Tuesday, May 12, 2026
Homeಜಿಲ್ಲಾ ಸುದ್ದಿಗಳುರಾಜ್ಯ ಹಾಗೂ ಕೇಂದ್ರ ಸರ್ಕಾರ  ರಸ ಗೊಬ್ಬರ ಖರೀದಿಗೆ ರೈತರಿಗೆ ಎಫ್ ಐ ಡಿ ಕಡ್ಡಾಯ...

ರಾಜ್ಯ ಹಾಗೂ ಕೇಂದ್ರ ಸರ್ಕಾರ  ರಸ ಗೊಬ್ಬರ ಖರೀದಿಗೆ ರೈತರಿಗೆ ಎಫ್ ಐ ಡಿ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಶನಿವಾರ ಬೃಹತ್ ಪ್ರತಿಭಟನೆ….

ಹಾವೇರಿ,: ರಾಜ್ಯ ಹಾಗೂ ಕೇಂದ್ರ ಸರ್ಕಾರ  ರಸ ಗೊಬ್ಬರ ಖರೀದಿಗೆ ರೈತರಿಗೆ ಎಫ್ ಐ ಡಿ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಶನಿವಾರ ದಿನಾಂಕ 2/5/2026ರಂದು ಬೆಳಿಗ್ಗೆ 10 ಗಂಟೆಗೆ ಶಿಗ್ಗಾವ್ ಪಟ್ಟಣದ ಅಂಚೆ ಕಚೇರಿಯ ಇಂದ ರಾಷ್ಟ್ರೀಯ ಹೆದ್ದಾರಿಯವರಿಗೂ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ರೈತ ಬಾಂಧವರು ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಹೋರಾಟಗಾರರು ವಿವಿಧ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಫ್ ಐ ಡಿ ಎಂಬ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು  ಬೃಹತ್ ಹೋರಾಟ ಇದೆ ಆದಕಾರಣ ಜಿಲ್ಲೆ ಎಲ್ಲ ರೈತರು ಶಿಗ್ಗಾವ್ ಹೋರಾಟದಲ್ಲಿ ಭಾಗವಹಿಸಬೇಕೆಂದು ಭುವನೇಶ್ವರ ಶಿಡ್ಲಾಪುರ ಜಿಲ್ಲಾಧ್ಯಕ್ಷರು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾವೇರಿ ರೈತರಲ್ಲಿ  ವಿನಂತಿ ಮಾಡಿಕೊಂಡಿದ್ದಾರೆ..

ವರದಿಗಾರರು: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ