Monday, February 9, 2026
Homeಜಿಲ್ಲಾ ಸುದ್ದಿಗಳುಲಯನ್ಸ ಕ್ಲಬ್ ವತಿಯಿಂದ ಶಿಕ್ಷಕರಿಗೆ ಸನ್ಮಾನಸಮಾರಂಭ ಗಂಗಾವತಿ: ನಗರದಲ್ಲಿ ನಡೆದ ಭವ್ಯ ಸನ್ಮಾನ ಸಮಾರಂಭದಲ್ಲಿ ಶಿಕ್ಷಕರನ್ನು...

ಲಯನ್ಸ ಕ್ಲಬ್ ವತಿಯಿಂದ ಶಿಕ್ಷಕರಿಗೆ ಸನ್ಮಾನಸಮಾರಂಭ ಗಂಗಾವತಿ: ನಗರದಲ್ಲಿ ನಡೆದ ಭವ್ಯ ಸನ್ಮಾನ ಸಮಾರಂಭದಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು.

ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲ. ಡಾ|| ಜಿ. ಚಂದ್ರಪ್ಪ .ಅಧ್ಯಕ್ಷರು ಲಯನ್ಸ ಚಾರಿಟೇಬಲ್ ಟ್ರಸ್ಟ್. ವಹಿಸಿದ್ದು, ಪ್ರಧಾನ ಕಾರ್ಯದರ್ಶಿಗಳಾದ ಲ. ಡಾ|| ಜಂಬುನಾಥಗೌಡ, ರಾಜ್ಯದ ಐಎಂಎ ಅಧ್ಯಕ್ಷರಾದ ಲಯನ್ ಡಾ. ಚಿನಿವಾಲರು, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಡಾ. ಶಿವಕುಮಾರ್ ಮಾಲಿಪಾಟೀಲ್ (ಪ್ರಾಸ್ತಾವಿಕಬಾಷಣ), ಖಜಾಂಚಿಗಳಾದ ಲಯನ್ ಶಿವಕುಮಾರ್ ಗಾಳಿ, ವಕೀಲರಾದ ಪಟ್ಟಣಶೆಟ್ಟಿ, ಲ. ಸಿದ್ದಣ್ಣ ಜಕ್ಲಿ, ಲ. ಡಾ. ಸೋಮಪ್ಪ, ಲ. ಪ್ರಭು, ಹಾಗೂ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಚಂದ್ರೆಗೌಡ ಪೊಲೀಸ್ ಪಾಟೀಲ್ ಉಪಸ್ಥಿತರಿದ್ದರು.ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಸೂಚಿಸಿದ ಶಿಕ್ಷಕರ ಪಟ್ಟಿ .ಶ್ರೀ ಮಧು ಕುಮಾರ್ ಕುಲಕರ್ಣಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಪುರ

ಶ್ರೀ ಯಮನೂರ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸಕೆರೆ ಡಗ್ಗಿ

ಶ್ರೀ ಮೆಹಬೂಬ್ ಕಿಲ್ಲೇದಾರ್
ಶ್ರೀ ಶರಣಬಸವೇಶ್ವರ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಕಾರಟಗಿ

ಶ್ರೀಮತಿ ವಿಜಯ ದೊಡ್ಡಬಿದರಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಕೇರ

ಲಯನ್ಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶನ ಮೇರೆಗೆ ಆಯ್ಕೆಯಾದ ಶಿಕ್ಷಕರ ಪಟ್ಟಿ

ಶ್ರೀಮತಿ ಕಾಳಮ್ಮ
ಶ್ರೀಮತಿ ಶರಣಮ್ಮ
ಶ್ರೀ ಪರಸುರಾಮ್. ಸನ್ಮಾನ ,ಸನ್ಮಾನಿತ ಶಿಕ್ಷಕರಿಗೆ ಹೂವು, ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ತಮ್ಮ ಸಮಾಜಮುಖಿ ಸೇವೆಯ ಮೂಲಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೋರಿದ ಶ್ರದ್ಧೆ ಮತ್ತು ತ್ಯಾಗದ ಬೆಲೆಮಟ್ಟಕ್ಕೆ ಈ ಸನ್ಮಾನ ನೀಡಲಾಗಿದೆ.ಈ ಸಂದರ್ಭದಲ್ಲಿ ಭಾಷಣ ಮಾಡಿದ ಅತಿಥಿಗಳು, ಶಿಕ್ಷಕರು ಸಮಾಜದ ಬೆಳಕಾಗಿದ್ದು, ಹೊಸ ಪೀಳಿಗೆಯ ಭವಿಷ್ಯವನ್ನು ಕಟ್ಟುವ ಶ್ರೇಷ್ಠ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೊಗಳಿದರು. ಸಮಾಜದ ಪ್ರತಿಯೊಬ್ಬರೂ ಶಿಕ್ಷಕರಿಗೆ ಗೌರವ ತೋರಬೇಕು ಎಂಬ ಸಂದೇಶ ನೀಡಿದರು.ಕಾರ್ಯಕ್ರಮದಲ್ಲಿ ಅನೇಕರಾದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಭಾಗವಹಿಸಿ ಸನ್ಮಾನಿತರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು.💐💐

ವರದಿ-ಆಂಜನೆಯ.ಮಟ್ಟೂರ

ಹೆಚ್ಚಿನ ಸುದ್ದಿ