
ಲಿಂಗಸುಗೂರು: ತಾಲೂಕಿನ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದ ಕೃಷಿ ಉಪನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಿಸುವ ಸರ್ಕಾರದ ಆದೇಶದ ವಿರುದ್ಧ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಅವರು ಬೆಳಗಾವಿ ಶಾಸಕಾಂಗ ಅಧಿವೇಶನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಷಯವನ್ನು ಶೂನ್ಯಾವಧಿ ಪ್ರಶ್ನೆ ಅವಧಿಯಲ್ಲಿ ಉಗ್ರವಾಗಿ ಪ್ರಸ್ತಾಪಿಸಿದ ಶಾಸಕ ವಜ್ಜಲ್ ಅವರು, “ಲಿಂಗಸಗೂರು ತಾಲೂಕು ವ್ಯಾಪಕ ಕೃಷಿ ಆಧಾರಿತ ಪ್ರದೇಶ. ಇಲ್ಲಿ ಬೆಳೆಗಾರರು, ರೈತ ಸಂಗ್ರಹ ಕೇಂದ್ರಗಳು ಮತ್ತು ಯೋಜನಾ ಕಛೇರಿಗಳು ಇರುವ ಸಂದರ್ಭದಲ್ಲಿ, ಕೃಷಿ ಉಪನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಿಸುವುದು ಸಂಪೂರ್ಣ ಅಸಮಂಜಸ. ಇದು ರೈತರ ಹಿತಕ್ಕೆ ವಿರುದ್ಧ” ಎಂದು ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದರು.

