ಬೆಂಗಳೂರು ಜ 05 :: ಬನ್ನೇರುಘಟ್ಟ ರಸ್ತೆಯ AMC
ಕಾಲೇಜಿನಲ್ಲಿ ಕನ್ನಡ ಮಾತನಾಡಬಾರದು ಅಂತೇಳಿ ವಿದ್ಯಾರ್ಥಿಗಳನ್ನು ಬೈದು ದಬ್ಬಾಳಿಕೆ ಮಾಡಿ ಉದ್ದಟತನ ಮೆರೆದಿದ್ದ ಕಾಲೇಜು ಹಾಸ್ಟೆಲ್ ವಾರ್ಡನ್ ವಿರುದ್ಧ ಇಂದು ರೂಪೇಶ್ ರಾಜಣ್ಣ ನವನರ ನೇತೃತ್ವ ಕನ್ನಡಪರ ಸಂಘಗಳು ಮತ್ತು ಹೋರಾಟಗಾರರು ಬೃಹತ್ ಹೋರಾಟ ಮಾಡಿದರು.
ಕನ್ನಡ ವಿರೋಧಿ ಆಗಿರು ಕಾಲೇಜು ಹಾಸ್ಟೆಲ್ ವಾರ್ಡನ್ ವಿರುದ್ಧ FIR ಆಗಿ ಅರೆಸ್ಟ್ ಆಗಿದ್ದಾನೆ.
ಇವನ್ನ ಕನ್ನಡ ವಿರೋಧಿ ನೀತಿ ಸರಿಯಲ್ಲ ಇಂತವರಿಗೆ ಕನ್ನಡ ನೆಲದಲ್ಲಿ ಜಾಗ ಇಲ್ಲ ಕೆಲಸದಿಂದ ವಜಾ ಮಾಡಬೇಕು ಅನುವ ನಮ್ಮ ಬೇಡಿಕೆಯನ್ನು ಪುರಸ್ಕರಿಸಿ ಕಾಲೇಜು ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ, ವಜಾ ಮಾಡಿದ ಜಾಗದಲ್ಲಿ ಕನ್ನಡಿಗನ ನೇಮಕ ಮಾಡಲು ಅನುವ ನಮ್ಮ ಬೇಡಿಕೆಗೂ ಕಾಲೇಜು ಮಂಡಳಿ ಒಪ್ಪಿಕೊಂಡಿದೆ. ಕಾಲೇಜಿನಲ್ಲಿ ಇಂತಹ ಘಟನೆಗಳು ಆಗದಂತೆ ಎಚ್ಚರ ವಹಿಸಲು ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ, ಕಾಲೇಜಿನಲ್ಲಿ ಅದ್ದೂರಿಯಾಗಿ ಕನ್ನಡ ರಾಜೋತ್ಸವ ಆಚರಿಸಬೇಕೆ ಅನುವ ನಮ್ಮ ಬೇಡಿಕೆ ಸ್ಪಂದಿಸಿದ ಕಾಲೇಜು ಆಡಳಿದ ಮಂಡಳಿ ಶೀರ್ಘ ಮಾಡುತ್ತೆವೆ ಎಂದು ಒಪ್ಪಿಕೊಂಡಿದ್ದಾರೆ. ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಇನ್ಮೇಲೆ ಇಂತಹ ದಬ್ಬಾಳಿಕೆ ಆಗಬಾರದು ಎಂಬ ಎಚ್ಚರಿಕೆ ನೀಡಿದೆವೆ ಕಾಲೇಜಿನಲ್ಲಿ ಎಲ್ಲೆಡೆ ಕನ್ನಡಿಗರಿಗೆ ಆದ್ಯತೆ ಕೊಡಬೇಕೆಂದು ತಾಕೀತು ಮಾಡಿದೆವೆ ಎಂದು ತಿಳಿಸಿದರು..
ಬೆಂಗಳೂರ ಮತ್ತು ರಾಜ್ಯದ ಸಾಕಷ್ಟು ಖಾಸಗಿ ಕಾಲೇಜುಗಳಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಆಗುತ್ತಿದ್ದು ಇವತ್ತಿನ ಹೋರಾಟ ಕನ್ನಡ ವಿರೋಧಿ ಎಲ್ಲ ಕಾಲೇಜುಗಳಿಗೂ ಒಂದು ಎಚ್ಚರಿಕೆಯ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಪ್ರೇಮಿಗಳು ವಿವಿಧ ಸಂಘಗಳ ಪದಾಧಿಕಾರಿಗಳು ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.


