ಗಂಗಾವತಿ ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಲಯನ್ಸ್ ಅನುದಾನಿತ ಶಾಲೆಯ ಶಿಕ್ಷಕಿ ಶ್ರೀಮತಿ ಭಾಗ್ಯಮ್ಮ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಹೆಮ್ಮೆಗುರಿಯ ವಿಷಯವಾಗಿದೆ. ತಮ್ಮ ಸಮರ್ಪಿತ ಸೇವೆ, ಶೈಕ್ಷಣಿಕ ನಿಷ್ಠೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದತ್ತ ತೋರಿದ ತ್ಯಾಗಮಯ ಶ್ರಮಕ್ಕೆ ಈ ಪ್ರಶಸ್ತಿ ಸಾರ್ಥಕ ಗೌರವವಾಗಿದೆ.
ಈ ಸನ್ಮಾನದ ಕಾರ್ಯಕ್ರಮವು ಕನಕಗಿರಿ ಯಲ್ಲಿಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ ತಂಗಡಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶಿಕ್ಷಕಿ ಭಾಗ್ಯಮ್ಮ ಅವರಿಗೆ ಶಾಲು,ಪ್ರಶಸ್ತಿಯ ಪಟ, ಪುಷ್ಪಹಾರ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು. ಅವರು ಮಾತನಾಡಿ – “ಶಿಕ್ಷಕರು ಸಮಾಜದ ಕಣ್ಮಣಿಗಳು. ಅವರ ಶ್ರಮದಿಂದಲೇ ವಿದ್ಯಾರ್ಥಿಗಳ ಜೀವನ ರೂಪುಗೊಳ್ಳುತ್ತದೆ. ಭಾಗ್ಯಮ್ಮ ಅವರಂತಹ ಶಿಕ್ಷಕರು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಂತಿದ್ದಾರೆ” ಎಂದು ಹೃದಯಸ್ಪರ್ಶಿ ಮಾತುಗಳ ಮೂಲಕ ಅಭಿನಂದಿಸಿದರು.
ಈ ಸಮಾರಂಭದಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದು, ಶ್ರೀಮತಿ ಭಾಗ್ಯಮ್ಮ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿಗಳ ಪರವಾಗಿ ಮಾತಾಡಿದವರು – “ಮೆಡಮ್ ಅವರ ಮಾರ್ಗದರ್ಶನದಲ್ಲಿ ನಾವು ಕೇವಲ ಪಾಠ ಪುಸ್ತಕದ ಜ್ಞಾನವಷ್ಟೇ ಅಲ್ಲ, ಜೀವನದಲ್ಲಿ ಮನುಷ್ಯನಾಗುವ ಮೌಲ್ಯಗಳನ್ನೂ ಕಲಿಯುತ್ತಿದ್ದೇವೆ” ಎಂದು ತಮ್ಮ ಹೃದಯದ ಕೃತಜ್ಞತೆ ವ್ಯಕ್ತಪಡಿಸಿದರು.
ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡ ಪೋಷಕರು, ಸಹೋದ್ಯೋಗಿಗಳು ಹಾಗೂ ಗಣ್ಯರು ಸನ್ಮಾನದ ಈ ಕ್ಷಣವನ್ನು ಸಾಕ್ಷಿಯಾಗಿದ್ದು, ಸಮಾರಂಭವನ್ನು ಇನ್ನಷ್ಟು ಅದ್ಧೂರಿಯನ್ನಾಗಿಸಿದರು. ಹೂವಿನ ಅಲಂಕಾರ, ಕೇಕೆಯ ಹರ್ಷಧ್ವನಿ ಮತ್ತು ಅಭಿನಂದನೆಯ ಚಪ್ಪಾಳಿಗಳ ನಡುವೆ, ಭಾಗ್ಯಮ್ಮ ಶಿಕ್ಷಕಿಯವರ ಸಾಧನೆ ಶಿಕ್ಷಣ ಲೋಕದಲ್ಲಿ ಮಾದರಿಯಾಗಿಯೇ ಉಳಿಯುವಂತಾಯಿತು.
ಶಿಕ್ಷಕರ ತ್ಯಾಗ, ನಿಷ್ಠೆ ಮತ್ತು ಸಮಾಜಸೇವೆಗೆ ಸಮಾಜ ನೀಡಿದ ಗೌರವವಾಗಿ ಈ ಪ್ರಶಸ್ತಿ ನಿಜಕ್ಕೂ ಪ್ರೇರಣೆಯ ದೀಪವಾಗಿದೆ.
ವರದಿ-ವಿಠ್ಠಲ.ಮಟ್ಟೂರ .
