Sunday, April 12, 2026
Homeಜಿಲ್ಲಾ ಸುದ್ದಿಗಳುಶಾಸಕ ಯತ್ನಾಳ್ ಸಿಎಂ ಆಗಲೆಂದು 500 ಕಿ.ಮೀ ಮರಗಾಲು ಪಾದಯಾತ್ರೆ: ಅಭಿಮಾನಿಗೆ ಭವ್ಯ ಸನ್ಮಾನ

ಶಾಸಕ ಯತ್ನಾಳ್ ಸಿಎಂ ಆಗಲೆಂದು 500 ಕಿ.ಮೀ ಮರಗಾಲು ಪಾದಯಾತ್ರೆ: ಅಭಿಮಾನಿಗೆ ಭವ್ಯ ಸನ್ಮಾನ

ಇಂಡಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹರಸಿ, ವಿಜಯಪುರ ಜಿಲ್ಲೆಯ ಸಾತಲಗಾಂವ ಪಿ.ಐ ಗ್ರಾಮದ ಹಾಲುಮತ ಸಮಾಜದ ಯುವಕ ನಾಗಪ್ಪ ಬಮಗೊಂಡ ಕೈಗೊಂಡಿದ್ದ ಸಾಹಸಮಯ ಪಾದಯಾತ್ರೆಗೆ ಸ್ವತಃ ಶಾಸಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಿಯವರೆಗೆ ಸುಮಾರು 500 ಕಿಲೋಮೀಟರ್ ದೂರವನ್ನು ಮರಗಾಲು ಕಟ್ಟಿಕೊಂಡೇ ಕ್ರಮಿಸಿದ ನಾಗಪ್ಪ ಮತ್ತು ಅವರ ಗ್ರಾಮಸ್ಥರು ಇಂದು ಬಸನಗೌಡ ಪಾಟೀಲ್ ಯತ್ನಾಳ ರವರು ನಾದ ಕೆ.ಡಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವಿಷಯ ತಿಳಿದು ಮಾರ್ಗ ಮಧ್ಯೆ ಗಂಗಮ್ಮ ವಸ್ತಿ ಬಳಿ ಭವ್ಯವಾಗಿ ಸ್ವಾಗತಿಸಿ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಅಭಿಮಾನಿಯನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್, “ನಿಸ್ವಾರ್ಥ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮರಗಾಲು ಕಟ್ಟಿಕೊಂಡು ಇಷ್ಟು ದೂರ ಪಾದಯಾತ್ರೆ ಮಾಡುವುದು ಅಭಿಮಾನಿಯ ಮನಸ್ಸಿನ ನಿರ್ಮಲತೆ ಮತ್ತು ಧೈರ್ಯವನ್ನು ತೋರಿಸುತ್ತದೆ. ಇಂತಹ ಪ್ರೀತಿ ಮತ್ತು ಕೃತಜ್ಞತೆಗಳಿಗೆ ನಾನು ಸದಾ ಋಣಿಯಾಗಿರುತ್ತೇನೆ” ಎಂದು ಭಾವುಕರಾಗಿ ನುಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ