Friday, March 27, 2026
Homeಜಿಲ್ಲಾ ಸುದ್ದಿಗಳುಯುವಸಂಗಮ - 2026 ಕಾರ್ಯಕ್ರಮವನ್ನು ಆಯೋಜನೆ..

ಯುವಸಂಗಮ – 2026 ಕಾರ್ಯಕ್ರಮವನ್ನು ಆಯೋಜನೆ..

ಮುಂಡಗೋಡ: ಜನೇವರಿ 2026 ರಂದು ಲೊಯೋಲ ವಿಕಾಸ ಕೇಂದ್ರ ಮುಂಡಗೋಡ ಹಾಗೂ ಯುವರತ್ನ ಯುವ ಒಕ್ಕೂಟ ಸಂಯುಕ್ತ
ಆಶ್ರಯದಲ್ಲಿ “ಯುವಸಂಗಮ – 2026” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅದರ ಅಂಗವಾಗಿ ಯುವಕ ಮತ್ತು ಯುವತಿಯರಿಗೆ
ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನ ತರಭೇತಿ, ಕ್ರೀಡೆ, ಮನರಂಜನಾ ಕಾರ್ಯಕ್ರಮ ಹಾಗೂ ವಿನೋದ ವಿಹಾರ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ತರಬೇತಿಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

“ಯುವಸಂಗಮ” ಕಾರ್ಯಕ್ರಮವನ್ನು ಉದ್ಘಾಟಕರಾಗಿ ಆಗಮಿಸಿದಂತಹ ವಂದನೀಯ ಸಿ|| ಸೋನಿಯಾ ಡಿ’ಸೋಜ ಜ್ಯೋತಿ
ಸಮಾಜ ಸೇವಾ ಸಂಸ್ಥೆ ಮುಂಡಗೋಡ ಅವರು ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಫಾ. ಅಲ್ವೀನ್ ಡಿ’ಸೋಜ, ನಿರ್ದೇಶಕರು, ಸಿದ್ದಿ ಸಮುದಾಯ ಅಭಿವೃದ್ಧಿ
ಮುಂಡಗೋಡ ಅವರು ಮಾತನಾಡುತ್ತ ಎರಡು ದಿನದ ತರಬೇತಿ, ಕ್ರೀಡೆ, ಮನರಂಜನಾ ಕಾರ್ಯಕ್ರಮ ಹಾಗು ವಿನೋದ ವಿಹಾರ
ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಬಾಗವಹಿಸಿ ಹೆಚ್ಚಿನ ವಿಷಯಗಳನ್ನು ತಿಳಿದು ಮುಂಡಗೋಡ ತಾಲೂಕಿನಲ್ಲಿ ಯುವಕ ಯುವತಿಯರು
ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು. ಯುವ ಶಕ್ತಿ ದೇಶದ ಶಕ್ತಿ ಇದರಿಂದ ಎನ್ನನ್ನಾದರೂ ಬದಲಾವಣೆ ಮಾಡಬಹುದು ಅದನ್ನು ನಾವು ದೇಶಕ್ಕೆ ನಮ್ಮ ನಾಡಿಗೆ ಕೀರ್ತಿ ತರುವವಂತಹ ಕೆಲಸ ಮಾಡುವಂತಾಗಬೇಕೆಂದರೆ ಇಂತಹ ತರಭೇತಿ ಕಾರ್ಯಾಗಾರದಲ್ಲಿ ಮಾಡಬೇಕು ಎಂದು ತಿಳಿಸುತ್ತಾ ಕಾರ್ಯಕ್ರಮದ ಯಶಸ್ಸಿಯಾಗಲಿ ಎಂದು ಶುಭಾಶಯವನ್ನು ಕೋರಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದಂತಹ ಬ್ರ|| ಕಿರಣ ಬ್ರಾಂಕೋ, ಮೇಲ್ವಿಚಾರಕರು ಲೊಯೋಲ ವಸತಿ ನಿಲಯಗಳು
ಮುಂಡಗೋಡ ಅವರು ಮಾತನಾಡುತ್ತ ಕೆರೆಯಲ್ಲಿ ಒಂದು ಕಲ್ಲನ್ನು ಎಸೆದಾಗ ಅಲೆಗಳು ಉತ್ಪತ್ತಿಯಾಗುತ್ತ ದಡವನ್ನು ಸೇರುತ್ತವೆ.
ಹಾಗೆಯೇ ತಾವುಗಳೆಲ್ಲರೂ ತರಬೇತಿಯಲ್ಲಿನ ವಿಷಯಗಳನ್ನು ತಿಳಿದು ಅಲೆಗಳಂತೆ ಒಳ್ಳೆಯ ವಿಚಾರಗಳನ್ನು ಬೆಳೆಸಿಕೊಂಡು ದಡಕ್ಕೆ
ಸೇರುವಂತಾಗಲಿ ಎಂದು ಶುಭ ಹಾರೈಸಿದರು.
ಇಂದಿನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿಧ್ಯಾನಿಕೇತನ ದಾರವಾಡದ ಫಾ|| ಧೀರಜ್ ಡಿ”ಸೋಜ ಅವರು ಮಾತನ್ನಾಡುತ್ತಾ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಪ್ರಶ್ನೋತ್ತರ, ಆಟ ಹಾಗೂ ಚಟುವಟಿಕೆಗಳ ಮೂಲಕ ತರಭೇತಿ ನೀಡಿದರು. ಮೊದಲು ಪರಸ್ಪರ ಪರಿಚಯ, ಚಟುವಟಿಕೆ, ಸಲಹೆ ಸೂಚನೆ ಪಾಲನೆ ಮಾಡಬೇಕು. ಮತ್ತೊಬ್ಬರನ್ನು ಸೋಲಿಸದೆ ಜೊತೆಯಾಗಿ ಜಯಿಸಬೇಕು, ಮತ್ತೊಬ್ಬರನ್ನು ನೋಯಿಸದೆ ಜೊತೆಯಾಗಿ ಸೇರಿ ಕೆಲಸ ಮಾಡಬೇಕು ಭಾರತದ ನೈಜ ಪರಿಸ್ಥಿತಿಯನ್ನು ಅರಿತು ಬಡಜನರ ಬಗ್ಗೆ ಕಾಳಜಿ ವಹಿಸಬೇಕು. ಆಮಿಷಕ್ಕೆ ಒಳಗಾಗದೆ ಒಗ್ಗಟ್ಟಿನಲ್ಲಿ ಮುನ್ನುಗ್ಗಬೇಕು ಮತ್ತು ಏಕತೆ ಪ್ರಾಮಾಣಿಕತೆ ಹಾಗೂ ಸಾಮಾಜಿಕ ಸೌಹಾರ್ದತೆ ಕುರಿತು ಗುಂಪಿನಲ್ಲಿ ಚರ್ಚೆ ಮಾಡುವಂತೆ ತಿಳಿಸಿ ಜಾತಿ, ಧರ್ಮ, ಹೆಣ್ಣು ಗಂಡು ಎಂಬ ಬೇಧಬಿನ್ನ ಮಾಡದೆ ಎಲ್ಲರೂ ಏಕತಾ ಭಾವನೆಯಿಂದ ಸಾಗಬೇಕೆಂದು ತಿಳಿಸಿದರು.ಎರಡು ದಿನದ ಕಾರ್ಯಗಾರದಲ್ಲಿ ಒಟ್ಟೂ 52 ಯುವಕ ಯುವತಿಯರು ಹಾಗೂ ಎಲ್ ವಿ ಕೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು ಅಂಬೇಡ್ಕರ್ ಜಾಗೃತಿ ಹಾಡನ್ನು ಹಾಡಿದರು. ಭೂಮಿಕಾ ಲಚ್ಚಿ ಅವರು ಸ್ವಾಗತಿಸಿದರು.ಪುನೀತ್ ಸನವಳ್ಳಿ ಅವರು ಸಂವಿಧಾನವನ್ನು ಪೀಠಿಕೆ ವಾಚಿಸಿದರು. ಭರಮಣ್ಣ ಚಕ್ರಸಾಲಿ ಅವರು ವಂದಿಸಿದರು. ಮಂಗಳಾ ಮೋರೆ ಅವರು ನಿರೂಪಿಸಿದರು…ಶಿಬಿರಾರ್ಥಿಗಳಿಗೆ ತರಬೇತಿ ಮೌಲ್ಯ ಮಾಪನ ವನ್ನು ಲಕ್ಷ್ಮಣ ಮುಳೆ ರವರು ನಡೆಸಿದರು.

ಹೆಚ್ಚಿನ ಸುದ್ದಿ