ಧಾರವಾಡ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ ) ಧರ್ಮಸ್ಥಳ, ಜಿಲ್ಲಾ ಜನ ಜಾಗೃತಿ ವೇದಿಕೆ ಟ್ರಸ್ಟ್ (ರಿ)ಧಾರವಾಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (,ರಿ) ಧಾರವಾಡ. ಇವುಗಳ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಆರು ಜಿಲ್ಲಾ ಜನಜಾಗೃತಿ ವೇದಿಕೆಗಳ ಅಧ್ಯಕ್ಷರು, ನಿಕಟ ಪೂರ್ವ ಅಧ್ಯಕ್ಷರುಗಳು, ಮಾಜಿ ಅಧ್ಯಕ್ಷರುಗಳ ಸಭೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಾದ ನಟರಾಜ ಬಾದಾಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗಡೆಯವರು ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈಗೊಂಡ ಮಧ್ಯವರ್ಜನ ಶಿಬಿರಗಳು, ಯುವ ಜನತೆ ದುಶ್ಚಟಗಳಿಗೆ ಬಲಿಯಾಗದಂತೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮಾದಕ ಮತ್ತು ತಂಬಾಕು ವಿರೋಧಿ ದಿನ, ನವ ಜೀವನೋತ್ಸವ ಕಾರ್ಯಕ್ರಮ, ನವ ಜೀವನ ಸಮಿತಿಗಳು, ಪಾನ ಮುಕ್ತರ ಅಭಿನಂದನೆ, ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆದು ಈ ಎಲ್ಲಾ ಕಾರ್ಯಕ್ರಮಗಳು ರಾಜ್ಯದ್ಯಂತ ಅನುಷ್ಠಾನವಾಗಲು ಸುಮಾರು ಎಂಟು ಕೋಟಿ ರೂಪಾಯಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಸಭೆಗೆ ತಿಳಿಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದ ವಿವೇಕ್ ವಿ ಪಾಯಸ್ ರವರು ಜನಜಾಗೃತಿ ವೇದಿಕೆ ಹುಟ್ಟಿ- ಬೆಳೆದು ಪ್ರಸ್ತುತ ವೇದಿಕೆ ಬಲ ಗೊಂಡ ರೀತಿಯ ಬಗ್ಗೆ ತಿಳಿಸಿ ಜನಜಾಗೃತಿ ಸದಸ್ಯರುಗಳು ಫಲಾಪೇಕ್ಷ ಇಲ್ಲದೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸೇವೆ ಎನ್ನುವ ರೀತಿಯಲ್ಲಿ ಸೇವೆ ಮಾಡುತ್ತಿರುವ ಪ್ರಾದೇಶಿಕ ವ್ಯಾಪ್ತಿಯ 245 ಮಂದಿಯ ಸೇವೆಯನ್ನು ಸ್ಮರಿಸಿ ಅಭಿನಂದಿಸಿ ಜನಜಾಗೃತಿ ಸದಸ್ಯರ ಮಹತ್ವವನ್ನು ತಿಳಿಯಪಡಿಸಿದರು.
ಸಭೆಯಲ್ಲಿ ನಿಕಟಪೂರ್ವ ರಾಜ್ಯ ಸಂಘಟನಾ ಅಧ್ಯಕ್ಷರಾದ ರಾಜಣ್ಣ ಮೂ ಕೊರವಿಯವರು ಧರ್ಮಸ್ಥಳ ಹೆಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಯೋಜನೆಯ ಮತ್ತು ಜನಜಾಗೃತಿಯ ಕಾರ್ಯಕ್ರಮಗಳು ಸಮಾಜಕ್ಕೆ ವರವಾಗಿದೆ ಇವುಗಳ ಸದುಪಯೋಗ ಗಳನ್ನು ಸಮಾಜಕ್ಕೆ ಮುಟ್ಟಿಸಲು ಜನಜಾಗೃತಿ ಸದಸ್ಯರಾದ ನಾವೆಲ್ಲರೂ ಕೈಜೋಡಿಸಬೇಕು ಎಂದು ಸಲಹೆಯನ್ನು ನೀಡಿದರು. ವೇದಿಕೆಯಲ್ಲಿ ಧಾರವಾಡ ಜಿಲ್ಲಾ ಅಧ್ಯಕ್ಷರಾದ ವಸಂತ ಅರ್ಕಾಚಾರ್ಯ, ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ, ಜನ ಜಾಗೃತಿಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಉಪಸ್ಥಿತರಿದ್ದರು.
ಗೋಕಾಕ ಜಿಲ್ಲೆಯ ನಾಗಲಿಂಗ ಪೋತೇದಾರ್, ಸೋಮಶೇಖರ್ ಮುಗುದುಮ್, ಅಶೋಕ್ ಕುಲಗೋಡು, ಸುಭಾಷ್ ಹನಸಿ, ಮಹಾಂತೇಶ ಹಾಳಾಜೆ, ಚಿಕ್ಕೋಡಿಯ ಶ್ರೀಪಾದ ಮುನವಳ್ಳಿ, ಅಥಣಿಯ ಅಮರ್ ದುರ್ಗಣ್ಣನವರ್, ಸಂಜಯ್ ನಾಡಗೌಡ, ಬೆಳಗಾಂ ಜಿಲ್ಲೆಯ ಬಸವರಾಜ ಸೊಪ್ಪಿನ ಮಠ, ಚಾರು ಕೀರ್ತಿ ಸುಕುಮಾರ ಸೈಬಣ್ಣನವರ್, ಧಾರವಾಡದ ಫಿರಾಜ್ ಖಂಡೇಕರ್, ಸಂತೋಷ್ ಆರ್ ಶೆಟ್ಟಿ , ಹಾವೇರಿಯ ಮುರುಗೇಶಪ್ಪ ಶೆಟ್ಟರ್ ಸಲಹೆಗಳನ್ನು ನೀಡಿ ರಾಜ್ಯ ಸರಕಾರವು ಪ್ರಸ್ತುತ ಮಧ್ಯದಂಗಡಿಗಳ ನವೀಕರಣಕ್ಕಾಗಿ ಕೈಗೊಂಡ ಕ್ರಮದ ಬಗ್ಗೆ ಪ್ರಸ್ತಾಪಿಸಿ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಯಿತು.
ವೇದಿಕೆಯ ಜಿಲ್ಲಾ ಕಾರ್ಯದರ್ಶಿಗಳಾದ ಸತೀಶ್ ನಾಯ್ಕ್, ವಿಠಲ ಸಾಲಿಯಾನ್, ಲವಕುಮಾರ್, ಶ್ರೀಮತಿ ನಾಗರತ್ನ ಹೆಗಡೆ, ಹನುಮಂತ ನಾಯ್ಕ್ ಜಿಲ್ಲಾ ಸಾಧನ ವರದಿಯನ್ನು ಮಂಡಿಸಿದರು. ಸಭೆಯನ್ನು ನಡೆಸಲು ಉತ್ತಮ ರೀತಿಯ ಮಾರ್ಗದರ್ಶನ ನೀಡಿ ಆಗಮಿಸಿದ ಎಲ್ಲರನ್ನು ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಶೀಲ ಸ್ವಾಗತಿಸಿದರು, ಜನಜಾಗೃತಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಭಾಸ್ಕರ್ ನಿರೂಪಿಸಿದರು. ಮೇದಪ್ಪ ಗೌಡ, ಅಶೋಕ್, ಗಣೇಶ್ ನಾಯ್ಕ್, ಉಮೇಶ್ ಹಡಗಲಿ, ಶ್ರೀಮತಿ ಸ್ವಾತಿ ಸಹಕರಿಸಿದರು.
ಸಂಪಾದಕರು: ರಾಮಚಂದ್ರಪ್ಪ ಪೂಜೇರ
