Monday, February 9, 2026
HomeUncategorizedವಿದ್ಯಾರ್ಥಿಗಳ ಸಮಯ ಪಾಲನೆ ಅವಶ್ಯಕತೆ–ಸುರೇಶ್ ಅರುಣಿ

ವಿದ್ಯಾರ್ಥಿಗಳ ಸಮಯ ಪಾಲನೆ ಅವಶ್ಯಕತೆ–ಸುರೇಶ್ ಅರುಣಿ

ವಿದ್ಯಾರ್ಥಿಗಳು ಸಮಯ ಪಾಲನೆ ಅವಶ್ಯಕತೆ – ಸುರೇಶ್ ಅರುಣಿ ಶಹಾಪುರ- ನಗರದ ಪ್ರತಿಷ್ಠಿತ ಕಾಲೇಜು ಪ್ರಾರ್ಥನಾ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ತಮ್ಮ ಜೀವನದ ಅಮೂಲ್ಯವಾದ ವಸ್ತು ಅಂದರೆ ಅದು ಸಮಯ ಸಮಯ ಸದುಪಯೋಗ ಪಡೆದುಕೊಂಡು ವಿದ್ಯಾಭ್ಯಾಸ ಮಾಡಿ ಹೆಚ್ಚಿನ ಅಂಕಗಳನ್ನು ಪಡೆದು ಕಾಲೇಜು ಕೀರ್ತಿ ಹಾಗೂ ತಮ್ಮ ಜೀವನದ ಗುರಿ ಮುಟ್ಟಬೇಕು, ದೃಷ್ಟ ಚಟಗಳಿಂದ ದೂರ ಉಳಿಯಬೇಕು ಗುರು ಹಿರಿಯರಿಗೆ ಗೌರವ ನೀಡಬೇಕು, ನಿಮ್ಮ ತಂದೆ ತಾಯಿಗಳು ಕಟ್ಟಿರುವ ಕನಸು ನನಸು ಮಾಡಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ ಸಾಮಾಜಿಕ ಹೋರಾಟಗಾರರು ಮಲ್ಲಯ್ಯ ಸ್ವಾಮಿ ಇಟಿಗಿ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಅದನ್ನು ವ್ಯರ್ಥ ಮಾಡಿಕೊಳ್ಳಬಾರದು ಪಠ್ಯಪುಸ್ತಕಗಳ ಬದುಕಿಗಿಂತಲೂ ಮುಖ್ಯವಾಗಿ ಸಮಾಜದಲ್ಲಿ ಬದುಕುವ ತಿಳುವಳಿಕೆ ಅರಿತುಕೊಳ್ಳಬೇಕು, ಜೀವನದಲ್ಲಿ ದೊಡ್ಡ ಮಟ್ಟದ ಗುರಿ ಇಟ್ಟುಕೊಳ್ಳಬೇಕು ಅದಕ್ಕೆ ಸತತ ಪ್ರಯತ್ನ ಓದಿನಿಂದ ಮಾತ್ರ ಸಾಧ್ಯ, ಮೊಬೈಲ್ ಜಗತ್ತಿನಿಂದ ಹೊರಬಂದು ಪುಸ್ತಕದ ಸ್ನೇಹವನ್ನು ಮಾಡಬೇಕು ಅಂದಾಗ ಮಾತ್ರ ನಮ್ಮ ಬದುಕು ಬದಲಾಯಿಸಲು ಸಾಧ್ಯವೆಂದು ತಿಳಿಸಿದರು ಈ ಸಂದರ್ಭದಲ್ಲಿ ಪ್ರಾಂಶುಪಾಲರು ಶಿವರಾಜ್, ದೇವೇಂದ್ರಪ್ಪ ಬಡಿಗೇರ್, ಉಪನ್ಯಾಸಕರಾದ ಮಲ್ಲಿನಾಥ ಬಡಿಗೇರ್, ಮಾನಪ್ಪ ಮುದುಕನ್ ,ರವಿ ಭಂಡಾರಿ, ರವಿಕುಮಾರ್ ಹೊಸಮನಿ , ಸೂಗಪ್ಪ ಸರ್, ಮತ್ತು ಅಮೃತ ಕೋಂಬಿನ್, ಜ್ಯೋತಿ ಮೇಡಂ , ಪ್ರಾರ್ಥನೆ ಹಾಡಿದವರು .ಅಯ್ಯಮ್ಮ ಸ್ವಾಗತ ಮಾಡಿದವರು. ಈರಮ್ಮ ವಂದನಾರ್ಪಣೆ ಮಾಡಿದವರು. ಶೀಲಮ್ಮ ನಿರೂಪಣೆ ಮಾಡಿದವರು. ಜಟ್ಟಪ್ಪ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ