Monday, February 9, 2026
HomeUncategorizedರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್: ಮಲ್ಲನಗೌಡ ಆರೊಪ.

ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್: ಮಲ್ಲನಗೌಡ ಆರೊಪ.

ಯಾದಗಿರಿ : ಕೇಂದ್ರದ ಈ ಬಜೆಟ್ ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಇದಾಗಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಆರೋಪಿಸಿದ್ದಾರೆ. ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಕೃಷಿ ಸಾಲ ಮನ್ನಾ ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ ವಹಿಸಿದೆ ರೈತರ ಬಹುದಿನದ ಬೇಡಿಕೆಗಳಾದ ಮೇಕೆದಾಟು ಮಹಾದಾಯಿ ಕೃಷ್ಣ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ ರೈತರಿಗೆ 5 ಲಕ್ಷದವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್ ನಾಮ್ಕೆವಾಸ್ತೆ ಅಷ್ಟೇ ಅದು ರೈತರಿಗೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಮತ್ತು ರೈತರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ ಕಿಸಾನ್ ಸಮ್ಮಾನ್ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕಿತ್ತು ರಸಗೊಬ್ಬರ ಬೆಲೆಗಳ ಇಳಿಕೆಯು ಹುಷಿಯಾಗಿದೆ ದಶಕಗಳಿಂದ ದೇಶದ ರೈತರು ಅವಮಾನ ವೈಪರಿತ್ಯದಂತಹ ಭೀಕರ ಸಮಸ್ಯೆಗೆ ತುತ್ತಾಗುದ್ದಾರೆ ಅದರ ನಿಯಂತ್ರಣಕ್ಕೆ ಯಾವುದೇ ರೀತಿಯಾದ ಪರಿಣಾಮಕಾರಿ ಪರಿಹಾರ ಕ್ರಮ ಘೋಷಿಸಿಲ್ಲ ಒಟ್ಟಾರೆಯಾಗಿ ಕೇಂದ್ರದ ಬಜೆಟ್ ರೈತ ಸಮುದಾಯವನ್ನು ಸಂರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಹಾಗೂ ರೈತ ಸಂಘಟನೆಯ ಮುಖಂಡರಾದ ವೆಂಕೋಬ ಕಟ್ಟಿಮನಿ, ಮೈಪಾಲರೆಡ್ಡಿ ಪಾಟೀಲ್, ದೇವೇಂದ್ರಪ್ಪ ಕೋಲ್ಕಾರ್, ವಿದ್ಯಾಧರ್ ಜಾಕ, ಮುತ್ತುಗೌಡ ಪರಸನಳ್ಳಿ, ಶರಣು ಜಡಿ , ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ವರದಿಗಾರರು : ಶಿವು ರಾಠೋಡ ಯಾದಗಿರಿ

ಹೆಚ್ಚಿನ ಸುದ್ದಿ