ಝಳಕಿ : ಕರ್ನಾಟಕ ಪೊಲೀಸ್ ಯಾರಿಗೂ ಕಮ್ಮಿ ಇಲ್ಲಾ, ಎಂತಹ ನಟ ಭಯಂಕರ ಕಳ್ಳರಿಗೂ ಜಾಲಾಡಿ ಅವರನ್ನು ಹೆಡೆಮುರಿ ಕಟ್ಟಿದ್ದಾರೆ ಎಂದು ಝಳಕಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ವಿನೋದ ಶಿರಶ್ಯಾಡ ಅಭಿನಂದನೆ ಸಲ್ಲಿಸಿದರು.
ಜನೆವರಿ 26 ರಂದು ನಡೆದ ಝಳಕಿ ಠಾಣಾ ವ್ಯಾಪ್ತಿಯ ಹಲಸಂಗಿ ಗ್ರಾಮದಲ್ಲಿ ಚಿನ್ನದ ಅಂಗಡಿ ಹಾಡು ಹಗಲೇ ದರೋಡೆ ಮಾಡಿ, ನಾಡ ಪಿಸ್ತುಲ ಹಾರಿಸಿ ಜನರ ನಿದ್ದೆಗೆಡಿಸಿದ ಪ್ರಕರಣಕ್ಕೆ ತಿಲಾಂಜಲಿ ಹಾಡಿದ ಝಳಕಿ, ಹೊರ್ತಿ, ಚಡಚಣ ಪಿ. ಎಸ್. ಆಯ್ ಮತ್ತು ಚಡಚಣ ಸಿ. ಪಿ. ಆಯ್. ಸಾಹೇಬರಿಗೆ ಝಳಕಿ ಠಾಣಾ ಆವರಣದಲ್ಲಿ ಸುತ್ತಲಿನ ಗ್ರಾಮಸ್ಥರು ಮತ್ತು ವಿನೋದ ಶಿರಶ್ಯಾಡ ಇವರ ನೇತೃತ್ವದಲ್ಲಿ ಸನ್ಮಾನ ಸಮಾರಂಭ ನಡೆಸಲಾಯಿತು.
ವಿಜಯಪುರ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಮಾತನಾಡಿ, ನಮ್ಮ ಇಂಡಿ, ಚಡಚಣ ತಾಲೂಕಿನ ಠಾಣಾ ಅಧಿಕಾರಿಗಳು ಯಾರಿಗೂ ಕಮ್ಮಿ ಇಲ್ಲಾ ಎಂದು ಸಾಬೀತು ಪಡಿಸಿದ್ದಾರೆ, ಯಾವುದೇ ಕುರುಹು ಇಲ್ಲದೆ ಪ್ರಕಾರಣಕ್ಕೆ ಕಲೆ ಹಾಕಿ, ಸರ್ಕಾರ, ಮತ್ತು ಜನರಿಗೆ ಪೊಲೀಸ್ ಇಲಾಖೆ ತಮ್ಮ ಸಾಧನೆ ಯಾವರೀತಿ ಇದೆ ಅನ್ನೋದನ್ನು ತೋರಿಸಿದ್ದಾರೆ, ಇದಲ್ಲದೆ ಪೊಲೀಸರಿಂದ ಜನ ಸಾಮಾನ್ಯರಿಗೆ ಯಾವರೀತಿಯಾಗಿ ಸಹಾಯ ಸಹಕಾರ ಸಿಗುತ್ತದೆ ಎಂದು ತೋರಿಸಿಕೊಟಿದ್ದಕ್ಕೆ ಧನ್ಯವಾದಗಳು ಸಲ್ಲಿಸಿದರು.
ಸಿ. ಪಿ. ಆಯ್. ಪರಶುರಾಮ್ ಮನಗೂಳಿ ಮಾತನಾಡಿ ನಾವುಗಳು ನಿಮ್ಮ ಸೇವೆಗೆ ಸದಾ ಸಿದ್ದರು, ನಮ್ಮಿಂದ ಯಾವುದೇ ಸಹಾಯ ಬೇಕಾದಲ್ಲಿ ಯಾವುದೇ ಸಂಕೋಚ ಇಲ್ಲದೆ ಕೇಳಬಹುದು, ನೀವು ಮಾಡಿರುವ ಸನ್ಮಾನ ನಮಗೆ ಕೊಟ್ಟ ಬಹು ದೊಡ್ಡ ಬಹುಮಾನ, ನಿಮ್ಮ ಸನ್ಮಾನ ನಮಗೆ ನಮ್ಮ ಕರ್ತವ್ಯ ಇನ್ನಷ್ಟು ಹೆಚ್ಚಿಸಿದೆ, ನಾವು ಸದಾ ತಮ್ಮ ಸೇವೆಗೆ ಸಿದ್ದರು ಎಂದು ಶ್ಲಾಘಸಿದರು.
ಈ ಸಂದರ್ಭದಲ್ಲಿ ಝಳಕಿ ಠಾಣಾ ಅಧಿಕಾರಿಗಳು ಮಂಜುನಾಥ್ ತೀರಕನ್ನವರ, ಹೊರ್ತಿ ಠಾಣಾ ಅಧಿಕಾರಿಗಳು ರಾಕೇಶ ಬಗಲಿ, ಚಡಚಣ ಠಾಣಾ ಅಧಿಕಾರಿಗಳು ಸೋಮಶೇಖರ್ ಗೆಜ್ಜಿ, ಪೊಲೀಸ್ ಸಿಬ್ಬಂದಿಗಳು ರಾಜು ಲಾಳಸಂಗಿ, ಅಬ್ಬಜಲ ಪಠಾಣ, ಸಣ್ಣಪ್ಪ ತಳವಾರ, ರವೀಂದ್ರ ತೇಲಿ, ವಿಕಾಸ ಶಿರಶ್ಯಾಡ, ವಿಶ್ವ ಶಿರಶ್ಯಾಡ, ಅಣ್ಣರಾಯ ಬಬಲಾದ,ಶಂಕರ ಬಿರಾದಾರ,ಶಿವಲಿಂಗ್ ತುಪ್ಪದ, ಶರಣಯ್ಯ ಮಠಪತಿ, ರವಿಕುಮಾರ್ ಹೂಗಾರ್, ಪ್ರಕಾಶ್ ಬಿರಾದಾರ, ಅಶೋಕ್ ಅಷ್ಟಗಿ, ರಾಜಶೇಖರ್ ಕಾಡೆ, ಪಿಂಟು ಹಾಡಸಂಗೆ, ಸುನಿಲ್ ಜಾಧವ, ಮಾದೇವ ಹಾಡಸಂಗೆ, ಹಾಗೂ ಝಳಕಿ, ಬಳ್ಳೊಳ್ಳಿ, ಮೈಲಾರ, ಗುಂದವಾನ, ಜೇವೂರ, ಅಂಜುಟಗಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.