Friday, March 13, 2026
Homeಜಿಲ್ಲಾ ಸುದ್ದಿಗಳುಹುಲಿಹೊಂಡ ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯರು ತಹಶೀಲ್ದಾರ್ ಕಚೇರಿ ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ...

ಹುಲಿಹೊಂಡ ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯರು ತಹಶೀಲ್ದಾರ್ ಕಚೇರಿ ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು…

ಮುಂಡಗೋಡ:, ಮಾರ್ಚ್ 12: ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯರು ತಹಶೀಲ್ದಾರ್ ಕಚೇರಿ ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಸದರಿ ಮನವಿಯಲ್ಲಿ

1. ಸಿಂಗನಳ್ಳಿಯಿಂದ ಹುಲಿಹೊಂಡ ಗ್ರಾಮದವರೆಗೆ ಸಿಸಿ ರಸ್ತೆ ನಿರ್ಮಾಣ

2. ಹುಲಿಹೊಂಡ ಗ್ರಾಮಕ್ಕೆ ಅಂಗನವಾಡಿ ಕಟ್ಟಡ ನಿರ್ಮಾಣ

3. ಹುಲಿಹೊಂಡ ಗ್ರಾಮಕ್ಕೆ ಪಕ್ಕಾ ಗಟಾರ ನಿರ್ಮಾಣ

4. ಕಿರಿಯ ಪ್ರಾಥಮಿಕ ಶಾಲೆ ಮೇಲಾಚಾವಣೆ ಹಾಗೂ ಶೌಚಾಲಯ ದುರಸ್ತಿ

5. ಆಶ್ರಯ ಯೋಜನೇಯಡಿ 15 ಮನೆ ಮಂಜೂರಿ

6. ಕಾತುರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲ ಆರೋಗ್ಯ ಸೇವೆಗಳು ದೊರೆಯುವಂತೆ ಮಾಡುವುದು

7. ಅರಣ್ಯ ಅವಲಂಭಿತ ತಿರಸ್ಕೃ ತರ ಮಹಜರ ಪ್ರಕ್ರಿಯೆ ಆರಂಭದ ಕುರಿತು ಬೇಡಿಕೆ ಇಟ್ಟು ಮನವಿಯನ್ನು ಮಾನ್ಯ ತಹಶೀಲ್ದಾರ್ ಮತ್ತು ಕಾತೂರು ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ಸಲ್ಲಿಸಿದರು.

ಗ್ರಾಮ ಅಭಿವೃದ್ಧಿ ಸಮಿತಿಯ ಸಾವುಬಾಯಿ, ಭಾಗುಬಾಯಿ, ದಾಕುಬಾಯಿ, ಭವಾನಿ, ಭಾಗುಬಾಯಿ, ಸಾವುಬಾಯಿ, ಸೋನುಬಾಯಿ, ಜನ್ನಿ ಹಾಗೂ ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ಯಾದ ಭರಮಣ್ಣ ಚಕ್ರಸಾಲಿ ಮತ್ತು ನಕಲುಬಾಯಿ ಕೊಕರೆ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೆಚ್ಚಿನ ಸುದ್ದಿ