.ಲಿಂಗಸುಗೂರು, ಸೆ.23:ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಮಹಮ್ಮದ್ ರಫಿ ಅವರನ್ನು ಹಜರತ್ ಟಿಪ್ಪು ಸುಲ್ತಾನ್ ಸಂಘದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಹಾಜರಿದ್ದ ಅತಿಥಿಗಳು ರಫಿ ಅವರ ಸಂಘಟನೆ ಶಕ್ತಿ, ಸಾಮಾಜಿಕ ಚಟುವಟಿಕೆಗಳಲ್ಲಿ ತೋರಿಸಿರುವ ಬದ್ಧತೆ ಹಾಗೂ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ನೀಡುತ್ತಿರುವ ಸೇವೆಯನ್ನು ಮೆಚ್ಚಿಕೊಂಡರು.ಕಾರ್ಯಕ್ರಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಸಂಘದತಾಲೂಕು ಅಧ್ಯಕ್ಷರಾದ ಅಲ್ಲಾಬಕ್ಷ್ ಮನಿಯರ್, ಜಮೀರ್, ಇಲಿಯಾಸ್ ಖುರೇಶಿ, ಶಾಹಿದ್ ಹವಾಲ್ದಾರ್, ಅಂಬರೀಶ್, ಶಬ್ಬೀರ್, ಖಾಜಾಮನಿಯಾರ ಪಜಲ್ ಮನಿಯಾರ ಗೌಸ್ ಸೇರಿದಂತೆ ಅನೇಕರು ಭಾಗವಹಿಸಿ ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಸಮಾರಂಭದಲ್ಲಿ ಮಾತನಾಡಿದ ,”ಮಹಮ್ಮದ್ ರಫಿ ಅವರು ಸದಾ ಪಕ್ಷದ ಹಿತಚಿಂತನೆಗಾಗಿ ಶ್ರಮಿಸುವೆ, ಪಕ್ಷ ಸಂಘಟನೆಗೆ ಹೆಚು ಕೆಲಸ ಮಾಡುತ್ತೇನೆ ” ಎಂದು ಹೇಳಿದರು.
ವರದಿ :-ವಿಠ್ಠಲ್ ಮಟ್ಟೂರ.
