Thursday, March 26, 2026
Homeಜಿಲ್ಲಾ ಸುದ್ದಿಗಳುಹಾವೇರಿ ನಗರದಲ್ಲಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪೆಂಡಾಲ್ ಕಳಚಿ ಬಿದ್ದು ಹಲವರಿಗೆ ಗಾಯ....

ಹಾವೇರಿ ನಗರದಲ್ಲಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪೆಂಡಾಲ್ ಕಳಚಿ ಬಿದ್ದು ಹಲವರಿಗೆ ಗಾಯ….

ಹಾವೇರಿ: ಸರ್ಕಾರದ ಸಾಧನಾ ಸಮಾವೇಶ ಪೆಂಡಾಲ್ ಕಳಚಿ ಬಿದ್ದು ಖಾಸಗಿ ವಾಹಿನಿ ಕ್ಯಾಮರಾಮ್ಯಾನ್ ತೀವ್ರ ಗಾಯ. ಓರ್ವ ಪೊಲೀಸ್ ಸಿಬ್ಬಂದಿಯ ಕಾಲಿಗೆ ಗಾಯ ಆಗಿದೆ.


ಪೆಬ್ರವರಿ 14 ರಂದು ನಡೆಯಲಿರೋ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಹಿನ್ನಲೆ. ಹಾವೇರಿ ನಗರದ ಹೊರವಲಯದಲ್ಲಿರುವ ಅಜ್ಜಯ್ಯನ ಗುಡಿ ಹತ್ತಿರ ಸಮಾವೇಶದಲ್ಲಿ ನಡೆದ ಘಟನೆ.
ತಲೆಗೆ ಕಬ್ಬಿಣ ಕಂಬ ಬಿದ್ದು ,ಗಾಯವಾಗಿ ರಕ್ತ ಸೋರುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ವೀಕ್ಷಣೆ ವೇಳೆ ನಡೆದ ಘಟನೆ.ಮಲ್ಲೇಶ ಕಬ್ಬೂರು ತೀವ್ರ ಗಾಯಗೊಂಡ ಖಾಸಗಿ ವಾಹಿನಿ ಕ್ಯಾಮರಾಮ್ಯಾನ್.ಸುರೇಶ ತಳವಾರ 55 ವರ್ಷ ಪೊಲೀಸ್ ಪೇದೆ ASI ಗಾಯಾಳು.ಹಾವೇರಿ ಜಿಲ್ಲಾಸ್ಪತ್ರೆಯ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಊಟದ ವ್ಯವಸ್ಥೆ ಮಾಡಿರುವ ಜಾಗದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಪೆಂಡಲಾ ಹಾಕಿರುವುದೇ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ದಾನಮ್ಮನವರ್ ಭೇಟಿ ಪರಿಶೀಲನೆ ನಡೆಸಿದರು.ಗಾಯಾಳುಗಳ ಆರೋಗ್ಯ ವಿಚಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ…

ವರದಿ: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ