ಬೆಂಗಳೂರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸುವ ಯಾವುದೇ ಪ್ರಯತ್ನಗಳು ನಡೆದರೆ, ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಹಿಂದ ಸಂಘಟನೆ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದೆ. ಸಿದ್ದರಾಮಯ್ಯನವರು ತಮ್ಮ ಪೂರ್ಣಾವಧಿಯಾದ 2028ರ ವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲೇಬೇಕು ಎಂಬುದು ಅಹಿಂದ ಸಂಘಟನೆಯ ದೃಢ ನಿರ್ಧಾರವಾಗಿದೆ.
ಈ ಕುರಿತು ರಾಜ್ಯದ 31 ಜಿಲ್ಲೆಗಳ ಪದಾಧಿಕಾರಿಗಳು ಒಮ್ಮತದ ನಿರ್ಧಾರ ಕೈಗೊಂಡಿದ್ದು, ಸಿಎಂ ಬದಲಾವಣೆ ಚರ್ಚೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್‌ಗೆ ಎಚ್ಚರಿಕೆ ಮತ್ತು ಬೇಡಿಕೆಗಳು:
ಸಂಘಟನೆಯ ಗೌರವ ಅಧ್ಯಕ್ಷ ಸಿದ್ದಣ್ಣ ತೇಜಿ ಹಾಗೂ ರಾಜ್ಯಾಧ್ಯಕ್ಷರು ಪ್ರಭುಲಿಂಗ ದೊಡ್ಡಿಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪಕ್ಷದ ಹೈಕಮಾಂಡ್ ತಕ್ಷಣವೇ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. “ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗದಂತೆ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಎಂಬ ಮಾತುಗಳು ಬಂದರೆ, ಅಹಿಂದ ವರ್ಗದವರು ಸುಮ್ಮನಿರುವುದಿಲ್ಲ. ಇದು ಕೇವಲ ಒಂದು ಸಂಘಟನೆಯ ಮಾತಲ್ಲ, ಇದು ರಾಜ್ಯದ ಮೂಲೆ ಮೂಲೆಗಳಲ್ಲಿರುವ ಅಹಿಂದ ವರ್ಗದ ಧ್ವನಿ” ಎಂದು ಪ್ರಭುಲಿಂಗ ದೊಡ್ಡಿಣಿ ತಿಳಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಮಟ್ಟದ ಆಕ್ರೋಶ:
ರಾಜ್ಯದ 31 ಅಹಿಂದ ಜಿಲ್ಲಾಧ್ಯಕ್ಷರು ಮತ್ತು 240 ತಾಲೂಕು ಅಧ್ಯಕ್ಷರು ಈ ಹೋರಾಟದ ನೇತೃತ್ವ ವಹಿಸಲಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪಕ್ಷದ ವರಿಷ್ಠರಿಗೆ ರಾಜ್ಯದ ಜನತೆಯ ನಾಡಿಮಿಡಿತವನ್ನು ತಿಳಿಸಲಾಗುವುದು.
ಉಗ್ರ ಹೋರಾಟ ಸಿಎಂ ಬದಲಾವಣೆ ಅನಿವಾರ್ಯವಾದರೆ ಅಥವಾ ಸಂಚು ನಡೆದರೆ, ರಸ್ತೆಗಿಳಿದು ಹೋರಾಟ ನಡೆಸಲು ಸಂಘಟನೆ ಸಜ್ಜಾಗಿದೆ.
ಈ ಹೋರಾಟಕ್ಕೆ ರಾಜ್ಯದಾದ್ಯಂತ ಪ್ರಮುಖ ಪದಾಧಿಕಾರಿಗಳು ಬೆಂಬಲ ಸೂಚಿಸಿದ್ದಾರೆ:
ಗೌರವಾಧ್ಯಕ್ಷರು:ಸಿದ್ದಣ್ಣ ತೇಜಿ
ರಾಜ್ಯ ಪ್ರಧಾನ ಕಾರ್ಯದರ್ಶಿ: ಬೀರಲಿಂಗ ಪೂಜಾರಿ
ರಾಜ್ಯ ಉಪಾಧ್ಯಕ್ಷರು: ಸದಾನಂದ ಹುಗ್ಗಿ, ಸಿ ಮಾಲೆಗೌಡರು, ರಾಜು ಕಂಬಾಗಿ
ರಾಜ್ಯ ಸಂಘಟನಾ ಕಾರ್ಯದರ್ಶಿಗಳು: ವಿಠಲ ಗೌಡ ಬಿರಾದಾರ್, ಕರಿಯಪ್ಪ ಕರಿಗಾರ, ಭಟ್ಟಿ ಎರಿಸ್ವಾಮಿ, ಮಾಲತೇಶ ಬಣಕಾರ್, ಪ್ರಕಾಶ್ ದೊಡ್ಡಮನಿ
ಸಾಮಾಜಿಕ ಜಾಲತಾಣ ರಾಜ್ಯಾಧ್ಯಕ್ಷರು: ಸಂಗಪ್ಪ ಗುಳ್ಳನವರು
ಯುವ ಘಟಕ ಅಧ್ಯಕ್ಷರು:ಶಂಕರ್ ಹೆಗಡೆ, ಎಂ ಮಹೇಶ್ (ಚಾಮರಾಜನಗರ), ಶಿವಣ್ಣ (SC ಘಟಕ)
ಎಂ ಕೃಷ್ಣಪ್ಪ, ವಿಠ್ಠಲ ಪೂಜಾರಿ, ಬಕ್ಸರಅಲಿ ಮುಲ್ಲಾ, ಶ್ರೀಶೈಲ ಕೌಲಗಿ, ಮೋಹನ್ ದಳವಾಯಿ.
ಜಿಲ್ಲಾ ಘಟಕಗಳ ಬಲ:
ಬೆಂಗಳೂರು, ಮೈಸೂರು, ಬೆಳಗಾವಿ, ವಿಜಯಪುರ, ಬಳ್ಳಾರಿ, ಕಲಬುರಗಿ ಸೇರಿದಂತೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಜಿಲ್ಲಾಧ್ಯಕ್ಷರು ಈ ಹೋರಾಟದ ಭಾಗವಾಗಿದ್ದಾರೆ. ಸಂಘಟನೆಯು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಪದಾಧಿಕಾರಿಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಸಂಘಟನಾತ್ಮಕವಾಗಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಹಿಂದ ನಾಯಕರು
ಸಂಪರ್ಕಿಸುವಂತೆ:
ಪ್ರಭುಲಿಂಗ ದೊಡ್ಡಿಣಿ, ಅಹಿಂದ ರಾಜ್ಯಾಧ್ಯಕ್ಷರು ತಮ್ಮ
ದೂರವಾಣಿ: 9665303720 ಸಂಖ್ಯೆ ನೀಡಿದ್ದಾರೆ.
