ಯಾದಗಿರಿ : ಅಕ್ಟೋಬರ್ ೩೦ ರಂದು ನಡೆಯುವ ಭಾಗ್ಯವಂತಿ ದೇವಿಯ ಜಾತ್ರಾಮಹೋತ್ಸವದ ಕರಪತ್ರವನ್ನು ನಗರದ ಟೋಕರಿ ಕೋಲಿ ಸಮಾಜದ ಜಿಲ್ಲಾ ಕಛೇರಿಯಲ್ಲಿ ಕರಪತ್ರ ಬಿಡುಗಡೆ ಗೊಳಿಸಿ ಮಾತನಾಡಿದ ಪ್ರಾದೇಶಿಕ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಾಮಾಜಿಕ ಹೋರಾಟಗಾರರು ಉಮೇಶ್ ಕೆ ಮುದ್ನಾಳ್. ಯಾದಗಿರಿ ಜಿಲ್ಲೆಯ ಕೊನಯ ಭಾಗದಲ್ಲಿ ಅಂಟಿಕೊಂಡಿರುವ ಜೇವರ್ಗಿ ತಾಲೂಕಿನ ಸುಕ್ಷೇತ್ರ ಹೊನ್ನಳಾ ಗ್ರಾಮದಲ್ಲಿ ಎರಡನೇ ವರ್ಷದ ಅಕ್ಟೋಬರ್ ೩೦ ರಂದು ಶ್ರೀ ಭಾಗ್ಯವಂತಿ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ಬೆಳಿಗ್ಗೆ ಭಾಜಿ ಭಜಂತ್ರಿ ಮೂಲಕ ಗಂಗಾಸ್ಥಾನ, ದೇವಿಯ ಪಲ್ಲಕ್ಕಿ ಮೆರವಣಿಗೆ ನಂತರ ಸಂಜೆ ಭಾಗ್ಯವಂತಿದೇವಿ ವಿಶೆಷ ಪೂಜೆ ನೆರವೆರವುದವು ಇವರಿಂದ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿರುವಂತಹ ದೇವಸ್ಥಾನದ ಕಮಿಟಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಊರಿನ ಗ್ರಾಮದ ಹಿರಿಯರು ಮತ್ತು ಯುವಕರು ಸೇರಿ ಆಯೋಜನೆ ಮಾಡಿದ್ದಕ್ಕೆ ಆ ದೇವತೆಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ತಿಳಿಸಿದರು.
ಅಂದು ರಾತ್ರಿ ೯.೦೦ ಗಂಟೆಗೆ ಜಾತ್ರಾ ಮಹೋತ್ಸವ ಅಂಗವಾಗಿ “ಶ್ರೀ ಭಾಗ್ಯವಂತಿ ದೇವಿ ನಾಟಕ ಅಥಾರ್ತ ಬಂಜೆಯ ತೊಟ್ಟಿಲು ತುಗಿತು ಎಂಬ ಸುಂದರ ಶಕ್ತಿ ಪ್ರದರ್ಶನ ನಾಟಕ ಜರುವುದು ಎಂದು ತಿಳಿಸಿದರು.
ಇದೇ ಸಂಧರ್ಬದಲ್ಲಿ
ಶಂಕರಗೌಡ, ಸಿದ್ದಣ್ಣ ಕರಣಿಗಿ, ನಾಗಪ್ಪ, ಈಶಪ್ಪ, ಶೇಖಪ್ಪ, ಸಿದ್ದಪ್ಪ, ವಿಶ್ವರಾಧ್ಯಾ, ಶ್ರೀಶೈಲ್, ರಮೇಶ, ವಿಶ್ವರಾಧ್ಯಾ, ಮಾಣಿಕೆಪ್ಪ, ಹಣಮಂತ ದರ್ಶನ ಭಗವಾನ ಸಕ್ರೇಪ್ಪ ಮಲ್ಲಪ್ಪ, ಆಂಜನೇಯ, ಬಾಬಾಖಾನ, ಮುದ್ದಮ್ಮ, ಕಾಶಮ್ಮ, ಶಿವಬಸಮ್ಮ, ನಾಗಮ್ಮ, ಮಲ್ಲಮ್ಮ, ದೊಡ್ಡ ಯಲ್ಲಮ್ಮ, ಸಣ್ಣ ಯಲ್ಲಮ್ಮ, ಅವ್ವಮ್ಮ, ತಿಪ್ಪಮ್ಮ, ಕಾಶಮ್ಮ, ಲಕ್ಷ್ಮೀ ಹುಸೇನಮ್ಮ, ಗಿರಿಜಮ್ಮ, ಇಂದ್ರಮ್ಮ, ಪ್ರಭಾವತಿ ಗಂಗಮ್ಮ, ಮೌಲಾಬಿ, ಸೇರಿದಂತೆ ಅನೇಕರು ಉಪಸ್ಥಿತರಿದರು