ನಂದಗಡ: ಬೆಳಗಾವಿ ಜಿಲ್ಲೆಯ ನಂದಗಡದ ಪುಣ್ಯಭೂಮಿಯಲ್ಲಿ, ಬ್ರಿಟಿಷರ ವಿರುದ್ಧ ಗುಡುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಸ್ಮರಣಾರ್ಥವಾಗಿ ನಿರ್ಮಿಸಲಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ” (ವೀರಭೂಮಿ) ಅನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇಂದು ಲೋಕಾರ್ಪಣೆಗೊಳಿಸಿದರು.
ನಮ್ಮ ಮಣ್ಣಿನ ವೀರನ ಶೌರ್ಯದ ಗಾಥೆಯನ್ನು ಸಾರುವ ಈ ಸ್ಮಾರಕವು ಮುಂದಿನ ಪೀಳಿಗೆಗೆ ದೇಶಪ್ರೇಮದ ಸ್ಫೂರ್ತಿಯಾಗಲಿದೆ. ರಾಯಣ್ಣನ ತ್ಯಾಗಕ್ಕೆ ಸಂದ ಅತಿದೊಡ್ಡ ಗೌರವ ಇದಾಗಿದೆ ಎಂದು ತಿಳಿಸಿದರು


ಸಂಪಾದಕರು: ರಾಮಚಂದ್ರಪ್ಪ ಪೂಜೇರ
