Thursday, February 12, 2026
Homeಜಿಲ್ಲಾ ಸುದ್ದಿಗಳುನಾಳೆ ಅಂಬಿಗರ ಚೌಡಯ್ಯನವರ 906ನೇ ಜಯಂತಿ ಆಚರಣೆ....

ನಾಳೆ ಅಂಬಿಗರ ಚೌಡಯ್ಯನವರ 906ನೇ ಜಯಂತಿ ಆಚರಣೆ….

ದೇವಲಾಪುರ; ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ 906ನೇ ಜಯಂತಿಯನ್ನು ಆಚರಿಸಲು ಅಂಬಿಗ ಸಮಾಜದ ಗುರು, ಹಿರಿಯರು, ಗ್ರಾಮದ ಮುಖಂಡರು ನಿರ್ಧರಿಸಿದ್ದಾರೆ.

ಜಯಂತಿ ಪ್ರಯುಕ್ತ ಬೆಳಗ್ಗೆ 8 ಗಂಟೆಗೆ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಕಾರ್ಯಾಧ್ಯಕ್ಷ ಪ್ರಮೋದ ಮಧ್ವರಾಜರವರ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಮತ್ತು ಬೈಲಹೊಂಗಲ ಶಿವಾನಂದ ಮಠದ ಶ್ರೀ ಮಹದೇವ ಸರಸ್ವತೀ ಮಹಾಸ್ವಾಮಿಗಳ ಜೊತೆಗೆ ಚೌಡಯ್ಯನವರ ಭಾವ ಚಿತ್ರದೊಂದಿಗೆ ಭವ್ಯ ಮೆರವಣಿಗೆ ಸುಮಂಗಲೆಯರ ಕುಂಭಮೇಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ನಡೆಯುತ್ತದೆ.

ಗ್ರಾಮದಲ್ಲಿ ಇರುವ ಗಂಗಾದೇವಿ ದೇವಸ್ಥಾನದಲ್ಲಿ ಸಕಲ ವಾದ್ಯ ಗೋಷ್ಠಿಯೊಂದಿಗೆ ಪೂಜೆ ಪುನಸ್ಕಾರಗಳು ನಡೆಯುತ್ತವೆ ಸರ್ವರೂ ಭಾಗಿಯಾಗಿ ದೇವಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಯನ್ನು ಸಾಮಾಜದ ಹಿರಿಯರು ತಿಳಿಸಿದ್ದಾರೆ

ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಎಲ್ಲ ಅಂಬಿಗ ಸಮಾಜದ ಮುಖ್ಯಸ್ಥ ಮತ್ತು. ಗ್ರಾಮದ ಗುರು ಹಿರಿಯರು ಯುವಕಮಿತ್ರರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಮಾಜದ ಗುರು ಹಿರಿಯರು ಮತ್ತು ಪ್ರಮುಖ ನಾಯಕರು ಕೋರಿದ್ದಾರೆ.

ಸಂಪಾದಕರು – ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ