Thursday, March 19, 2026
HomeUncategorized19ನೇ ವೃತ ಅಭಿಯಾನ ಹಾಗೂ ಮಾಲಾ ಕಾರ್ಯಕ್ರಮ : ವಿಠಲ್ ಮಾಹಾರಾಜ ಸನ್ನಿಧಿಯಲ್ಲಿ.

19ನೇ ವೃತ ಅಭಿಯಾನ ಹಾಗೂ ಮಾಲಾ ಕಾರ್ಯಕ್ರಮ : ವಿಠಲ್ ಮಾಹಾರಾಜ ಸನ್ನಿಧಿಯಲ್ಲಿ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ತಾಲಬಂಡಿ ತಾಂಡ ಸಮೀಪ ಲಾಲಗಡದಲ್ಲಿ ಸೇವಾಲಾಲ ಗುರುಪೀಠ ಸುಕ್ಷತ್ರ ಇದಾಗಿದ್ದು .ಶ್ರೀ ಯಾಡಿ ಪೌರಾದೇವಿ ಸಂತ ಸೇವಾಲಾಲ್ ಮಾಹಾರಾಜ ಸನ್ನಿಧಿಯಲ್ಲಿ 19ನೇ ವೃತ ಅಭಿಯಾನ ಹಾಗೂ ಮಾಲಾ ಕಾರ್ಯಕ್ರಮ ಜರುಗಿತು.ಪ್ರತಿ ವರ್ಷದಂತೆ ಈ ವರ್ಷವು ಸಹ ಸನ್ನಿಧಿಯಲ್ಲಿ ಪುರುಷ ಮತ್ತು ಮಹಿಳೆಯರು ಸೇರಿ ಸುಮಾರು 50ಕಿಂತ ಹೆಚ್ಚು ಜನರು ಮಾಲೆಯನ್ನು ಸಂತ ಸೇವಾಲಾಲ್ ಮತ್ತು ಶ್ರೀ ವಿಠಲ್ ಮಾಹಾರಾಜ ಹೆಸರಿನಲ್ಲಿ ಮಾಲೆಧರಿಸಿ ದೇವರು ಸೇವೆಯಲ್ಲಿ ತಲೀನರಾಗುತ್ತಾರೆ.ಹಾಗೆ ಈ ಕಾರ್ಯಕ್ರಮದಲ್ಲಿ ನೃತ್ಯ, ಕಲೆ, ಹಾಗೂ ಸಮಾಜ ಸೇವೆಯಲ್ಲಿ ತೊಡಗಿದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು ಜೊತೆಗೆ ನೃತ್ಯವೂ ಜರಗಿತು. ಈ ಸಂಧರ್ಭದಲ್ಲಿ ಮುಖ್ಯ ಅತಿಧಿಯಾಗಿ ಶ್ರೀ ಪರಮಪೂಜ್ಯ ವಿಠಲ್ ಮಾಹರಾಜ, , ಶ್ರೀ ಪರಮಪೂಜ್ಯ ತೇಜುಸಿಂಗ್ ಮಾಹಾರಾಜ ದಂಡ್ ಸೊಲ್ಲಾಪುರ, ಪರಮಪೂಜ್ಯ ಪೋಮು ಮಾಹರಾಜ ಲಿಂಗಸಗೂರು, ಶ್ರೀ ಪರಮಪೂಜ್ಯ ಥಾವು ಮಾಹರಾಜ ಬೈಯಲಾಪುರ ತಾಂಡ, ಶ್ರೀ ಮಾತಾ ಮಾದೇವಿ ಯಾಡಿ ದೇವದುರ್ಗ, ಸುರಪುರ ಶಾಸಕರಾದ ರಾಜಾ ವೇಣುಗೋಪಾಲ ನಾಯಕ, ಒಕ್ಕಲುತನ ಹುಟ್ಟುವಳ್ಳಿ ಮಾರಾಟ ಸಹಕಾರಿ ಅಧ್ಯಕ್ಷರಾದ ರಾಜಾ ಸಂತೋಷ ನಾಯಕ, ಇನ್ನಿತರರು ಇದ್ದರು

ಜಿಲ್ಲಾ ವರದಿಗಾರ : ಶಿವು ರಾಠೋಡ.

ಹೆಚ್ಚಿನ ಸುದ್ದಿ