ಹಾವೇರಿ : ಮಾಜಿ ಮುಖ್ಯಮಂತ್ರಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಯವರು ತಮ್ಮ ವಂಶಪಾರಂಪರಿಕ ರಾಜಕೀಯಕ್ಕೆ ಬಿಜೆಪಿ ಬೆಂಬಲಿಸುತ್ತಿರುವುದು ವಿಷಾದನಿಯ ತತ್ವ ಸಿದ್ದಾಂತದ ತಳಹದಿ ಮೇಲೆ ಸಾಮಾನ್ಯ ಕಾರ್ಯಕರ್ತರ ಶ್ರಮದಿಂದ ಕಟ್ಟಿದ ಪಕ್ಷ ಬಿಜೆಪಿ.ಕಾಂಗ್ರೆಸ್ ಪಕ್ಷ ವಂಶ ಪಾರಂಪರಿಕ ಪಕ್ಷ ಎಂದು ಬೊಬ್ಬೆ ಹಾಕುತ್ತಿದ ಬಿಜೆಪಿ ನಾಯಕರು ಇವತ್ತು ಬೊಮ್ಮಯಿ ಕುಟುಂಬದ ಮೂರನೆ ತಲೆಮಾರಿಗೆ ಶಿಗ್ಗಾಂವ ಎಂಎಲ್ಎ ಟಿಕೆಟ ನೀಡಿ ಕುಟುಂಬ ರಾಜಕಾರಣ ಮಾಡುತ್ತಿರುವದು ಕಾರ್ಯಕರ್ತರಿಗೆ ಮತ್ತು ದೇಶಕ್ಕೆ ಮಾಡಿದ ದ್ರೋಹ ಎಂದು ಹಾವೇರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಶಿಗ್ಗಾಂವಿ ಉಪಚುಣಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿಲು ರಾಜ್ಯ ಶ್ರೀರಾಮ ಸೇನೆ ಕೆಲಸ ಮಾಡುತ್ತದೆ ದೇಶ ಮತ್ತು ರಾಜ್ಯದಲ್ಲಿ ಕುಟುಂಬ ರಾಜಕೀಯವನ್ನು ಶ್ರೀರಾಮ ಸೇನೆ ವಿರೋಧಿಸುತ್ತೆದೆ ಎಂದು ಹೇಳಿದರು