ಶಿಗ್ಗಾಂವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆಯಿಂದ ಭವ್ಯ ಮೆರವಣಿಗೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ವತಿಯಿಂದ ಶಿಗ್ಗಾವಿ ಪಟ್ಟಣದಲ್ಲಿ ಭಕ್ತಿಭಾವದೊಂದಿಗೆ ಮೆರವಣಿಗೆ ಆಯೋಜಿಸಲಾಯಿತು. ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಕಿತ್ತೂರಾಣಿ ಚೆನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಸಮಾಪ್ತಿಯಾಯಿತು.
ಕಾರ್ಯಕ್ರಮಕ್ಕೆ ಜಾರಕಿಹೊಳಿ ಆಪ್ತರಾದ ಶ್ರೀ ಏಳುಕೋಟೆಪ್ಪ ಪಾಟೀಲ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಭರತ್ ಬೊಮ್ಮಾಯಿ, ಶಿಗ್ಗಾವಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡಪ್ಪ ಜಲದಿ, ತಾಲ್ಲೂಕು ಗ್ಯಾರೆಂಟಿ ಆಗಮಿಸಿದರು.
ಕಾರ್ಯಕ್ರಮವು ಸಂತೋಷ್ ಚಾಕಲಬ್ಬಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು, ಅತಿಥಿಗಳಾಗಿ ಶೇಖಪ್ಪ ಮನಕಟ್ಟಿ ಪಕೀರಪ್ಪ ಕುಂದೂರು, ಚಂದ್ರು ಕೋಡ್ಲಿವಾಡ, ಮಾಹಂತೇಶ ಕಂಕನವಾಡ, ಚಂದ್ರಣ್ಣ ಹೆಬ್ಬಾಳ, ಗೌಸ್ಕಾನ್ ಮುನ್ಸಿ, ಅಣ್ಣಪ್ಪ ಲಮಾಣಿ, ಮಂಜನಾಥ ಮಣ್ಣಣ್ಣವರ್, ಬಸವರಾಜ್ ದೊಡ್ಮನಿ, ಸೋಮಣ್ಣ ಶಿಗ್ಗಾವಿ, ಪೀರ್ ಸಾಬ್ ನದಾಫ್, ಶಿವಾನಂದ್ ಚಾಕಲಬ್ಬಿ, ತಿಪ್ಪಣ್ಣ ಮೀಶಿ, ಫಕೀರೇಶ ಹರಿಜನ, ಸಂತೋಷ್ ಲಚಮಣ್ಣವರ್, ನೀಲಪ್ಪ ಬಸನಾಳ, ಸಂತೋಷ್ ಇಂಗಳಗಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿಗಾರರು: ಸೋಮಶೇಖರ ಲಮಾಣಿ
