Monday, March 2, 2026
HomeUncategorizedರಾಜ್ಯ ಹೆದ್ದಾರಿಗೆ ಫೈನಲ್ ಕೋಟ್ ಡಾಂಬರಿಕರಣ ಪ್ರಾರಂಭಉಮೇಶ್ ಕೆ. ಮುದ್ನಾಳ್ ಹರ್ಷ

ರಾಜ್ಯ ಹೆದ್ದಾರಿಗೆ ಫೈನಲ್ ಕೋಟ್ ಡಾಂಬರಿಕರಣ ಪ್ರಾರಂಭಉಮೇಶ್ ಕೆ. ಮುದ್ನಾಳ್ ಹರ್ಷ

ರಾಜ್ಯ ಹೆದ್ದಾರಿ ರಸ್ತೆ ನವೀಕರಣಕ್ಕೆ 10 ಕೋಟಿಯಲ್ಲಿ ನಡೆಯುತ್ತರುವ
ಫೈನಲ್ ಕೋಟ್ ಡಾಂಬರಿಕರಣ ಕಾರ್ಯಾರಂಭ, ಶಾಸಕರಿಗೆ ಉಮೇಶ ಕೆ. ಮುದ್ನಾಳ ಧನ್ಯವಾದಗಳು ತಿಳಿಸಿದ್ದಾರೆ.

ಯಾದಗಿರಿ ನಗರದ ಹೊರವಲಯದಲ್ಲಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಮುಗಿದು ತಿಂಗಳ ಕಳೆದರು ಫೈನಲ್ ಟಚ್ ಡಾಂರಿಕರಣ ತಡೆಗೋಡೆ ನಿರ್ಮಾಣ ಮಾಡಿಲ್ಲವೆಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಆರೋಪಿಸಿದ ಹಿನ್ನಲೆಯಲ್ಲಿ.

ಇಂದು ರಾಜ್ಯ ಹೆದ್ದಾರಿ ರಸ್ತೆಗೆ ಫೈನಲ್ ಕೋಟ್ ಡಾಂಬರಿಕರಣ ಕಾಮಗಾರಿ ಪ್ರಾರಂಭವಾಗಿದ್ದು ನಗರದ ರೈಲ್ವೆ ಬ್ರಿಡ್ಜ್ ಮೇಲ್ಬಾಗದ ಹೆದ್ದಾರಿಗೆ ಫೈನಲ್ ಟಚ್ ನೀಡುತ್ತಿರುವುದು ನಮ್ಮ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತಕ್ಕೆ ಉಮೇಶ ಕೆ. ಮುದ್ನಾಳ ಅವರು ಧನ್ಯವಾದ ತಿಳಿಸಿದ್ದಾರೆ.

ಅಲ್ಲದೆ ತುರ್ತಾಗಿ ತಡೆಗೋಡೆ ನಿರ್ಮಾಣ ಸೂಚಕ ಫಲಕ, ರಸ್ತೆ ಹಂಸಾ, ಝಿಬ್ರಾ ಕ್ರಾಸ್ ಲೈನ್ ಹಾಕಿ. ಸಾರ್ವಜನಿಕರಿಗೆ ವಾಹನ ಸವಾರರಿಗೆ ಅನುಕೂಲ ಮಾಡುವುದರ ಜೊತೆಗೆ ಮುಂದಾಗುವ ಅನಾವುತಗಳನ್ನು ತಪ್ಪಿಸುವಲ್ಲಿ ಜಿಲ್ಲಾಡಳಿತ ಮುಂದಾಗಬೇಕೆAದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಆಗ್ರಹಿಸಿದ್ದಾರೆ.

ಕೋಟ್ :
ಹಳೆ ಬಸ್ ನಿಲ್ದಾಣದಿಂದ ವಡಗೇರಾ ಕ್ರಾಸ್ ವರೆಗೆ ರಾಜ್ಯ ಹೆದ್ದಾರಿ ಸಂಪೂರ್ಣ ತಗ್ಗು ಗುಂಡಿಗಳಿAದ ಹಾಳಾಗಿ ಹೋಗಿತ್ತು. ಸ್ಥಳಿಯ ಶಾಸಕರಾದ ಚನ್ನಾರೆಡ್ಡಿ ಪಾಟೀಲ ಅವರ ಗಮನಕ್ಕೆ ಬಂದ ತಕ್ಷಣ ಸಾರ್ವಜನಿಕರ ವಾಹನ ಸವಾರರ ಇತದೃಷ್ಟಿಯಿಂದ ರಸ್ತೆ ನವೀಕರಣಕ್ಕೆ 10 ಕೋಟಿ ಮಂಜೂರ ಪೈನಲ್ ಕೋಟ್ ಡಾಂಬರಿಕಣ ಪ್ರಾರಂಭವಾದ ಹಿನ್ನಲ್ಲೆಯಲ್ಲಿ ಸಾಮಾಜಿಕ ಹೋರಾಟಗಾರ ಉಮೇಶ.ಕೆ.ಮುದ್ನಾಳ ಅವರು ಶಾಸಕರಿಗೆ ಧನ್ಯವಾದಗಳು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ