ಮೃತ ದೇಹ ಹೊರ ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ
ಕೃಷ್ಣಾ ನದಿಯಲ್ಲಿ ಈಜಾಡಲು ಹೋಗಿ ಇಬ್ಬರು ಯುವಕರ ಸಾವು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಸಮೀಪದ ಬೆಂಚಿ ಗಡ್ಡಿಯ ಹತ್ತಿರವಿರುವ ಪಿಪಿಸಿಎಲ್ ವಿದ್ಯುತ್ ಪೂರೈಕೆ ಘಟಕದಲ್ಲಿ
ಕೆಲಸಕ್ಕಿದ್ದ ನಾಗಾಲ್ಯಾಂಡ್ ಮೂಲದ 23 ವರ್ಷ ವಯಸ್ಸಿನ ಅಲಾಮ ಹಾಗೂ ಬಿಜಾಪುರ ಜಿಲ್ಲೆಯ ಮುತ್ತಗಿ ಗ್ರಾಮದ 24 ವರ್ಷದ ಮಾರುತಿ ತಂದೆ ಶಿವಪ್ಪ ಸೂರ್ಯವಂಶಿ ಎನ್ನುವ ಇಬ್ಬರು ಯುವಕರು ಮೃತಪಟ್ಟ ದುರ್ದೈವಿಗಳು
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಿದ್ಯುತ್ ಉತ್ಪಾದನೆ ಘಟಕದ
ನೀರಿನಲ್ಲಿ ಈಜಲು ತೆರಳಿ ಇಬ್ಬರು ಯುವಕರು ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು,
ಹುಣಸಗಿ ತಾಲೂಕಿನ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಮೌನೇಶ ಆರ್ ಭೋಯಿ