ಅಥಣಿ :ಭಾರತ ಕೃಷಿ ಪ್ರಧಾನ ದೇಶ. ಶೇ 68 ಭಾಗ ಕೃಷಿ ವ್ಯವಸ್ಥೆ ಹೊಂದಿದ್ದೇವೆ.ಕೃಷಿಯಲ್ಲಿ ವಿನೂತನ ಪ್ರಯೋಗ ಮಾಡುವುದು ಅವಶ್ಯಕತೆ ಇದೆ. ಮಂಜುನಾಥ ಹುಲಸದಾರ ಇಂತಹ ಉತ್ತಮ ವಿನೂತನ ಪ್ರಯೋಗ ಮಾಡಿದ್ದಾರೆ.ರೈತರು ಆಧುನಿಕ ಕೃಷಿಯತ್ತ ಮುಖಮಾಡಿ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕರೆ ನೀಡಿದರು.
ತಾಲೂಕಿನ ರಡ್ಡೆರಹಟ್ಟಿ ಗ್ರಾಮದಲ್ಲಿ ಹುಲಸದಾರ ತೋಟದಲ್ಲಿ ಮಂಜುನಾಥ ಹುಲಸದಾರ ಅವರ ನೇತೃತ್ವದಲ್ಲಿ ಸ್ವಯಂ ಚಾಲಿತ ರೇಷ್ಮೆ ನೂಲು ತೆಗೆಯುವ ಘಟಕಕ್ಕೆ ಮಾಜಿ ಉಪಮುಖ್ಯ ಮಂತ್ರಿ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಶಂಕುಸ್ಥಾಪನೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡುತ್ತ ಮಾನವನಿಗೆ ಅನ್ನ, ಬಟ್ಟೆ, ಅವಶ್ಯಕತೆ ಇರುವ ಅಂಶಗಳಾಗಿವೆ. ಇತ್ತೀಚಿಗೆ ರೇಷ್ಮೆ ಬೇಡಿಕೆ ಕಡಿಮೆ ಆಗುತ್ತಿದೆ. ಆದರೆ ಭಾರತದ ರೇಷ್ಮೆಗೆ ಬಹು ಬೇಡಿಕೆ, ಮೌಲ್ಯ ಹೊಂದಿದೆ. ಅಥಣಿಯ ಅನೇಕ ರೇಷ್ಮೆ ಬೆಳೆಯುವ ರೈತರು ಗೂಡು ಬಿಡಿಸಲು ರಾಮನಗರಕ್ಕೆ ಹೋಗಬೇಕಾಗಿತ್ತು. ಆದರೆ ಮಂಜುನಾಥ ತುಂಬಾ ಮುತುವರ್ಜಿ ವಹಿಸಿ ರೈತರ ಸಂಕಷ್ಟ ಪರಿಹರಿಸಲು ಉತ್ತಮ ಪ್ರಯತ್ನ ಮಾಡಿದ್ದಾರೆ. ಇದರಿಂದ ರೈತರಿಗೆ ಮಧ್ಯವರ್ತಿಗಳ ಹಾವಳಿ, ದಲ್ಲಾಳಿ ಇದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ದೊರಕಿಸಿದ್ದಾರೆ. ಇಂದು ಎ ಐ ಬಂದಿರುವ ಹಿನ್ನೆಲೆಯಲ್ಲಿ ವೈದ್ಯರು, ಇಂಜಿನಿಯರ್ ಅಷ್ಟೇ ಅಲ್ಲದೇ ಎಲ್ಲ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇಂದು ಸರಕಾರಿ ನೌಕರಿ ಅವಲಂಬಿಸಿ ಬದುಕಲು ಸಾಧ್ಯವಿಲ್ಲ.ಯುವಕರು ಸಾಕಷ್ಟು ಪ್ರಯತ್ನಿಸಿ ರೇಷ್ಮೆ ಬೆಳೆದು ಸ್ವ ಉದ್ಯೋಗ ಮಾಡಬೇಕು ಎಂದು ಕರೆ ನೀಡಿದರು.
ಇಂದು ಹೈಬ್ರಿಡ್ ಬೀಜ ಬಂದಿದೆ. ಪರಿಣಾಮ ನಮ್ಮಲ್ಲಿ ಕ್ರಿಮಿನಾಶಕ, ಗೊಬ್ಬರ ಬಳಸಿ ತಿನ್ನುವ ಆಹಾರ, ಎಣ್ಣೆ ಎಲ್ಲ ತಿನ್ನುವ ಪರಿಣಾಮ ಕ್ಯಾನ್ಸರ್ ನಂತಹ ಭಿಕರ ರೋಗಕ್ಕೆ ತುತ್ತಾಗುವ ಸನ್ನಿವೇಶ ನಿರ್ಮಾಣವಾಗಿದೆ. ಎಲ್ಲ ರೈತರು ಸ್ವಾವಲಂಬಿಗಳಾಗಿ ತಮ್ಮ ಸ್ವಂತ ಮನೆಗಳಿಗೆ ಬೇಕಾಗುವಷ್ಟು ಉತ್ತಮ ಕಾಯಿಪಲ್ಲ್ಯೆ, ಹಣ್ಣು ಹಂಪಲು ಬೆಳೆದು ತಿನ್ನಿ ಎಂದು ಕಿವಿ ಮಾತು ಹೇಳಿದರು.
ಬೆಳಗಾವಿ ವಿಭಾಗದ ಇಲಾಖೆ ಜಂಟಿ ನಿರ್ದೇಶಕರು ಪಿ ಎಲ್ ಚಂದ್ರಪ್ಪ ಮಾತನಾಡಿ ಇದು ಒಂದು ರೈತರಿಗೆ ಗುಡಿ ಕೈಗಾರಿಕೆ ಸ್ವಯಂ ಉದ್ಯೋಗ ಚಟುವಟಿಕೆಗೆ ಅವಕಾಶ ನೀಡುತ್ತದೆ. ಮಹಿಳೆಯರು ಇರುವವರೆಗೆ ರೇಷ್ಮೆ ಬೇಡಿಕೆ ಇರುತ್ತದೆ. ಚೀನಾ ನಂತರ ಭಾರತ ರೇಷ್ಮೆ ಉತ್ಪಾದನೆಯಲ್ಲಿ ಮುಂದಿದೆ, ತುಂಬಾ ದುಬಾರಿ ಆಗಿರುವ ರೇಷ್ಮೆ ರೈತರಿಗೆ ಲಾಭದಾಯಕವಾಗಿದೆ. ಇಂದು ತರಬೇತಿ ಇಲ್ಲದೇ ಯಾವ ಉದ್ಯೋಗ ಮಾಡಲು ಸಾಧ್ಯವಿಲ್ಲ. ಕೃಷಿ ಆಧಾರಿತ ರೇಷ್ಮೆ ಉದ್ಯೋಗ, ಹಿಪ್ಪು ನೇರಳೆ ಬೆಳೆ ಬೆಳೆಯುವುದು, ರೇಷ್ಮೆ ಹುಳು ಸಾಕಾಣೆ, ನಂತರ ಬಟ್ಟೆ ತಯಾರಿ ಸುವುದು ಮೂರು ಹಂತದಲ್ಲಿ ಪ್ರಕ್ರಿಯೆ ಜರುಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ 10750 ಜನ ರೇಷ್ಮೆ ಬೆಳೆಯುತ್ತಿದ್ದಾರೆ.ಪ್ರತಿ ಎರಡುವರೇ ತಿಂಗಳಲ್ಲಿ 270 ಕೆ ಜಿ ಬೆಳೆ ಬೆಳೆಯಬಹುದು.
ಕರ್ನಾಟಕದಲ್ಲಿನ ರೈತರು ನೌಕರಿಗೆ ಕಟ್ಟು ಬೀಳದೆ ಸಾಕಷ್ಟು ಲಾಭದಾಯಕ ಬೆಳೆ ಬೆಳೆಯಬಹುದು. ಎಕರೆಗೆ 45 ಸಾವಿರ ರೂ ಸಹಾಯಧನ ದೊರೆಯುತ್ತದೆ. ಜೊತೆಗೆ ನರೇಗಾ ದಲ್ಲಿ ಕೂಡಾ ಸಹಾಯ ಧನ ಸಿಗುತ್ತದೆ. ಹುಳು ಸಾಕಾಣಿಕೆ ಶೇಡ್ಡಗೆ ಸಹಾಯ ಧನ ಸಿಗುತ್ತದೆ ಸರಕಾರಿ ನೌಕರಿ ಅವಲಂಬಿಸದೆ ರೇಷ್ಮೆ ಬೇಸಾಯ ಮಾಡುವಂತೆ ಸಲಹೆ ನೀಡಿದರು.ಈ ವೇಳೆ ಶಾಸಕರು ಮಂಜುನಾಥ ಹುಲಸದಾರ ಅವರಿಗೆ ಕಾರ್ಖಾನೆ ಆರಂಭಿಸಲು ಅನುಮತಿ ಪತ್ರ ವಿತರಿಸಿದರು.ತಾಲೂಕು ರೇಷ್ಮೆ ಇಲಾಖೆಯಿಂದ ರೈತರಿಗೆ ಸ್ವಚ್ಛತೆಗೆ ಪೂರಕವಾಗಿ ಔಷಧಿ ಮ್ಯಾಟ್ ಸೇರಿ ಹಲವು ಪರಿಕರ ವಿತರಿಸಲಾಯಿತು.
ಸಾನಿಧ್ಯವನ್ನು ಶಿವಮೊಗ್ಗದ ಪರಮ ಪೂಜ್ಯ ಕೊಡಲಿ ಅರುಣಾಚಲ ಅಯ್ಯರ ವಹಿಸಿ ಆಶೀರ್ವಚನ ನೀಡಿದರು. ಕೃಷ್ಣಾ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ,ಬೆಳಗಾವಿ ವಿಭಾಗದ ಇಲಾಖೆ ಜಂಟಿ ನಿರ್ದೇಶಕರು ಪಿ ಎಲ್ ಚಂದ್ರಪ್ಪ, ಬೆಳಗಾವಿ ರೇಷ್ಮೆ ಇಲಾಖೆ ಉಪನಿರ್ದೆಶಕರು ಮಹೇಶಕುಮಾರ ಬಾಗಿ,ಮುರಾಗೆಪ್ಪ ಹುಲ ಸದಾರ್, ಭೀಮಪ್ಪ ಹುಲಸದಾರ, ಬಸಲಿಂಗಯ್ಯ ಹಿರೇಮಠ, ಹಣಮಂತ ರಾ, ಬಿರಾದಾರ, ಡಾ. ಎಂ ಎ ಚನ್ನಾಪುರ ಸೇರಿದಂತೆ ಹಲವಾರು ಗ್ರಾಮಗಳ ರೈತ ಬಂಧುಗಳು ಉಪಸ್ಥಿತರಿದ್ದರು.

