Monday, February 9, 2026
Homeಜಿಲ್ಲಾ ಸುದ್ದಿಗಳುಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ದಿವ್ಯಾ ಹಾಗರಗಿ 'ಧರ್ಮಯುದ್ಧ'! ಸಿದ್ದಾರ್ಥ ಲಾ‌ ಕಾಲೇಜ ಪರೀಕ್ಷಾ ಅಕ್ರಮ...

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ದಿವ್ಯಾ ಹಾಗರಗಿ ‘ಧರ್ಮಯುದ್ಧ’! ಸಿದ್ದಾರ್ಥ ಲಾ‌ ಕಾಲೇಜ ಪರೀಕ್ಷಾ ಅಕ್ರಮ ತನಿಖೆಗೆ ಆಗ್ರಹ.!

ಸಚಿವರಿಗೆ ಒಂದು ನ್ಯಾಯ, ಸಾಮಾನ್ಯರಿಗೆ ಒಂದು ನ್ಯಾಯವೇ?” ಎಂದು ಗುಡುಗಿದ ದಿವ್ಯಾ ಹಾಗರಗಿ.
ಆರೋಪ: ಸಿದ್ಧಾರ್ಥ್ ಲಾ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಪರೀಕ್ಷಾ ಅಕ್ರಮದ ತನಿಖೆಗೆ ಆಗ್ರಹ.
ಸವಾಲು: ನಿಷ್ಪಕ್ಷಪಾತ ತನಿಖೆ ನಡೆಯದಿದ್ದರೆ ಪ್ರಾಣತ್ಯಾಗಕ್ಕೂ ಸಿದ್ಧ ಎಂದ ದಿವ್ಯಾ.

“ಒಬ್ಬರಿಗೆ ಒಂದು ನ್ಯಾಯ, ನಮಗೆ ಮತ್ತೊಂದು ನ್ಯಾಯವೇ?” – ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ದಿವ್ಯಾ ಹಾಗರಗಿ ಕಿಡಿಕಾರಿಕೆ
ಕಲಬುರಗಿ:
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಾತ್ರವೇ ಬೇರೆ ನ್ಯಾಯವಿದೆಯೇ? ಸಾಮಾನ್ಯರಿಗೆ ಕಾನೂನು ಬೇರೆ ರೀತಿಯಲ್ಲೇ ಅನ್ವಯವಾಗುತ್ತದೆಯೇ? ಎಂಬ ತೀಕ್ಷ್ಣ ಪ್ರಶ್ನೆಗಳೊಂದಿಗೆ ಹಿಂದೂ ಮುಖಂಡೆ ದಿವ್ಯಾ ಹಾಗರಗಿ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಒಡೆತನದ ಸಿದ್ಧಾರ್ಥ್ ಲಾ ಕಾಲೇಜಿನಲ್ಲಿ ನಡೆದಿರುವುದಾಗಿ ಆರೋಪಿಸಲಾದ ಪರೀಕ್ಷಾ ಅಕ್ರಮಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸಿರುವುದೇ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ದಿವ್ಯಾ ಹಾಗರಗಿ ಆರೋಪಿಸಿದರು.
“ನ್ಯಾಯ ಸಿಗುವವರೆಗೆ ನಾನು ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತೇನೆ. ಈ ಹೋರಾಟದ ವೇಳೆ ನನಗೆ ಏನಾದರೂ ಅನಾಹುತ ಸಂಭವಿಸಿದರೆ, ಅದಕ್ಕೆ ಸಂಪೂರ್ಣ ಹೊಣೆಗಾರಿಕೆ ಸಚಿವ ಪ್ರಿಯಾಂಕ್ ಖರ್ಗೆ ಅವರದ್ದೇ” ಎಂದು ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.
ರಾಜಕೀಯ ಪ್ರಭಾವ ಬಳಸಿ ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ ದಿವ್ಯಾ ಹಾಗರಗಿ, ಪರೀಕ್ಷಾ ಅಕ್ರಮಗಳ ವಿಚಾರದಲ್ಲಿ ಯಾವುದೇ ಭೇದಭಾವವಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಪ್ರಕರಣದ ಮೇಲೆ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಹೇಳಿಕೆಗಳೊಂದಿಗೆ ಕಲಬುರಗಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಕಾವು ಹೆಚ್ಚಾಗಿದೆ.

ಹೆಚ್ಚಿನ ಸುದ್ದಿ