7 ಸಮುದಾಯಗಳು, ಗ್ರಾಮಾಭಿವೃದ್ಧಿ ಸಮಿತಿಗಳು, ಪದಾಧಿಕಾರಿಗಳು, ಲೊಯೋಲ ಸಮೂಹ ಸಂಸ್ಥೆಗಳ ಫಾದರ್‌ಗಳು, ಬ್ರದರ್ಸ್, ಸಿಸ್ಟರ್ಸ್, ಸಿಬ್ಬಂದಿ ವರ್ಗ, ಅಡುಗೆ ಹಾಗೂ ವಸತಿ ಸಿಬ್ಬಂದಿ, ನಿರೂಪಕರು ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಹಿತೈಷಿಗಳಿಗೆ ಆಯೋಜಕರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ