Monday, December 23, 2024
HomeUncategorizedರೈತರ ಪರ ಸಂಘಟನೆಯಿಂದ ಕೊಡೇಕಲ್ ನಲ್ಲಿ ಸೋಮುವಾರ ಪ್ರತಿಭಟನೆಗೆ ರೈತರಿಗೆ ಕರೆ : ಕ.ರ.ವೇ ಅಧ್ಯಕ್ಷರು...

ರೈತರ ಪರ ಸಂಘಟನೆಯಿಂದ ಕೊಡೇಕಲ್ ನಲ್ಲಿ ಸೋಮುವಾರ ಪ್ರತಿಭಟನೆಗೆ ರೈತರಿಗೆ ಕರೆ : ಕ.ರ.ವೇ ಅಧ್ಯಕ್ಷರು ಹಣಮಗೌಡ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೇಕಲ್ ಹೋಬಳಿಯ ಸಮೀಪದ ಮದಲಿಂಗನಾಳ ಗ್ರಾಮದ ದ್ಯಾಮಣ್ಣ ತಂ/ಈರಪ್ಪ ಬಿಜೂರು ರೈತರಿಗೆ ಕೊಡೇಕಲ್ ಗ್ರಾಮದ ಪ್ರಶಾಂತ ಅಸ್ರೋ ಏಜೆನ್ಸಿ ಇವರು 2024-25ನೇ ಸಾಲಿನ ಮುಂಗಾರು ಹಂಗಾಮಿನ ತೊಗರಿ ಬಿತ್ತನೆ ಬೀಜನೆ ಮಾರಾಟ ಮಾಡಿರುತ್ತಾರೆ..

ದ್ಯಾಮಣ್ಣ ತಂ/ಈರಪ್ಪ ಬಿಜೂರು ತಮ್ಮ 5 ಎಕರೆ ಜಮೀನಿನಲ್ಲಿ ಖರೀದಿಸಿದ ಬೀಜಗಳನ್ನು ಉಳುಮೆಮಾಡಿದ್ದು ಸಂಪೂರ್ಣ 5 ಎಕರೆಯಲ್ಲಿ ಒಂದು ಹಿಡಿಯಷ್ಟು ಸಹ ಬೆಳೆ ಬರದಿರುವುದು ವಿಪರ್ಯಾಸ ಅದರ ಜೊತ್ತೆಯಲ್ಲಿ , ಸಾಬವ್ವ ಗಂಡ ನಿಂಗಪ್ಪ ಸರ್ವೇ ನಂ- 5ರಲ್ಲಿ 5 ಎಕರೆ , ನಿಂಗಪ್ಪ ತಂದೆ ಸಿರಿಮುತ್ತೇಪ್ಪ ಸಾರ್ವೇ ನಂ- 9ರಲ್ಲಿ 4 ಎಕರೆ, ಜೆಟ್ಟವ್ವ ಗಂಡ ಬಸಪ್ಪ ಹುಲಿಬೆಂಚಿ ಸಾರ್ವೇ ನಂ-76/1 ರಲ್ಲಿ 4 ಎಕರೆ. ಹೀಗೆ ಹಲವಾರು ರೈತರಿಗೆ ಅನ್ಯಾಯವಾಗಿದೆ.

ಭೂಮಿಗೆ ಹೋಗಿ ನೋಡಿದರೆ ಮೆಲ್ನೋಟಕ್ಕೆ ತೊಗರಿ ಬೆಳೆಗಳು ಜಮೀನಿನಲ್ಲಿ ಇದ್ದರೂ ಸಹ ಅವುಗಳೆಲ್ಲಾ ಉತ್ಪನ್ನಬಾರದ ಬೆಳೆಗಳಾಗಿವೆ. ಕೇವಲ ಇದು ಒಬ್ಬ ರೈತನ ಗೋಳಲ್ಲ ಇವರ ಅಂಗಡಿಯಿಂದ ಖರೀದಿಸಿದ ಬೀಜ ಹಲವಾರು ರೈತರ ಪಾಲಿಗೆ ಕಳಪೆ ಬೀಜವು ಶಾಪವಾಗಿ ಪರಿಣಮಿಸಿದೆ.

ಇಂತಹ ಬೀಜ ವಿತರಣೆ ಮಾಡಿದ ಅಂಗಡಿ ಮಾಲೀಕರ ಪರವಾನಗಿಯನ್ನು ಈ ಕೂಡಲೇ ರದ್ದುಗೊಳಿಸಿ ಮತ್ತು ಬೀಜದ ಕಂಪನಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು, ಹಾಗೆ ಅನ್ಯಾಯಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಕೊಡಿಸಲು ಕರ್ನಾಟಕ ರೈತರ ವೇಧಿಕೆ (ಟಿ.ಎ.ನಾರಾಯಣಗೌಡ ಬಣ) ಕೊಡೇಕಲರವರ ವತಿಯಿಂದ ಸೋಮವಾರದಂದು ಹೋರಾಟ ಹಮ್ಮಿಕೊಂಡಿದ್ದು.

ಕ.ರ.ವೇ ಹುಣಸಗಿ ತಾಲ್ಲೂಕು ಅಧ್ಯಕ್ಷರು ಬಸವರಾಜ ಚನ್ನೂರು, .ಕ.ರ.ವೇ ಅಧ್ಯಕ್ಷರು ಹಣಮಗೌಡ,ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಾಮೋಹಿಕ ನಾಯಕತ್ವ ಹುಣಸಗಿ ತಾಲೂಕ ಪ್ರಧಾನ ಕಾರ್ಯದರ್ಶಿ ಅವಿನಾಶ ನಾಯಕ. ಕರವೇ ಬಸವರಾಜ ಕೊಂಡಗುಳಿ, ಮೊಲಾಲಿ ಸೈಯದ್, ರಾಮಲಿಂಗ ಗುಲಬಾಳ, ಅಮರೇಶ ಗುಡಗುಂಟ್ಟಿ, ನಜೀರ ಸಾಬ್ ತಮದೊಡ್ಡಿ, ರಮೇಶ ಜಿರಳ, ಈ ಕುರಿತು ಇಂದು ಪತ್ರಿಕಾಗೋಷ್ಠಿ ಮಾಡಲಾಯಿತು.

ಜಿಲ್ಲಾ ವರದಿಗಾರರು : ಶಿವು ರಾಠೋಡ ಯಾದಗಿರಿ

ಹೆಚ್ಚಿನ ಸುದ್ದಿ