ಲಿಂಗಸುಗೂರು ತಾಲ್ಲೂಕಿನ ತಾಲೂಕ ಸಾರ್ವಜನಿಕ ಆಸ್ಪತ್ರೆ ಲಿಂಗಸುಗೂರಿನಲ್ಲಿ ಹೃದಯರೋಗ ತಜ್ಞರನ್ನು ನೇಮಿಸಲು ಕರವೇ ಸಂಘಟನೆ ಯು ತಾಲೂಕ ಆರೋಗ್ಯಾಧಿಕಾರಿಗಳು ಲಿಂಗಸುಗೂರು ಇವರ ಮುಖಾಂತರ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಲಿಂಗಸುಗೂರು ತಾಲೂಕ ಸಾರ್ವಜನಿಕ ಆಸ್ಪತ್ರೆಯು 100 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಇಲ್ಲಿ ಪ್ರತಿದಿನ ಸಹಸ್ರಾರು ಜನ ಸುತ್ತಮುತ್ತಲಿನ ಪಟ್ಟಣ ಮತ್ತು ಹಳ್ಳಿಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು, ಸದರಿ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಹೃದಯ ರೋಗ ತಜ್ಞರು ಇರುವುದಿಲ್ಲ. ಹೃದಯ ರೋಗದಿಂದ ಬಳಲುತ್ತಿರುವ ರೋಗಿಗಳು ಸದರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಚಿಕಿತ್ಸೆಗಾಗಿ ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಬೇರೆ ಬೇರೆ ಪಟ್ಟಣಗಳಿಗೆ ಹೋಗುವ ಪರಿಸ್ಥಿತಿ ತಲೆದೋರಿರುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯರೋಗ ತಜ್ಞರನ್ನು ನೇಮಕ ಮಾಡುವ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಮಾನ್ಯ ಹಾಲಿ ಶಾಸಕರು, ಮಾಜಿ ಶಾಸಕರು ಇತ್ತ ಕಡೆ ಗಮನ ಹರಿಸದೇ ಇರುವುದು ದುರದೃಷ್ಟಕರ ಮತ್ತು ಬೇಜಾಬ್ದಾರಿ ತೋರಿಸುತ್ತಿರುವುದು ಬೇಸರದ ಸಂಗತಿ.ಕಾರಣ ಆದಷ್ಟು ಶೀಘ್ರದಲ್ಲಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೃದಯ ರೋಗ ತಜ್ಞರನ್ನು ನೇಮಕ ಮಾಡಲು ಆಗತ್ಯಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಎಂದರು ಈ ಸಂದರ್ಭದಲ್ಲಿ ಜಿಲಾನಿ
ಅಧ್ಯಕ್ಷರು ಕ.ರ.ವೇ ತಾಲೂಕ ಘಟಕ ಲಿಂಗಸುಗೂರು ಕರವೇ ಕಾರ್ಯ ಕರ್ತರಾದ ಅಜೀಮ್ ಪಾಶ ಹನುಮಂತ ನಾಯಕ. ರವಿ ಬರಗುಡಿ. ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.