Wednesday, April 1, 2026
Homeಜಿಲ್ಲಾ ಸುದ್ದಿಗಳುವಿಜಯಪುರ: ಕ್ರೀಡಾ ಸಾಧಕ ಬಸವರಾಜ ಬಾಗೇವಾಡಿ ಅವರಿಗೆ ಸನ್ಮಾನ

ವಿಜಯಪುರ: ಕ್ರೀಡಾ ಸಾಧಕ ಬಸವರಾಜ ಬಾಗೇವಾಡಿ ಅವರಿಗೆ ಸನ್ಮಾನ

ವಿಜಯಪುರ: ನಗರದ ಶಿವಾನುಭವ ಮಂಟಪದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ದೇಶಿ ಮತ್ತು ವಿದೇಶಿ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಹಾಗೂ ವಿವಿಧ ಕ್ರೀಡೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಉತ್ನಾಳ ಗ್ರಾಮದ ನಿವಾಸಿ ಶ್ರೀ ಬಸವರಾಜ ನಂ. ಬಾಗೇವಾಡಿ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇದಿಕೆಯಲ್ಲಿ ಸಂಘದ ವತಿಯಿಂದ ‘ಕಿತ್ತೂರು ಚೆನ್ನಮ್ಮ ಪ್ರಥಮ ಮಹಿಳಾ ಸಾಧನಾ ಸದ್ಭಾವನಾ ಪ್ರಶಸ್ತಿ’, ‘ಆದರ್ಶ ದಂಪತಿ ಪ್ರಶಸ್ತಿ’, ನಿವೃತ್ತ ಮಹಿಳಾ ನೌಕರರಿಗೆ ಸನ್ಮಾನ ಹಾಗೂ ೧೦ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಮತಿ ಲತಾ ಎಂ. ಬಿರಾದಾರ ಅವರು ಮಾತನಾಡಿ, ಮಹಿಳಾ ನೌಕರರ ಹಿತರಕ್ಷಣೆಯ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘದ ಆಶಯವಾಗಿದೆ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳು, ಸರ್ಕಾರಿ ಮಹಿಳಾ ನೌಕರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ