Wednesday, May 20, 2026
Homeಕ್ರೈಂ ಸುದ್ದಿಗಳುಸಿಐಡಿ ಕಸ್ಟಡಿಗೆ ಶಿವಾನಂದ ನೀಲಣ್ಣವರ ಅವರನ್ನು 10 ದಿನ ನೀಡಿದ ನ್ಯಾಯಾಲಯ...

ಸಿಐಡಿ ಕಸ್ಟಡಿಗೆ ಶಿವಾನಂದ ನೀಲಣ್ಣವರ ಅವರನ್ನು 10 ದಿನ ನೀಡಿದ ನ್ಯಾಯಾಲಯ…

ಬೆಳಗಾವಿ: ಶಿವಾನಂದ ನಿಲಣ್ಣವರ ಪ್ರಕರಣದಲ್ಲಿ ಬೆಳಗಾವಿ ನ್ಯಾಯಾಲಯ ಇಂದು ಮಹತ್ವದ ಆದೇಶ ನೀಡಿದೆ.‌ ಇಂದು ಕೋರ್ಟ್ ನಲ್ಲಿ ನಡೆದ ಸುಧಿರ್ಘ  ವಿಚಾರಣೆ ಬಳಿಕ 10 ದಿನ ಸಿಐಡಿ ವಶಕ್ಕೆ ನೀಡಲಾಗಿದೆ. 

ಬೆಳಗ್ಗೆಯಿಂದ ವಿಚಾರಣೆ ನಡೆಸಿದ ಬೆಳಗಾವಿ ಪೊಲೀಸರು ಆರೋಪಿಯನ್ನು  ಕೋರ್ಟ್ ಮುಂದೆ ಹಾಜರು ಪಡಿಸಲು ಮುಂದಾದರು. ಇದಕ್ಕಿಂತ ಮುಂಚೆ ಆರೋಪಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ 2ನೇ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಈ ವೇಳೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶ ಗಂಗಾಧರ ಕೆ ಎನ್ ಅವರು  10 ದಿನ ಸಿಐಡಿಗೆ ವಶಕ್ಕೆ ನೀಡಿದ್ದಾರೆ. 

ಸಿಐಡಿ ಶಿವಾನಂದ ನೀಲಣ್ಣವರ್ ನನ್ನು ಹತ್ತು ದಿನ ವಶಕ್ಕೆ ಪಡೆದು ಮತ್ತಷ್ಟು ತನಿಖೆಯನ್ನು ಚುರುಕುಗೊಳಿಸಿದೆ. ಇಂದು, ನಾಳೆ ಬೆಳಗಾವಿಯಲ್ಲಿಯೇ ವಿಚಾರಣೆ ಮಾಡೋ ಸಾಧ್ಯತೆ ಇದೆ. ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಲಿದ್ದಾರೆ.

ಹೆಚ್ಚಿನ ಸುದ್ದಿ