ಯಾದಗಿರಿ : ನಗರದ ಯಾದಗಿರಿ-ಸೇಡಂ ರಾಜ್ಯ ಹೆದ್ದಾರಿಗೆ ಹೊಂದಿಕೊAಡಿರುವ ಹತ್ತಿಕುಣಿ ಕ್ರಾಸ್‌ಗೆ ಭೇಟಿ ನೀಡಿದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ವಾಸ್ತವಿಕ ಸ್ಥಿತಿಯನ್ನು ವಿಕ್ಷೀಸಿ, ಶೀಘ್ರವೇ ೫ ಕೋಟಿ ರೂ. ವೆಚ್ಚದಲ್ಲಿ ಗಂಗಾನಗರದವರೆಗೆ ರಸ್ತೆ ಅಗಲೀಕರಣ, ರಸ್ತೆ ನಿರ್ಮಾಣ, ಚರಂಡಿ, ರಸ್ತೆ ವಿಭಜಕ, ೨ ಬದಿಯಲ್ಲಿ ಸ್ಟಿçÃಟ್ ಲೈಟ್ ಅಳವಡಿಕೆ, ಬಸ್ ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ ಪೌರಾಯುಕ್ತರ ಜೊತೆ ಚರ್ಚಿಸಿದ ಶಾಸಕರು, ಈ ರಸ್ತೆ ಅತೀ ಹೆಚ್ಚು ವಾಹನಗಳು, ಜನರು ಓಡಾಡುವ ರಸ್ತೆಯಾಗಿದೆ ಕಾರಣ ಸರ್ಕಾರದ ನಿಯಮದಂತೆ ಯಾರ ಮುಲಾಜಿ ಇಲ್ಲದೇ ನಿಮ್ಮ ವ್ಯಾಪ್ತಿಯಲ್ಲಿ ಬರುವ ಅಂಗಡಿ-ಮುಗ್ಗಟ್ಟುಗಳನ್ನು ತೆರವುಗೊಳಿಸಿ, ಸೂಕ್ತ ರಸ್ತೆ ನಿರ್ಮಾಣಕ್ಕೆ ಮೊದಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಇಲ್ಲಿ ಟ್ರಾಫಿಕ್ ಸಮಸ್ಯೆ ಬಹಳ ಇದೆ, ವಾಹನಗಳ ನಿಲುಗಡೆಗೆ ತೊಂದರೆಯಾಗಿದೆ, ನಾನು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ, ಶಾಶ್ವತ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಈ ಭಾಗದಲ್ಲಿ ಹೆಚ್ಚಾಗಿ ಬಡ ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ, ಇಲ್ಲಿ ಪರಿಸರ ಸ್ವಚ್ಚತೆ ಎಂಬುದು ಮರಿಚಿಕೆಯಾಗಿದೆ, ನಗರಸಭೆ ಅಧಿಕಾರಿಗಳು ಆಗಾಗ ಭೇಟಿ ನೀಡಿ, ಪರಿಸರ ಸ್ವಚ್ಚತೆಗೆ ಗಮನ ನೀಡಿ, ಯಾದಗಿರಿ ನಗರದ ಹಳ್ಳದ ಸೇತುವೆ ಪಕ್ಕದಲ್ಲಿಯೇ ಜನರು ರಾಶಿ-ರಾಶಿ ತ್ಯಾಜ್ಯ ವಸ್ತುಗಳನ್ನು ಹಾಕುತ್ತಿದ್ದಾರೆ, ಅದರಿಂದ ಕೆಟ್ಟ ದುರ್ವಾಸನೆಯಿಂದ ನಗರ ಪ್ರವೇಶಿಸುವ ಜನರು ಹಿಡೀ ಶಾಪ ಹಾಕುತ್ತಿದ್ದಾರೆ, ಕಾರಣ ಅಲ್ಲಿ ಕಸ ಹಾಕುವರನ್ನು ಗಮನಿಸಿ, ಜಾಗೃತಿ ಮೂಡಿಸಿ, ಒಂದು ವೇಳೆ ಅವರು ಪರಿವರ್ತನೆಯಾಗದಿದ್ದರೆ ದಂಡ ವಿಧಿಸಿ, ಮೊದಲು ಅಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹತ್ತಿಕುಣಿ ಕ್ರಾಸ್‌ನಿಂದ ಗಂಗಾನಗರವರೆಗೆ ಹತ್ತಾರು ವರ್ಷಗಳಿಂದ ಯಾರು ಕಾಮಗಾರಿ ಕೈಗೊಂಡಿಲ್ಲ, ಪರಿಣಾಮ ತಗ್ಗು-ಗುಂಡೆಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ, ನನಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಪರಿಣಾಮ ವಿಶೇಷ ಕಾಳಜಿವಹಿಸಿ, ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ, ಕಾರಣ ಅಧಿಕಾರಿಗಳು ಗುಣಮಟ್ಟದಿಂದ ಕೆಲಸ ಮಾಡಿಸಿದಾಗ ಮಾತ್ರ ಜನರಿಗೆ ಹಲವಾರು ವರ್ಷಗಳವರೆಗೆ ಸಹಕಾರಿಯಾಗುತ್ತದೆ ಎಂದು ಆದೇಶಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರಶುರಾಮ, ಸಹಾಯಕ ಇಂಜಿನಿಯರ್ ಹಣಮಂತ, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಶ್ವನಾಥ, ಸಾಯಿಬಣ್ಣ ಕೆಂಗೂರಿ, ಗುತ್ತಿಗೆದಾರ ಮೋಹನ ರಾಠೋಡ, ಚನ್ನಕೇಶವಗೌಡ ಬಾಣತಿಹಾಳ, ನಗರಸಭೆ ಅಧಿಕಾರಿ ಶರಣಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
