Monday, February 9, 2026
HomeUncategorizedಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ). ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬರುವ ತಾಲೂಕು ಮಟ್ಟದ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ). ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬರುವ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟನೆ.

ಹುಬ್ಬಳ್ಳಿ: ಡಾ. ವೀರೇಂದ್ರ ಹೆಗ್ಗಡೆಯವರ ಸಹೋದರಿ ಮಾತೃಶ್ರೀ ಶ್ರೀಮತಿ ಪದ್ಮಲತಾ ನಿರಂಜನ ಧರ್ಮಸ್ಥಳ ಕಳಂಕಿತ ಮುಕ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


     ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಹುಬ್ಬಳ್ಳಿ ತಾಲೂಕಿನ ಶ್ರೀ ಸಿದ್ದಾರೂಢ ಸ್ವಾಮಿ ಮಠದ ಕಲ್ಯಾಣ ಮಂಟಪದಲ್ಲಿ ದಿನಾಂಕ:29.12.2025 ರಂದು ಜ್ಞಾನವಿಕಾಸಕಾರ್ಯಕ್ರಮದಡಿಯಲ್ಲಿ ಬರುವ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಮಾತೃಶ್ರೀ ಶ್ರೀಮತಿ ಪದ್ಮಲತಾ ನಿರಂಜನಕುಮಾರ- ಶ್ರೀ ವೀರೇಂದ್ರ ಹೆಗ್ಗಡೆಯವರ ಸಹೋದರಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸತ್ಯಮೇವ ಜಯತೆ ಎಂಬ ಸಂದೇಶವನ್ನು ನೀಡುತ್ತಾ ಪರಮ ಪೂಜ್ಯ ಡಾ.ಡೀ ವೀರೇಂದ್ರ ಹೆಗ್ಗಡೆಯವರು ಕ್ಷೇತ್ರ ಧರ್ಮವನ್ನು ಯಾವ ರೀತಿಯಲ್ಲಿ ಸಮಾಜಕ್ಕೆ ಬಿತ್ತಿರಿಸಿದರು ಎಂಬುದನ್ನು ಗುರು ಶಿಷ್ಯರ ಕಥೆಯನ್ನು ಹೇಳುವುದರ ಮೂಲಕ ತಿಳಿಸಿದರು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವೇ ನಮ್ಮನ್ನು ಕಾಯುತ್ತದೆ, ಪೂಜ್ಯರು ಮಾಡುತ್ತಿರುವ ಸಮಾಜಮುಖಿ ಸೇವೆಗಳ ಆಳ, ಒಳ ವಿಸ್ತಾರದ ಬಗ್ಗೆ ತಿಳಿಸಿದರು.  ಧರ್ಮಸ್ಥಳಕ್ಕೆ ದುಷ್ಟಶಕ್ತಿಗಳಿಂದ ಸುಳ್ಳು ಆರೋಪ ಮಾಡಿ ಅವಹೇಳನ ಮಾಡಲು ಪ್ರಯತ್ನಿಸಿದರೂ ಪೋಲೀಸ್‌ ಇಲಾಖೆಯವರು ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿ ಆರೋಪ ಮುಕ್ತವಾಗಿದೆ. ಇಂದು ಧರ್ಮಸ್ಥಳ  ಆರೋಪಮುಕ್ತ ಕ್ಷೇತ್ರವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಈ ಸಂಧರ್ಭದಲ್ಲಿ ಧರ್ಮಸ್ಥಳದ ನಿಷ್ಠಾವಂತ ಕಾರ್ಯಕರ್ತರುಗಳು, ಭಕ್ತರು, ಪೂಜ್ಯರ ಅಭಿಮಾನಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಧರ್ಮಸ್ಥಳದ ಪರವಾಗಿ ನಿಂತರು ಇದು ಶ್ಲಾಘನೀಯ ಮತ್ತು ಅಭಿನಂದನಾರ್ಹ ಎಂದು ತಿಳಿಸಿದರು. ಹಾಗೂ ನಮ್ಮ ಅಣ್ನಾಜಿ ಅವರು ಕ್ಷೇತ್ರವನ್ನು ಮುನ್ನಡೆಸುವ ಜೊತೆಗೆ ಸಮಾಜದಲ್ಲಿರುವ ಅಸಹಾಯಕ ಆರ್ಥಿಕವಾಗಿ ಹಿಂದುಳಿದಂಥವರಿಗೆ ಅಭಿವೃದ್ಧಿ ಪಡಿಸಲು ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಕೊಡಿಸುವುದರ ಮೂಲಕ ಜನರ ಏಳಿಗೆಗೆ ಶ್ರಮಿಸಿರುತ್ತಾರೆ. ಸರಿಯಾಗಿ ಸದುಪಯೋಗ ಪಡೆಸಿಕೊಂಡು ಕ್ರಮವತ್ತಾಗಿ ಮರುಪಾವತಿ ಮಾಡಿರಿ ನಿಮ್ಮ ಸಂಸ್ಥೆಯನ್ನು ಬೆಳೆಸುವುದರ ಮೂಲಕ ಎಲ್ಲರೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿರಿ. ಸುಮಾರು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಲವಲವಿಕೆ ಚಟುವಟಿಕೆಯಿಂದ ಭಾಗವಹಿಸಿರುವುದು ತುಂಬ ಸಂತೋಷ ತಂದಿದೆ. ಎಲ್ಲರಿಗೂ ಶುಭವಾಗಲಿ ಎಂದು ಮಂಜುನಾಥ ಸ್ವಾಮಿಗೆ ಪ್ರಾರ್ಥಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ದಯಾಶೀಲ-ಪ್ರಾದೇಶಿಕ ನಿರ್ದೇಶಕರು ಧಾರವಾಡ ರವರು ಯೋಜನೆಯ ಕಾರ್ಯಕ್ರಮಗಳು ಯೋಜನೆ ನಡೆದು ಬಂದ ದಾರಿ, ಪೂಜ್ಯರು ಕೈಗೊಂಡ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಶ್ರೀ ಎಮ್. ಎಸ್‌ ಸಿಂಧೂರ-ಪೋಲಿಸ್‌ ನೀರಿಕ್ಷರು ಮಾತನಾಡಿ ಧರ್ಮಸ್ಥಳ ನಮ್ಮೆಲ್ಲರ ಆಸ್ತ , ಹೆಣ್ಣುಮಕ್ಕಳು ವೃತ್ತಿ ಜೀವನದೊಂದಿಗೆ ಕೌಟುಂಬಿಕ ನಿರ್ವಹಣೆಯನ್ನು ಮತ್ತು ಮಕ್ಕಳ ಬಗ್ಗೆ ಜಾಗೃತಿಯನ್ನು ಯಾಔ ರೀತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.ಶ್ರೀ ಕ್ಚೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕಿನ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಸುತ್ತಿದ್ದು ಬ್ಯಾಂಕುಗಳ ಮೂಲಕ ಅಗತ್ಯವಿರುವ ಸದಸ್ಯರಿಗೆ ಸಂಸ್ಥೆ ಜಾಮಿನು ಆಗಿ ಸಾಲ ಒದಗಣೆ ಮಾಡುತ್ತಿದೆ ಇದನ್ನು ಸರಿಯಾಗಿ ನೀವೇ ಉಪಯೋಗಿಸಿಕೊಳ್ಳಿ ನಿಮ್ಮ ಹೆಸರಿನಿಂದ ಸಾಲ ಪಡೆದು ಬೇರೆಯವರಿಗೆ ನೀಡಬೇಡಿ. ಪಡೆದ ಸಾಲವನ್ನು ಕ್ರಮವತ್ತಾಗಿ ಮರುಪಾವತಿ ಮಾಡಿರಿ. ಧರ್ಮಸ್ಥಳ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಜನರಿಗೆ ಸಹಕಾರ ನೀಡುತ್ತಿದೆ.ಸದುಪಯೋಗ ಪಡೆಸಿಕೊಳ್ಳಿ ಎಂದು ಕರೆ ನೀಡಿದರು.
ಡಾ.ನೇತ್ರಾವತಿ ಗಬ್ಬೂರ- ಸಹಾಯಕ ಪ್ರಾಧ್ಯಾಪಕರು, ಕೆ.ಎಲ್.ಇ ಸಂಸ್ಥೆಯ ಜೆ.ಜಿ ವಾಣಿಜ್ಯ ಮಹಾವಿದ್ಯಾಲಯ, ಹುಬ್ಬಳ್ಳಿ ರವರು ಭಾಗವಹಿಸಿ ಮಾತನಾಡಿ ಆಧುನಿಕ ಯುಗದಲ್ಲಿ ಕುಟುಂಬ ಹಾಗೂ ಸಾಮಾಜಿಕ ಜೀವನದಲ್ಲಿ ಮಹಿಳೆಯರ ಪಾತ್ರದ ಕುರಿತು ಸಭಿಕರಿಗೆ ಮಾಹಿತಿ ನೀಡಿದರು. ಮಕ್ಕಳನ್ನು ಮೊಬೈಲ ಬಳಕೆಯಿಂದ ದೂರವಿರಿಸುವಂತೆ, ಮಹಿಳೆಯರು ವೃತ್ತಿಜೀವನದೊಂದಿಗೆ ಕುಟುಂಬವನ್ನು ಯಾವ ರೀತಿ ನಿರ್ವಹಿಸಬೇಕು, ಮಕ್ಕಳಿಗೆ ಯಾವ ರೀತಿ ಸಂಸ್ಕಾರ ನೀಡಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು ಹಾಗೂ ಸಭಿಕರೊಂದಿಗೆ ಸಂವಾದ ನಡೆಸಿದರು.
ಶ್ರೀಮತಿ ಶ್ರೀಮತಿ ಮಂಗಳಮ್ಮ ಗೌರಿ- ಸದಸ್ಯರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ವಾರ್ಡ ನಂ.34) ರವರು ಸಭೆಯ ಅದ್ಯಕ್ಷತೆ ವಹಿಸಿ ಧರ್ಮಸ್ಥಳ ಅತ್ಯತ್ತಮ ಕಾರ್ಯಗಳನ್ನು ಮಾಡುತ್ತಿದ್ದು ಇದು ಶ್ಲಾಘನೀಯ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಸಮಾಜ ಸೇವೆ ಮಾಡಲು ಇನ್ನಷ್ಟು ಆಯುಷ್ಯ ಮತ್ತು ಶಕ್ತಿ ನೀಡಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಹನುಮಂತ ನಾಯ್ಕ ಜಿಲ್ಲಾ ನಿರ್ದೇಶಕರು ಧಾರವಾಡ ರವರು ಉಪಸ್ಥಿತರಿದ್ದರು. ಮತ್ತು ಸದ್ಗುರು ಶ್ರೀ ಸಿದ್ದಾರೂಢಮಠ ಟ್ರಸ್ಟಿನ ವೈಸ್‌ ಚೆರಮನ್‌ ಆದ ಶ್ರೀ ವಿನಾಯಕ ಘೋಡಕೆ ರವರು ಉಪಸ್ಥಿತರಿದ್ದರು. ಪ್ರಾದೇಶಿಕ ಕಛೇರಿಯ ಜ್ಞಾನವಿಕಾಸ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. SDMಆಸ್ಪತ್ರೆಯ PROನಾರಾಯಣಕುಮಾರರವರು ಉಪಸ್ಥಿತರಿದ್ದರು.

ಹುಬ್ಬಳ್ಳಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಲೀಲಾಮೂರ್ತಿ ಚೌಟೇರ್‌ ಇವರು ಪ್ರಾಸ್ಥಾವಿಕದೊಂದಿಗೆ ಸಭಿಕರನ್ನು ಸ್ವಾಗತಿಸಿದರು.ಮೇಲ್ವಿಚಾರಕರಾದ ಶ್ರೀಮತಿ ನೇತ್ರಾವತಿ ರವರು ನಿರೂಪಿಸಿದರು. ಮಹಿಳಾ ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ರೇಣುಕಾ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸದಸ್ಯರಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಸಲಾಯಿತು.

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ