Thursday, March 26, 2026
Homeಜಿಲ್ಲಾ ಸುದ್ದಿಗಳುಶಿಕ್ಷಣವು ಜೀವನವನ್ನ ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರ: ವಿನಯಕುಮಾರ ಗಣಾಚಾರಿ

ಶಿಕ್ಷಣವು ಜೀವನವನ್ನ ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರ: ವಿನಯಕುಮಾರ ಗಣಾಚಾರಿ

ಲಿಂಗಸುಗೂರು: ಶಿಕ್ಷಣವು ಒಬ್ಬ ವ್ಯಕ್ತಿಯ ಜೀವನವನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ.
ಶಿಕ್ಷಣವು ಕೇವಲ ಅಕ್ಷರ ಜ್ಞಾನವಲ್ಲ, ಬದಲಾಗಿ ವ್ಯಕ್ತಿತ್ವ ವಿಕಸನ, ಮೌಲ್ಯಗಳ ಕಲಿಕೆ ಮತ್ತು ಯಶಸ್ವಿ ಜೀವನಕ್ಕೆ ಭದ್ರಬುನಾದಿಯಾಗಿದೆ ಎಂದು ಶ್ರೀ ಉಮಾಮಹೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ ಹೇಳಿದರು.
ಅವರು ರವಿವಾರ ಶ್ರೀ ಉಮಾಮಹೇಶ್ವರಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡ ಜ್ಯೂನಿಯರ್ ಜೀನಿಯಸ್ ಅವಾರ್ಡ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣವು ಜ್ಞಾನ, ಕೌಶಲ್ಯ, ಮೌಲ್ಯಗಳು ಮತ್ತು ಅಭ್ಯಾಸಗಳನ್ನು ಕಲಿಯುವ ಪ್ರಕ್ರಿಯೆಯಾಗಿದೆ. ಇದು ವ್ಯಕ್ತಿಗಳು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಸಹಾಯ ಮಾಡುತ್ತದೆ, ಭವಿಷ್ಯದ ಸವಾಲುಗಳಿಗೆ ಅವರನ್ನು ಸಿದ್ಧಪಡಿಸುತ್ತದೆ ಮತ್ತು ಸಮಾಜದ ಪ್ರಗತಿಯನ್ನು ರೂಪಿಸುತ್ತದೆ ಎಂದು ಹೇಳಿದರು.
ವಿಜ್ಞಾನ ವಿಭಾಗದ ಪ್ರಾಚಾರ್ಯ ಜಿ.ವಿ.ಸುರೇಶ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ನಮ್ಮ ಯೋಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಕಾಲಕ್ಕೆ ತಕ್ಕಂತೆ ಹೊಸ ಹೊಸ ಆವಿಷ್ಕಾರದತ್ತ ಮುನ್ನುಗ್ಗಬೇಕು. ಚಿಕ್ಕಂದಿನಿಂದಲೆ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಬೇಕು ಎಂದರು.
ಉಪನ್ಯಾಸಕಿ ಶಶಿರೇಖಾ ಟಿ, ಪ್ರಾಥಮಿಕ ಶಾಲೆ ಮುಖ್ಯೋಪಾದ್ಯಾಯ ಸುವರ್ಣ ತೋಟದ ಮಾತನಾಡಿದರು.
ಸಂಸ್ಥೆಯ ಆಡಳಿತ ಮಂಡಳಿಯ ಅಮರೇಶ ಗಣಾಚಾರಿ, ಮಲ್ಲಿಕಾರ್ಜುನ ಗಣಾಚಾರಿ, ಸಂಯೋಜಕ ಸಂಗಯ್ಯ ಸಿಂದಗಿಮಠ, ಪ್ರೌಢಶಾಲೆ ಮುಖ್ಯಗುರು ಆನಂದ ಹಿರೇಮಠ, ಮೊಹಮ್ಮದ ಪೈಗಂಬರ ಟೆಂಗುಂಟಿ, ಶರಣಬಸು ಹೂಗಾರ, ಮೌನೇಶ ಬಡಿಗೇರ, ರಾಜು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಇದ್ದರು.
ಶಿಕ್ಷಕಿ ಹೇಮ ಜಲದುರ್ಗ ನಿರೂಪಿಸಿದರು, ಶ್ರೀದೇವಿ ನಾಯಕ ವಂದಿಸಿದರು.

1280 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ: ಜ್ಯೂನಿಯರ್ ಜೀನಿಯಸ್ ಅವಾರ್ಡ ಕಾರ್ಯಕ್ರಮದಲ್ಲಿ ಸುಮಾರು 1200 ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಆ ಪೈಕಿ 590 ವಿದ್ಯಾರ್ಥಿಗಳು 5ನೇ ತರಗತಿಯವರು ಮತ್ತು 680 ವಿದ್ಯಾರ್ಥಿಗಳು 7 ತರಗತಿಯಿಂದ ಈ ಪರೀಕ್ಷೆಗೆ ಹಾಜರಾಗಿದ್ದರು.

ಜ್ಯೂ. ಜೀನಿಯಸ್ ಅವಾರ್ಡ ಪಡೆದ ವಿದ್ಯಾರ್ಥಿಗಳು:
5ನೇ ತರಗತಿ ಜ್ಯೂ. ಜೀನಿಯಸ್ ಅವಾರ್ಡನಲ್ಲಿ ಲಿಂಗಸೂಗುರಿನ ಎಕ್ಸ್ಪರ್ಟ್ ಪಬ್ಲಿಕ್ ಶಾಲೆಯ ಮಲ್ಲಿಕಾರ್ಜುನ ಪ್ರಭುಗೌಡ ಪಾಟೀಲ (ಮೊದಲ ಬಹುಮಾನ), ಮರಂಗಂಟನಾಳ ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆಯ ಅಭಿಷೇಕ ದೇವಣ್ಣ (ಎರಡನೇ ಬಹುಮಾನ), ಅಡವಿಭಾವಿಯ ಸರಕಾರಿ ಹಿ.ಪ್ರಾ. ಶಾಲೆಯ ವಿವೇಕ ಮಲ್ಲಿಕಾರ್ಜುನ (ಮೂರನೇ ಬಹುಮಾನ), ಹಟ್ಟಿ ಸೆಂಟ್ ಅನ್ನೆಸ್ ಶಾಲೆಯ ಶಾಶ್ವತ ಶರಣಬಸಪ್ಪ (ನಾಲ್ಕನೆ ಬಹುಮಾನ), ನಾಗಬೇನಾಳದ ಸರಕಾರಿ ಹಿ.ಪ್ರಾ. ಶಾಲೆಯ ಪ್ರವೀಣ್ ಯಮನಪ್ಪ ಐದನೇ ಬಹುಮಾನ ಪಡೆದರು.
ಇನ್ನೂ 7 ನೇ ತರಗತಿಯ ಜ್ಯೂ. ಜೀನಿಯಸ್ ಅವಾರ್ಡನಲ್ಲಿ ಹುನಗುಂದ ಆದರ್ಶ ವಿದ್ಯಾಲಯದ ಪ್ರಣೀತ ಬಸಾಪೂರ (ಮೊದಲನೆ ಬಹುಮಾನ), ಲಿಂಗಸುಗೂರು ಆದರ್ಶ ವಿದ್ಯಾಲಯದ ಅರುಂಧತಿ ಜಗದೀಶ (ಎರಡನೇ ಬಹುಮಾನ), ಲಿಂಗಸೂಗೂರು ಶ್ರೀ ಉಮಾಮಹೇಶ್ವರಿ ಇಂಟರ ನ್ಯಾಷನಲ್ ಶಾಲೆಯ ಭೂಮಿಕಾ ಮಲ್ಲಿಕಾರ್ಜುನ (ಮೂರನೇ ಬಹುಮಾನ), ಲಿಂಗಸೂಗೂರು ಶ್ರೀ ಉಮಾಮಹೇಶ್ವರಿ ಇಂಟರ ನ್ಯಾಷನಲ್ ಶಾಲೆಯ ಶ್ರಾವಣಿ ಅಮರೇಶ (ನಾಲ್ಕನೆ ಬಹುಮಾನ), ಹುನಗುಂದ ಆದರ್ಶ ವಿದ್ಯಾಲಯದ
ಮರಿಸ್ವಾಮಿ ಮಹಾಂತೇಶ (ಐದನೇ) ಬಹುಮಾನ ಪಡೆದರು. ವಿಜೇತರಿಗೆ ಸಂಸ್ಥೆಯು ನಗದು ಬಹುಮಾನ ಹಾಗೂ ಟ್ರೋಪಿ ನೀಡಿ ಗೌರವಿಸಲಾಯಿತು.

ಫೋಟೊ1: ಶ್ರೀ ಉಮಾಮಹೇಶ್ವರಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡ ಜ್ಯೂನಿಯರ್ ಜೀನಿಯಸ್ ಅವಾರ್ಡನಲ್ಲಿ ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ ಮಾತನಾಡಿದರು.

ಫೋಟೊ2: ಶ್ರೀ ಉಮಾಮಹೇಶ್ವರಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡ ಜ್ಯೂನಿಯರ್ ಜೀನಿಯಸ್ ಅವಾರ್ಡನಲ್ಲಿ ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ ಮಾತನಾಡಿದರು.

ಫೋಟೊ3: ಶ್ರೀ ಉಮಾಮಹೇಶ್ವರಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡ ಜ್ಯೂನಿಯರ್ ಜೀನಿಯಸ್ ಅವಾರ್ಡನಲ್ಲಿ ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ ಅವರಿಂದ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೆಚ್ಚಿನ ಸುದ್ದಿ