Monday, February 9, 2026
HomeUncategorized೬೯ ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೇರವೇರಿಸಿದ ಯಲ್ಲಪ್ಪ ನಾಯಕ

೬೯ ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೇರವೇರಿಸಿದ ಯಲ್ಲಪ್ಪ ನಾಯಕ

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ನಗರದ ತಹಸೀಲ್ ಕಾರ್ಯಾಲಯಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿರುವ.
ಜಯ ಕರ್ನಾಟಕ ಸಂಘಟನೆ ಧ್ವಜ ಸ್ತಂಬದಲ್ಲಿ ಇಂದು ೬೯ ನೇ ವರ್ಷದ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಯಲ್ಲಪ್ಪ ನಾಯಕ ಅವರು ಧ್ವಜಾರೋಹಣ ಮಾಡಿದರು.
ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ದೇಶಿಸಿ.
  ಯಲ್ಲಪ್ಪ ನಾಯಕ ಕಬಾಡಗೇರಾ ಅವರು
ಮೊಟ್ಟಮೊದಲ ಬಾರಿಗೆ ಕನ್ಮಡಾಭಿಮಾನಿಗಳಿಗೆ ಹಾಗೂ ಕನ್ನಡ ಭಾಷೆಯ ಹಿತೈಷಿಗಳಿಗೆ ಕನ್ನಡ ರಾಜ್ಯೋತ್ಸವ ಹಾರ್ದಿಕ ಶುಭಾಷಯಗಳನ್ನು ಕೋರುತ್ತಾ  ಇಂದು ನಾವು ನಮ್ಮ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನೇರವೇರಿಸುತ್ತಾ ಇದ್ದೇವೆ.
ಕಾರಣ  ಕರ್ನಾಟಕ ಏಕೀಕರಣಕ್ಕಾಗಿ ನಡೆದಂತ ಚಳುವಳಿಯ ಕಿಚ್ಚು ಹೆಚ್ಚಾದಾಗ ೧೯೫೬ ರ ನವೆಂಬರ್ ೧ ರಂದು ಮದ್ರಾಸ್, ಮುಂಬೈ,ಹೈದ್ರಾಬಾದ್, ಪ್ರಾಂತ್ಯದಲ್ಲಿ ಬರುವ ಕನ್ನಡ ಮಾತನಾಡತಕ್ಜಂತ ಒಟ್ಟು ಪ್ರದೇಶಗಳನ್ನಾ ಒಂದುಗೂಡಿಸಿ ಅಖಂಡ ಮೈಸೂರು ಎಂಬ ರಾಜ್ಯ ಉದಯವಾಯಿತು.
ಉತ್ತರ ಕರ್ನಾಟಕ ಭಾಗದ ಜನತೆಯ ಒಳಿತಿಗಾಗಿ ರಾಜ್ಯದ ಹೆಸರನ್ನು ಮೈಸೂರು ಬದಲು ಕರ್ನಾಟಕ ಎಂದು ೧೮೭೩ ರ ಜುಲೈ ತಿಂಗಳಿನಲ್ಲಿ ನಡೆದಂತ ಸುದೀರ್ಘವಾದ ಚಳುವಳಿಯ ಚರ್ಚೆಗಳ ನಂತರ ೧೯೭೩ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆಯನ್ನು ಪಡೆದು ಮೈಸೂರು ರಾಜ್ಯವನ್ನಾ ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಲಾಯಿತು.
ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವುದೇ ಉದ್ಯೋಗದಲ್ಲಿ ಮೊದಲು ಕನ್ನಡಿಗರಿಗೆ ಆದ್ಯತೆ ಕೊಡತಕ್ಕಂತ ಕೆಲಸವಾಗ ಬೇಕು ಎಂದರು ರಾಜ್ಯದಲ್ಲಿರುವ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದಾಗ ಮಾತ್ರ ಕನ್ನಡಪರ ಸಂಘಟನೆಗಳಿಗೊಂದು ಬೆಲೆ ಸಿಕ್ಕಂತಾಗುವುದು ಮತ್ತು ತೆಲುಗು,ತಮಿಳು,ಮರಾಠಿ ಭಾಷಿಗರಂತೆ ನಾವು ಕೂಡಾ ನಮ್ಮ ಹೆಮ್ಮೆಯ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿಸುವಂತಾಗ ಬೇಕು ಬೇರೆ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದಾಗ ಅವರ ಭಾಷೆಗೆ ನಾವು ಯಾರು ಆಕರ್ಷಣೆಯಾಗಬಾರದು ಅವರಿಗೆ ನಮ್ಮ ಕನ್ನಡ ಭಾಷೆಯ ಸೊಬಗನ್ನು ಕಲಿಸಲು ಪ್ರಯತ್ನಿಸ ಬೇಕು ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಯಂಕೋಬ ದೊರೆ ಬೊಮ್ಮನಹಳ್ಳಿ ಹಾಗೂ ಜಯ ಕರ್ನಾಟಕ ಸಂಘಟನೆ ಆಟೋ ಚಾಲಕರ ಘಟಕದ ಅಧ್ಯಕ್ಷ ವೆಂಕಟೇಶ ಡಿ.ಸಿ.ಬಿಚ್ಚಗತ್ತಕೇರಾ,ಪದಾಧಿಕಾರಿಗಳಾದ ಶಿವು ವಕ್ರಾಣಿ,ಸಚಿನ್ ನಾಯಕ,ಪರಶುರಾಮ, ಚಂದ್ರು,ಹಣಮಗೌಡ ರುಕ್ಮಾಪುರ,ಹಮೀದ್ ರಂಗಂಪೇಟ್,ಬಾಬು ಕುಂಬಾರಪೇಟ,ಬಸ್ಸು ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ*

ಹೆಚ್ಚಿನ ಸುದ್ದಿ