ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಭಕ್ತ ಕನಕದಾಸ ವೃತ್ತದಲ್ಲಿ ಇಂದು ಭಕ್ತ ಕನಕದಾಸರ 537 ವರ್ಷದ ಜಯಂತಿಯನ್ನು ಅದ್ದೂರಿಯಗಿ ಆಚರಣೆ ಮಾಡಲಾಯಿತು.
ಭಕ್ತ ಕನಕದಾಸ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷ ಸಣ್ಣ ಹೈಯ್ಯಾಳಪ್ಪ ಪೂಜಾರಿ ಅವರು ಭಕ್ತ ಕನಕದಾಸ ವೃತ್ತಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲ್ಲಾಪುರ, ರಮೇಶ ಭಟ್ರು,ಬಸಪ್ಪ ಕಟ್ಟಿಮನಿ,ಗುಂಡಪ್ಪ ಗುರಿಕಾರ್,ಮರಿಯಪ್ಪ ಕಾಂಗ್ರೆಸ್, ಪಿಡ್ಡಣ್ಣ ನಾಯಕ,ಶರಣು,ನಾಗರಾಜ್ ಚನ್ನಪಟ್ಟಣ, ನಿಂಗಪ್ಪ ಕೋಳೂರ್,ಹುಸೇನ್ ದಖನಿ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ಬಸವರಾಜ ಹೊಸಮನಿ ಕಕ್ಕೇರಾ

