Monday, February 9, 2026
Homeಜಿಲ್ಲಾ ಸುದ್ದಿಗಳುಶಾಲಾ ಅಭಿವೃದ್ಧಿ ಸಮಿತಿ ರಚನೆ: ಮಹದೇವಪ್ಪ ಬಸರಿಕಟ್ಟಿ ಅಧ್ಯಕ್ಷ

ಶಾಲಾ ಅಭಿವೃದ್ಧಿ ಸಮಿತಿ ರಚನೆ: ಮಹದೇವಪ್ಪ ಬಸರಿಕಟ್ಟಿ ಅಧ್ಯಕ್ಷ

ಶಿಗ್ಗಾಂವ: ತಾಲೂಕಿನ ಕುನ್ನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಅಭಿವೃದ್ಧಿ ಸಮಿತಿ ರಚನೆ ಇತ್ತೀಚೆಗೆ ರಚನೆಯಾಗಿದ್ದು ಮಹದೇವಪ್ಪ ಬಸರಿಕಟ್ಟಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ನಿರ್ಮಲಾ ಹಿರೇಮಠ ಅವರು ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದು ಸದಸ್ಯರಾಗಿ ಗಣಪತಿ ಬಾರ್ಕಿ, ಕರಬಸಪ್ಪ ಓಲೇಕಾರ, ರವಿ ಲಮಾಣಿ, ಬಸವರಾಜ ಬೂದಿಹಾಳ, ವಿಠ್ಠಲ ಮೂಳೆ, ಉಳವಯ್ಯ ಹಿರೇಮಠ, ಪ್ರಭುಲಿಂಗಯ್ಯ ಹಿರೇಮಠ, ಅಮೀರಬಿ ಪಿಟಗಿ, ಅಕ್ಕವ್ವ ಬಾರ್ಕಿ, ಬಸವ್ವ ಮಮದಾಪೂರ, ಮಾದೇವಿ ಓಲೇಕಾರ, ರತ್ನವ್ವ ಕೋಳೂರ, ರೂಪಾ ಹಡಪದ, ಸವಿತಾ ಕರಡಿ, ದೀಪಾ ಸೂರಲಗಿ, ಆಸ್ಪಕಲೀ ಮತ್ತೆಖಾನ ಅವರು ಆಯ್ಕೆ ಆಗಿದ್ದಾರೆ.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್ ಎಸ್ ಪಾವಿನ, ಅಧ್ಯಕ್ಷರಾದ ಮಂಜುಳಾ ಉಪ್ಪಾರ, ಉಪಾಧ್ಯಕ್ಷರಾದ ಶ್ರೀಕಾಂತವ್ವ ಮೊರಬದ ಸದಸ್ಯ ಬಸನಗೌಡ ಬ್ಯಾಹಟ್ಟಿ, ಹಿರಿಯ ಪತ್ರಕರ್ತ ಬಿ.ಎಸ್ ಹಿರೇಮಠ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಿಂಗಪ್ಪ ಮಾದರ, ಸರ್ಕಾರಿ ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಮೈಲಾರಪ್ಪ ಮಮದಾಪುರ, ಮುಖಂಡ ಯಲ್ಲಪ ನವಲೂರ, ಅಬ್ದುಲಸಾಬ ಮುಲ್ಲಾ, ನಾಗರಾಜ ನಡಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ