Monday, December 23, 2024
HomeUncategorizedಹಿಂದುಳಿದ ವರ್ಗಗಳ ವಸತಿ ನಿಲಯ ವಿಸ್ತೀರ್ಣಾಧಿಕಾರಿ ತಿಪ್ಪಾರೆಡ್ಡಿ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಬಸವರಾಜ ಹೊಸಮನಿ...

ಹಿಂದುಳಿದ ವರ್ಗಗಳ ವಸತಿ ನಿಲಯ ವಿಸ್ತೀರ್ಣಾಧಿಕಾರಿ ತಿಪ್ಪಾರೆಡ್ಡಿ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಬಸವರಾಜ ಹೊಸಮನಿ ಒತ್ತಾಯ

ಸುರಪುರ : ಯಾದಗಿರಿ ಜಿಲ್ಲೆಯ ತಾಲೂಕ ಹಿಂದುಳಿದ ವರ್ಗಗಳ ವಿಸ್ತೀಣಾಧಿಕಾರಿಗಳು ಹಾಗೂ ಪ್ರಭಾರಿ ಕಲ್ಯಾಣಾಧಿಕಾರಿಗಳಾದ ತಿಪ್ಪಾರೆಡ್ಡಿ (ತಿಪ್ಪಣ್ಣ) ಈತನು ವಸತಿ ನಿಲಯಕ್ಕೆ ಬರುವ ಅನುದಾನದಲ್ಲಿ ಕಡಿತಗೊಳಿಸಿ ಭ್ರಷ್ಟಚಾರವೆಸಗುತ್ತಿದ್ದಾರೆ ಎಂದು ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಸುರಪುರ ತಾಲೂಕು ಅಧ್ಯಕ್ಷ ಬಸವರಾಜ ಹೊಸಮನಿ ಗಂಭೀರವಾದ ಆರೋಪವನ್ನು ಮಾಡಿದರು.
ನಕಲಿ ಬಿಲ್ಲುಗಳನ್ನು ಸೃಷ್ಟಿ ಮಾಡಿ ವಸತಿ ನಿಲಯದಲ್ಲಿ ರಿಪೇರಿ ಮಾಡಿಸಿದ್ದೆನೆಂದು ಬೊಗಸ್ ಬಿಲ್ಲು ಮಾಡಿಕೊಳ್ಳುತ್ತಿದ್ದಾರೆ .
ವಸತಿ ನಿಲಯದಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳಿಗೆ ಅನಗತ್ಯವಾಗಿ ಕಿರುಕುಳ ನೀಡಿ ದರ್ಪ ತೋರಿಸಿ ಸ್ಥಳೀಯವಾಗಿ ರಾಜಕೀಯ ಮಾಡುತಿದ್ದಾನೆ.
ಗ್ರೂಪ್ ಡಿ ನೌಕರರಿಗೆ ಪದನ್ನೊತ್ತಿಗೊಳಿಸುತ್ತೇನೆಂದು ಅವರಿಂದ ಅಕ್ರಮವಾಗಿ ಒಬ್ಬರಿಂದ 20 ಸಾವಿರ ರೂಪಾಯಿ ಹಣವನ್ನು ವಸೂಲಿ ಮಾಡಿಕೊಂಡು ಸುಮಾರು ವರ್ಷಗಳಿಂದ ಇದೇ ರೀತಿ ಭ್ರಷ್ಟಾಚಾರವೆಸಗುತ್ತಾ ಬಂದಿರುವ ಇಂತಹ ಭ್ರಷ್ಟ ಅಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸಿ ತಕ್ಷಣವೇ ಸೇವೆಯಿಂದ ವಜಾಗೊಳಿಸಿ ಬೇರೆ ಕಡೆ ವರ್ಗಾವಣೆ ಮಾಡುವಂತೆ ಅಖಂಡ ಕರ್ನಾಟಕ ರಕ್ಷಣಾ ಸಮಿತಿ (ರಿ) ಸಂಘಟನೆಯ ಮುಖಂಡರ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಒತ್ತಾಯ ಮಾಡಿದರು.
ಸುರಪುರ ತಾಲೂಕಾ ಯಾದಗಿರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಅವ್ಯವಸ್ಥೆಗಳ ಗೂಡಾಗಿವೆ. ನಿಲಯದಲ್ಲಿ ಕಳಪೆಮಟ್ಟದ ಆಹಾರ ಪೂರೈಕೆ ಆಗುತ್ತಾ ಇದ್ದರು ಕೂಡಾ ಸಂಬಂಧಪಟ್ಟ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದೆ ಇಂತಹ ಘಟನೆಗೆ ಮೂಲ‌ ಕಾರಣ ಜನೇವರಿಯಿಂದ ಆಗಷ್ಟ, ಸೆಪ್ಟೆಂಬರ್-2024 ರವರೆಗೂ ಇಲ್ಲಿಯವರೆಗೆ ನಿಲಯಗಳಿಗೆ ಸಾಬೂನು ಕಿಟ್ಟ ಕೊಟ್ಟಿರುವುದಿಲ್ಲ. 2015-16 ರಲ್ಲಿ ತರಿಸಿದ ಗಾದಿಗಳನ್ನೆ ಇಲ್ಲಿಯವರೆಗೆ ವಿದ್ಯಾರ್ಥಿಗಳು ಉಪಯೋಗಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ನೂತನ ಹಾಸಿಗೆಗಳು ಖರಿದಿಸಿರುವುದಿಲ್ಲಾ
ಯಾದಗಿರಿ ಜಿಲ್ಲೆಯಾದ್ಯಂತ ಬರುವ ಶಹಾಪೂರ, ಸುರಪುರ, ಹುಣಸಗಿ, ಗುರುಮಿಠಕಲ್, ವಡಗೇರಾ ಈ ಎಲ್ಲಾ ತಾಲೂಕುಗಳಿಗೆ ಹೊಲಿಕೆ ಮಾಡಿದರೆ ಮೊದಲು ಭ್ರಷ್ಟರ ಸ್ಥಾನ ಸಿಗುವುದು ಸುರಪುರಕ್ಕೆ, ತಾಲೂಕಿನ ಪ್ರಭಾರಿ ಕಲ್ಯಾಣಾಧಿಕಾರಿ ತಿಪ್ಪರೆಡ್ಡಿಯು ಮಹಾ ಭ್ರಷ್ಟರು, ಸುಳ್ಳುಗಾರ, ಲಂಚಕೋರ ಅಂತಾ ಕರೆದೆರೆ ತಪ್ಪಾಗಲಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುರಪುರದಲ್ಲಿ ಇವರಿಗೆ ಎಲ್ಲರ ಕಣ್ಣಿಗೆ ಇವರು ಧಕ್ಷ, ಪ್ರಾಮಾಣಿಕರಂತೆ ಇವರ ನೈಸ್ ಮಾಡಿ ಒಳ್ಳೆಯವರಂತೆ ಕಾಣುತ್ತಾರೆ.
ಶಿವಶಕ್ತಿ ಟ್ರೇಡರ್ಸ್ ಶಹಾಪೂರ ಫರ್ಮ ಆಹಾರ ಸರಬರಾಜು ಮಾಲಿಕ ಶ್ರೀಕಾಂತಯ್ಯ ಹಿರೇಮಠ ಇತನ ಜೊತೆ ತಿಪ್ಪಾರೆಡ್ಡಿ (ತಿಪ್ಪಣ್ಣ) ಸೇರಿಕೊಂಡು 3-4 ವರ್ಷದಿಂದ ಆಹಾರ ಸರಬರಾಜುದಾರ ಶ್ರೀಕಾಂತಯ್ಯ ಹಿರೇಮಠ ಶಹಾಪೂರ ಇವರ ಮುಖ್ಯ ನಿಲಯ ಮೇಲ್ವಿಚಾರಕರು ನೋಡೆ ಇಲ್ಲಾ, ಇಲ್ಲಿಯತನಕ ಸುರಪುರ ತಾಲೂಕಿನ ಮೆಟ್ರಿಕ್ ಪೂರ್ವ ನಿಲಯಗಳು 15 ಇರುತ್ತವೆ.
ಮೆಟ್ರಿಕ್ ನಂತರದ ನಿಲಯಗಳ ಸಂಖ್ಯೆ ಒಟ್ಟು 7 ಒಟ್ಟು 22 ನಿಲಯಗಳು ಇರುತ್ತವೆ.
ನೀವು ಮಧ್ಯಾಹ್ನ ಅನಿರೀಕ್ಷಿತ ಭೇಟಿ ನೀಡಬಹುದು ನಿಲಯಗಳಿಗೆ ನಿಮಗೆ ಸಿಗುವುದು ವಿದ್ಯಾರ್ಥಿ ನಿಲಯದ ಸಂಖ್ಯೆ ಬಲ 50 ಇದ್ದರೆ ನಿಮಗೆ ಸಿಗುವುದು 25-30 ವಿದ್ಯಾರ್ಥಿಗಳು ಮಾತ್ರ ಉಳಿದ 20 ವಿದ್ಯಾರ್ಥಿಗಳ ಬೊಗಸ್ ಬಿಲ್ ಹಾಕುತ್ತಾರೆ. ವಸತಿ ನಿಲಯದಲ್ಲಿ ಅಡುಗೆ ಮಾಡುವ ಮಹಿಳಾ ಸಿಬ್ಬಂದಿಯವರಿಂದ ತನ್ನ ಮನೆಯ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುತ್ತಾನೆ
, ಇವರ ಬರುವುದಿಲ್ಲವೆಂದರೆ ಇವರ ಮೇಲೆ ಕ್ರಮ ಜರುಗಿಸಿ ಬೇರೆ ಕಡೆ ಹಾಕುತ್ತಾರೆ.
ಸುರಪುರ ತಾಲೂಕಿನ ಎಲ್ಲಾ ನಿಲಯಗಳಲ್ಲಿ ಆಟದ ಸಾಮಾನುಗಳಿಲ್ಲ ಭೇಟಿ ಇಲ್ಲಾ ಸ್ಟಾಪ್‌ಗಳಲ್ಲಿ, ಕ್ಯಾಮರ್‌ಗಳಿಲ್ಲ 2020-2021 ರಲ್ಲಿ ತರಿಸಿದ ಆಟದ ಸಾಮಾನುಗಳು ಇಲಿಯತನಕ ತರಿಸಿರುವುದಿಲ್ಲ ಸರ್ ಮತ್ತು HIC2553 ನಿಲಯಕ್ಕೆ ಭೇಟಿ ನೀಡಿದ್ದಾರೆ ನಿಮಗೆ ಸ್ವಾಗತ ಮಾಡುವುದು ದುರ್ಗಂಧ ವಾಸನೆ ನಿಲಯದ ಹಿಂದೆ ಮುಂದೆ ಆವರಣ ನಿಲಯದ ಎಡಕ್ಕೆ, ಬಲಕ್ಕೆ ಹೊಲಸು ತುಂಬಿರುತ್ತದೆ ಬಹಳಷ್ಟು ಗಲೀಜು ಇರುತ್ತದೆ ಸ್ವಚ್ಛತೆ ಇಲಾ ಆವರಣದ ಮುಂದೆ ಕಸ, ಹುಲ್ಲು ಬೆಳೆದಿರುತ್ತದೆ ಇಂತಹ ಭ್ರಷ್ಟ ಅಧಿಕಾರಿಯನ್ನು ತಕ್ಷಣದಿಂದ ಸೇವೆಯಿಂದ ಬಿಡುಗಡೆಗೊಳಿಸಿ, ಬೇರೆಯವರನ್ನು ನಿಯೋಜಿಸಬೇಕೆಂದು ತಮ್ಮಲ್ಲಿ ನಮ್ಮ ಸಂಘಟನೆ ಮನವಿ ಮಾಡಿಕೊಳ್ಳುತ್ತದೆ.
ಒಂದು ವೇಳೆ ವಿಳಂಭವಾದರೆ ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರಲ್ಲಿ ನ್ಯಾಯ ಸಿಗುವವರೆಗೆ ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ‌ ಸಂದರ್ಭದಲ್ಲಿ ಅಖಂಡ ಕರ್ನಾಟಕ ರಕ್ಷಣಾ ಸಮಿತಿಯ ಯಾದಗಿರಿ ಜಿಲ್ಲಾಧ್ಯಕ್ಷ ಮಂಜುನಾಥ ಬಡಿಗೇರ ಸುರಪುರ ತಾಲೂಕು ಅಧ್ಯಕ್ಷ ಬಸವರಾಜ ಹೊಸಮನಿ ಮುಖಂಡರಾದ ದುರ್ಗಪ್ಪ ಡೊಣ್ಣಿಗೇರಾ,ತಿಪ್ಪಣ್ಣ ಪಾಟೀಲ ಇತರರು ಉಪಸ್ಥಿತರಿದ್ದರು.

ವರದಿ : ಮೌನೇಶ ಆರ್ ಭೋಯಿ

ಹೆಚ್ಚಿನ ಸುದ್ದಿ