
ನಾರಾಯಣಪುರ ಎ ಎನ್ ಸಿ ಸಿ ಕ್ರೀಡಾಂಗಣದಲ್ಲಿ ಶ್ರೀ ಗಜಾನನ ಚತುರ್ಥಿ ಅಂಗವಾಗಿ 50 ಕೆಜಿ ಒಳಗಿನ ಯುವಕರಿಗೆ ಹೊನಲು ಬೆಳಕಿನ ಕಬ್ಬಡಿ ಪಂದ್ಯಗವಳಿ ಹಮ್ಮಿಕೊಳ್ಳಲಾಯಿತು.
ಈ ಪಂದ್ಯಾವಳಿಯಲ್ಲಿ ಒಟ್ಟು 20 ತಂಡಗಳ ಒಳಗೊಂಡಿದ್ದು ಅದರಲ್ಲಿ ಪ್ರಥಮ ಸ್ಥಾನವನ್ನು ಗೊನವಟ್ಲ ತಂಡ ಜಯಶಾಲಿ ದ್ವಿತೀಯ ಸ್ಥಾನ ಸ್ಥಳೀಯ ನಾರಾಯಣಪುರ ರಿತೇಶ್ ಎಲೆಕ್ಟ್ರಿಕಲ್ಸ್ ಜಯಶಾಲಿಯಾದರು.

ಪ್ರಥಮ ಬಹುಮಾನವನ್ನು ದಿವಂಗತ ಆಕಾಶ್ ನೀಲಕಂಠ ನಾರಾಯಣಪುರ 4001 ರೂಪಾಯಿ ಹಾಗೂ ಒಂದು ಟ್ರೋಪಿ ನೀಡಿದರು ದ್ವಿತೀಯ ಬಹುಮಾನವನ್ನು ಸೋಮು ಮತ್ತು ಸಲೀಂ ಗೆಳೆಯರ ಬಳಗ 3001 ಒಂದು ಟ್ರೋಪಿ ನೀಡಿದರು.

ಉತ್ತಮ ರೈಡರ್ ದ್ಯಾಮಣ್ಣ ಉತ್ತಮ ಕ್ಯಾಚರ್ ಗದ್ಯಪ್ಪ ನಾರಾಯಣಪುರ ಇವರಿಗೆ ವೈಯಕ್ತಿಕವಾಗಿ ಪ್ರಶಸ್ತಿಯನ್ನು ಮಾರುತಿ ಕನ್ನಳ್ಳಿ ಅವರು ನೀಡಿ ಯುವಕರನ್ನು ಉರಿದುಂಬಿಸಿದರು.

ಇದೇ ಸಂದರ್ಭದಲ್ಲಿ ಶಿವು ಬಿರಾದರ್, ಜಟ್ಟಪ್ಪ ಗೊಳಸಂಗಿ, ವೈ.ಸಿ ಗೌಡ್ರು, ಮಂಜುನಾಥ್ ಹಾದಿಮನಿ, ಕುಮಾರ್, ಅಂಬರೀಶ್, ಸೋಮು, ಶ್ರೀಕಾಂತ್ ಹಾಗೆ ನಿರ್ನಾಯಕರು ದೇವು ಜೋಗಂಡಭಾವಿ, ವೀಕ್ಷಕ ವಿವರಣೆಗಾರ್ ಮಲ್ಲು ಕಿಚ್ಚ 360 , ಸ್ಕೋರರ್ ಜಗದೀಶ್ ಗೊಳಸಂಗಿ ಹಾಗೂ ಇನ್ನಿತರರು ಇದ್ದರು.
ವರದಿಗಾರ : ಶಿವು ರಾಠೋಡ
