Thursday, June 4, 2026
Homeಟಾಪ್ ನ್ಯೂಸ್ಹೆತ್ತ ತಾಯಿಯನ್ನು ನಡು ರಸ್ತೆಯಲ್ಲೇ ಬಿಟ್ಟುಹೋದ ಮಗ, ಸಾಕಿ ಸಲಹಿದ ತಾಯಿಯನ್ನು ಬಿಟ್ಟ ಮಗ ಎಂತವನು...

ಹೆತ್ತ ತಾಯಿಯನ್ನು ನಡು ರಸ್ತೆಯಲ್ಲೇ ಬಿಟ್ಟುಹೋದ ಮಗ, ಸಾಕಿ ಸಲಹಿದ ತಾಯಿಯನ್ನು ಬಿಟ್ಟ ಮಗ ಎಂತವನು ಇರಬೇಕು…..

ಬೆಳಗಾವಿ : ಮಾನವೀಯತೆಯನ್ನೇ ಮರೆಸುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ನಡೆದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ತಾಯಿಯನ್ನು ಪುತ್ರನೊಬ್ಬ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

ರಾಮದುರ್ಗ ತಾಲೂಕಿನ ಸಾಲೊಳ್ಳಿ ಗ್ರಾಮದ ಕಮಲಮ್ಮ ಕಟ್ಟಿ ಎಂಬ ವೃದ್ಧೆಯನ್ನು ಅವರ ಪುತ್ರ ಸಂತೋಷ ಕಟ್ಟಿ ನಿನ್ನೆ ರಾತ್ರಿ ಸುಮಾರು 10 ಗಂಟೆ ವೇಳೆ ಮುನವಳ್ಳಿ ಡ್ಯಾಂ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ತಿಳಿದುಬಂದಿದೆ. ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ವೃದ್ಧೆ ಕಣ್ಣೀರಿಡುತ್ತಾ ತನ್ನ ನೋವನ್ನು ಸ್ಥಳೀಯರ ಮುಂದೆ ಹೇಳಿಕೊಂಡಿದ್ದಾಳೆ.

ಸಂಕೇಶ್ವರ ಡಿಪೋದಲ್ಲಿ ಕೆಎಸ್‌ಆರ್‌ಟಿಸಿ ನೌಕರನಾಗಿ ಕೆಲಸ ಮಾಡುತ್ತಿರುವ ಸಂತೋಷ ಕಟ್ಟಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೆತ್ತ ತಾಯಿಯನ್ನು ಅನಾಥೆಯಂತೆ ಬಿಟ್ಟು ಹೋಗಿರುವ ಘಟನೆ ಖಂಡನೀಯ ಎಂದು ಹೇಳಿದ್ದಾರೆ.

ಸ್ಥಳೀಯರು ವೃದ್ಧೆಗೆ ತಾತ್ಕಾಲಿಕ ಆರೈಕೆ ಒದಗಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ವೃದ್ಧೆಗೆ ನೆರವು ನೀಡಬೇಕು ಮತ್ತು ಪುತ್ರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಯಿಯೇ ದೇವರು,ಅವರ ಮುಂದೆ ಯಾರು ಇಲ್ಲ”

ಹೆಚ್ಚಿನ ಸುದ್ದಿ