ಬೆಂಗಳೂರು: 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಯೋಜನೆ ಹಣ ಪಾವತಿಗೆ ತಡೆ ಹಾಕಲಾಗಿದೆ. ಆದಾಯ ತೆರಿಗೆ ಪಾವತಿದಾರರಾಗಿರುವ ಕಾರಣಕ್ಕೆ 1.78 ಲಕ್ಷ ಗೃಹಿಣಿಯರಿಗೆ ಯೋಜನೆಯ ಹಣ ಪಾವತಿಗೆ ಬ್ರೇಕ್ ಬಿದ್ದಿದೆ.ಆದಾಯ ತೆರಿಗೆ ಪಾವತಿಸುತ್ತಿದ್ದರೂ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿ 2 ಸಾವಿರ ರೂ.ಪಡೆಯುತ್ತಿದ್ದಾರೆ. ಅಂತಹವರಿಗೆ ಹಣ ಪಾವತಿ ನಿಲ್ಲಿಸಿ ದಾಖಲೆ ಪರಿಶೀಲಿಸಲು ಚಾಲನೆ ನೀಡಲಾಗಿದೆ. ಇ-ಗವರ್ನೆನ್ಸ್ ಇಲಾಖೆಗೆ ತನಿಖೆ ನಡೆಸಲು ಮಹಿಳಾ ಮತ್ತು ಮಕ್ಕಳ ಇಲಾಖೆ ಕೋರಿದೆ.ಆದಾಯ ತೆರಿಗೆ ಪಾವತಿದಾರರು ಗೃಹಲಕ್ಷ್ಮಿ ಯೋಜನೆ ಅರ್ಹರಲ್ಲ. ಆದರೂ ಯೋಜನೆಗೆ ನೋಂದಾಯಿಸಿ 2000 ಹಣ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ 1.78 ಲಕ್ಷ ಮಹಿಳೆಯರ ಹಣ ಪಾವತಿಯನ್ನು ನಿಲ್ಲಿಸಿ ದಾಖಲೆ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ.