ಬೀದರ್, ಟೋಕರೆ ಕೋಳಿ ಸಮುದಾಯದ ಆಚಾರ-ವಿಚಾರ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಟೋಕರೆ ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಲಾಗಿದೆ ಎಂದು ಟೋಕರೆ ಕೋಲಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್.ಕೆ. ಮೇಲಕಾರ್ ಅವರು ಅಭಿಪ್ರಾಯಪಟ್ಟರು.
ಅವರು ಇತ್ತೀಚಿಗೆ ನಗರದ ವಿಜಯನಗರ ಕಾಲೋನಿಯಲ್ಲಿರುವ ಕಥೆಗಾರ್ತಿ ಬಿ.ಜೆ. ಪಾರ್ವತಿ ವಿ. ಸೋನಾರೆ ಅವರ ನಿವಾಸದಲ್ಲಿ ನಡೆದ ಟೋಕರೆ ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ಬೀದರ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟೋಕರೆ ಕೋಳಿ ಸಮಾಜದ ಮದುವೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಪರಿಚಯ ಹಾಗೂ ಟೋಕರೆ ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್‌ನ ಜಿಲ್ಲಾ, ತಾಲೂಕಾ ಮಟ್ಟದ ಘಟಕಗಳ ರಚನೆ ಮಾಡಿ, ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು. ಅಲ್ಲದೇ ಸಮಾಜದ ಸಂಪ್ರಾದಾಯದ ಕುರಿತು, ಅಧ್ಯಯನ ನಡೆಸಿ, ಪುಸ್ತಕಗಳ ಪ್ರಕಟಣೆ ಮಾಡಲು ಟೋಕರೆ ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್‌ನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಟೋಕರೆ ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್.ಕೆ. ಮೇಲಕಾರ್ ಮತ್ತ್ತು ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಪಿ.ಡಿ. ರಾಜ್ ಅವರಿಗೆ ಮಕ್ಕಳ ಸಾಹಿತ್ಯ ಪರಿಷತ್ ಬೀದರ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀಮತಿ ಬಿ.ಜೆ. ಪಾರ್ವತಿ ವಿ. ಸೋನಾರೆ, ಅವರು ಶಾಲು ಹೊದಿಸಿ, ಸನ್ಮಾನಿಸಿದರು.