Thursday, March 26, 2026
Homeಧಾರ್ಮಿಕಲಿಂಗಸಗುರು ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ: ಮಾರ್ಚ್ 31ರಂದು ಬೃಹತ್ ಶೋಭಾಯಾತ್ರೆ

ಲಿಂಗಸಗುರು ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ: ಮಾರ್ಚ್ 31ರಂದು ಬೃಹತ್ ಶೋಭಾಯಾತ್ರೆ

ಲಿಂಗಸಗುರು: ಲಿಂಗಸ್ಗೂರ ತಾಲೂಕು ಕ್ಷತ್ರಿಯ ಸಮಾಜ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸನಾತನ ಧರ್ಮದ ರಕ್ಷಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ. ಈ ಸಂಭ್ರಮದ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ವಿಜೃಂಭಣೆಯ ಶೋಭಾಯಾತ್ರೆ:
ಬರುವ ಮಾರ್ಚ್ 31, 2026 ರಂದು ಮಧ್ಯಾಹ್ನ 2:00 ಗಂಟೆಗೆ ಸ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಿಂದ ಶೋಭಾಯಾತ್ರೆಯು ಆರಂಭಗೊಳ್ಳಲಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿರುವ ಈ ಮೆರವಣಿಗೆಯು ದೇಶ ಭಕ್ತರ ಹಾಗೂ ಹಿಂದು ಧರ್ಮದ ರಕ್ಷಕರ ಹರ್ಷೋದ್ಗಾರ ಹಾಗೂ ಜೈಘೋಷಗಳ ನಡುವೆ ಸಾಗಿ ಬರಲಿದೆ.

ಪ್ರಮುಖ ಕಾರ್ಯಕ್ರಮ:
ಅಂದು ಸಂಜೆ 5:00 ಗಂಟೆಗೆ ಗ್ರಾಮದ ದೊಡ್ಡ ಹನುಮಂತ ದೇವಸ್ಥಾನದ ಆವರಣದಲ್ಲಿ ಜಯಂತ್ಯುತ್ಸವದ ಪ್ರಮುಖ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಗಣ್ಯರು ಭಾಗವಹಿಸಿ ಶಿವಾಜಿ ಮಹಾರಾಜರ ಶೌರ್ಯ ಹಾಗೂ ಆದರ್ಶಗಳ ಕುರಿತು ಮಾತನಾಡಲಿದ್ದಾರೆ.

ಗಣ್ಯರ ಉಪಸ್ಥಿತಿ:
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಜಯಪುರದ ಶಾಸಕರು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬೀದರ್‌ನ ಹಿರಿಯ ವಕೀಲರಾದ ಶ್ರೀ ಈಶ್ವರ ಸಿಂಗ್ ಠಾಕೂರ್ ಅವರು ಆಗಮಿಸಲಿದ್ದಾರೆ.
“ಧರ್ಮೋ ರಕ್ಷತಿ ರಕ್ಷಿತಃ” ಎಂಬ ಸಂದೇಶದೊಂದಿಗೆ ಆಯೋಜಿಸಲಾಗಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ರಾಯಚೂರು ಜಿಲ್ಲೆಯ ಸರ್ವ ತಾಲ್ಲೂಕಿನ ಜನರು ಹಾಗೂ ಯಾದಗಿರ,ಕೊಪ್ಪಳ,ಬಾಗಲಕೋಟ ಜಿಲ್ಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ

ಹೆಚ್ಚಿನ ಸುದ್ದಿ