ಚನ್ನಮ್ಮನ ಕಿತ್ತೂರು: – ರಾಜ್ಯ ಸರ್ಕಾರವು ವಿದ್ಯುತವನ್ನು ಖಾಸಗಿಕರಣಗೊಳಿಸಲು ಹೊರಟಿರುವದನ್ನು ಖಂಡಿಸಿ ಜೂನ್ 29 ರಂದು ಕಿತ್ತೂರು ಕರ್ನಾಟಕ ರೈತ ಸಂಘ ಮತ್ತು ವಿವಿಧ ಸಂಘಟನೆಗಳು ಸೇರಿದಂತೆ ವಿದ್ಯುತ್ ಬಳಸುವ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಕಿತ್ತೂರು ಕರ್ನಾಟಕ ರೈತ ಸಂಘ ರಾಜ್ಯಧ್ಯಕ್ಷರಾದ ಎಂ ಎಫ್ ಜಕಾತಿ ಅವರು ಹೇಳಿದರು.
ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಣಿ ಚನ್ನಮ್ಮಜಿಯವರ ವೃತ್ತದಿಂದ ಬೆಳಗ್ಗೆ 10 ಗಂಟೆಗೆ ಸೇರಿ ಅಲ್ಲಿಂದ ತಹಶೀಲ್ದಾರ್ ಕಚೇರಿವರೆಗೆ ಸಾಗಿ ಮನವಿ ಸಲ್ಲಿಸಲಿದ್ದೇವೆ ವಿದ್ಯುತ ಖಾಸಗೀಕರಣವಾದರೆ ಎಲ್ಲರಿಗೂ ತೊಂದರೆಯಾಗುವದೆಂದು ಎಂದು ಹೇಳಿದರು.
ಕರ್ನಾಟಕ ಜಾಗೃತಿ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ ಅವರು ಮಾತನಾಡಿ ವಿದ್ಯುತ ಜನರ ಮೂಲಭೂತ ಹಕ್ಕಾಗಿದ್ದು ಅದನ್ನು ವ್ಯಾಪರದ ವಸ್ತುವಾಗಿ ಪರಿಗಣಿಸಬಾರದು ಸಾರ್ವಜನಿಕರ ಅಭಿಪ್ರಾಯವನ್ನು ಗೌರವಿಸಿ ಸರ್ಕಾರ ಖಾಸಗೀಕರಣ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ತಾಲೂಕ ಅಧ್ಯಕ್ಷರಾದ ಪ್ರವೀಣ ಸರದಾರ ಅವರು ಮಾತನಾಡಿ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಪ್ರಯತ್ನವನ್ನು ರೈತ ಸಮುದಾಯ ವಿರೋಧಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ಶಿಂದೆ, ಜಿಎಸ್ ಹಿರೇಮಠ, ಮಡಿವಾಳಪ್ಪ ವಪಗಣ್ಣವರ,ಸತೀಶ ಲಂಗೋಟಿ, ಮತ್ತು ಮಂಜು ಸರದಾರ, ಉಪಸ್ಥಿತಿದ್ದರು.
ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)
