ಶಿಗ್ಗಾಂವಿ: ಶಿಗ್ಗಾಂವಿ ತಾಲೂಕಿನ ವಿ.ಐ.ಎನ್.ಪಿ.ಡಿಸ್ಟಿಲರಿಸ ಮತ್ತು ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಕೋಣನಕೇರಿ, ಫ್ಯಾಕ್ಟರಿಗೆ ರೈತ ಬೆಳೆದ ಕಬ್ಬು ಬಂದು ಮೂರು ತಿಂಗಳಾದ್ರೂ ಬ್ಯಾಂಕ್ ಗೆ ಹಣ ಸಂದಾಯ ಇಲ್ಲಾ.
ಅದರಿಂದ ಹಾವೇರಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಕಬ್ಬು ಬೆಳೆಗಾರ ಸಂಘದಿಂದ ರೈತರಿಗೆ ಹಣ ಏಕೆ ಸಂದಾಯವಾಗಿಲ್ಲ
ಕಾರ್ಖಾನೆಗೆ ಸಾಗಿದ ನಮ್ಮ ಕಬ್ಬು ಬೆಳೆಯ ಬಿಲ್ ಗಳನ್ನು ಏಕೆ ಬಾಕಿ ಇಟ್ಟಿದ್ದೀರಿ, ಎಷ್ಟು ಕಬ್ಬು ಬಿಲ್ ಮಾಡಿದ್ದೀರಿ ಎಸ್ಟ್ ಟನ್ ಬಿಲ್ ಬಾಕಿ ಇದೆ ಎಂಬುದರ ಮಾಹಿತಿ ಹಾಗೂ ಹಾವೇರಿ ಜಿಲ್ಲೆಯ ರೈತರ ಬಿಲ್ ಬಾಕಿ ಇಡಲು ಕಾರಣ ಏನು ಎಂಬ ಪ್ರಶ್ನೆಗಳನ್ನು ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಹಾಗೂ ಬಸಲಿಂಗಪ್ಪ ನರಗುಂದ ಕಾರ್ಖಾನೆ ಸಿಬ್ಬಂದಿ ಕೇಳಿದರು.
ರೈತರ ಸಮಸ್ಯೆಗೆ ಆಲಿಸಿದ ಕಾರ್ಖಾನೆ ಸಿಬ್ಬಂದಿ ಲಕ್ಷ್ಮಣ ಅವರು ಮಾತನಾಡಿ ಫೆಬ್ರುವರಿ 28 ರ ಒಳಗಾಗಿ ಎಲ್ಲ ಬಿಲ್ ಗಳನ್ನು ರೈತರ ಖಾತೆಗೆ ಜಮಾ ಮಾಡುತ್ತೇವೆ ಎಂಬ ಮಾತನ್ನು ಹೇಳಿದರು.
ನಂತರದಲ್ಲಿ ಮಾತನಾಡಿದ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಕಾರ್ಖಾನೆ ಸಿಬ್ಬಂದಿಗೆ ಫೆಬ್ರುವರಿ 25 ರ ಒಳಗಾಗಿ ಎಲ್ಲ ರೈತರ ಸಂಯೋಗದಲ್ಲಿ ಕಾರ್ಖಾನೆ ಮಾಲಕರು ಹಾಗೂ ಸಿಜಿಎಂ ಅವರ ಜೊತೆ ಪ್ರೆಸ್ ಮೀಟ್ ಅನ್ನು ಇದೆ ತಿಂಗಳು 20/21ರಂದು ಮಾಡಬೇಕು, ರೈತರಿಗೆ 550 ಕ್ಕೆ ಗೊಬ್ಬರದ ಮಾರಾಟ ಮಾಡುತ್ತಿದ್ದಾರೆ ಅದನ್ನು 400 ರೂ ಗೆ ಒಂದು ಟನ್ ಮಾರಾಟ ಮಾಡಬೇಕು.
ಫೆಬ್ರುವರಿ 28 ರ ಒಳಗೆ ಕಬ್ಬಿನ ಹಣ ಹಾಕದೆ ಇದ್ದರೆ, ಮಾರ್ಚ್ ನಲ್ಲಿ ಹೋರಾಟ ಮಾಡಿ ಹಣ ಪಡೆಯುತ್ತೇವೆ ಎಂಬ ಮಾತನ್ನು ಹೇಳಿದರು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷರಾದ ಬರಲಿಂಗಪ್ಪ ನರಗುಂದ ಹಾಗೂ ಪ್ರಮುಖರಾದ ಬಾಹುಬಲಿ ಸೊಗಲೀ,ಈರಣ್ಣ ಸಂಗೊಂಡಯ್ಯ,ಮುತ್ತಣ್ಣ ವೀರಾಪುರ,ಅನೇಕ ರೈತರು ಹಾಜರಿದ್ದರು.
ವರದಿ : ಸೋಮಶೇಖರ ಲಮಾಣಿ
