Saturday, June 13, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದ್ದಕ್ಕೆ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ಎಸ್ ಡಿ ಮುಡೆಣ್ಣವರ ಇವರಿಗೆ ಅಭಿನಂದನಾ...

ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದ್ದಕ್ಕೆ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ಎಸ್ ಡಿ ಮುಡೆಣ್ಣವರ ಇವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..

ಹಾವೇರಿ: ಹಾವೇರಿ ಜಿಲ್ಲಾ ಸಾಹಿತ್ಯ ಆಸಕ್ತ ಅಭಿಮಾನಿಗಳ ಬಳಗ ವತಿಯಿಂದ ಮುಂಡಗೋಡ್ ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ಕರ್ನಾಟಕ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ವತಿಯಿಂದ ಹಾವೇರಿಯಲ್ಲಿ ಎರಡನೇ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದ್ದಕ್ಕೆ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ಎಸ್ ಡಿ ಮುಡೆಣ್ಣವರ ಇವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಾವೇರಿ ಜಿಲ್ಲೆಯವರು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ ವಿ ಎಸ್ ಪಾಟೀಲ್ ಮಾತನಾಡುತ್ತ ಹಾವೇರಿಯಲ್ಲಿ ಕನ್ನಡ ಸಮ್ಮೇಳನ ಬಹಳ ಅಚ್ಚುಕಟ್ಟಾಗಿ ಮತ್ತು ಕನ್ನಡದ ಭಾಷೆಯ ಸೊಗಡು ಬಿಂಬಿಸುವ  ಇದೊಂದು ಮಾದರಿ ಸಮ್ಮೇಳನ ವಾಗಿದ್ದು ಹೆಚ್ಚಿನ ಜನಸಂಖ್ಯೆ ಸೇರಿದ್ದು ವಿಶೇಷವಾಗಿತ್ತು ಇಂದಿನ ದಿನಮಾನಗಳಲ್ಲಿ ದುಡ್ಡು ಕೊಟ್ಟು ಕರೆದರೆ ಬರದ ಜನ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಶ್ರೀ ಎಸ್ ಪಕ್ಕೀರಪ್ಪನವರು ಮಾತನಾಡುತ್ತಾ ಹಾವೇರಿಯ ಸಮ್ಮೇಳನದ ಅತಿ ವಿಜೃಂಭಣೆಯಿಂದ ಮೆರವಣಿಗಿಂದ ಹಿಡಿದು ಎಲ್ಲಾ ಗೋಷ್ಠಿಗಳು ಅಚ್ಚುಕಟ್ಟಾಗಿ ನಡೆಯಿತು.ಹಾವೇರಿಯ ಜನತೆ ಬಹಳ ಪ್ರೀತಿಯಿಂದ ಕನ್ನಡದ ತೇರನ್ನು ಎಳೆದಿದ್ದಾರೆ. ಎಸ್. ಡಿ ಮುಡೆಣ್ಣವರ ನೇತೃತ್ವದಲ್ಲಿ ಚನ್ನಾಗಿ ಸಮ್ಮೇಳನ ಜರಗಿತು. ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ. ಸುಮಾ ಜಿ ಯವರು ಮಾತನಾಡುತ್ತಾ ಶ್ರೀ ಎಸ್ ಡಿ ಮುಡಣ್ಣನವರ ನೇತೃತ್ವದಲ್ಲಿ ಅತ್ಯಂತ ಸುಂದರವಾದ ಕನ್ನಡ ಸಮ್ಮೇಳನ ಹಾವೇರಿಯಲ್ಲಿ ಜರಗಿದ್ದು ಬಹಳ ಖುಷಿಯ ವಿಚಾರ ಸಮ್ಮೇಳನ ಯಶಸ್ವಿಯಾಗಿದ್ದಕ್ಕೆ ಇಂದು ಅಭಿನಂದನ ಕಾರ್ಯಕ್ರಮ ಮಾಡಲು ಆಗಮಿಸಿದ ಹಾವೇರಿಯವರಿಗೆ ತುಂಬಾ ಧನ್ಯವಾದಗಳನ್ನು ಹೆಳ್ಳುತ್ತೇನೆ.

ಮುಂಡಗೋಡ ತಾಲೂಕ ಕನ್ನಡ ಸಾಹಿತ್ಯ ಪರಿಷ ತ್ತಿನ ಅಧ್ಯಕ್ಷರಾದ ವಸಂತ. ಕೊಣಸಾಲಿ. ಡಾ. ಪಿ. ಪಿ. ಛಬ್ಬಿ, ಹಾವೇರಿಯ ಉಡಚಪ್ಪ. ಮಾಳಗಿ, ಎಸ್. ಎಲ್. ಕಡದೇವರಮಠ, ಇನ್ನಿತರ ಅತಿಥಿಗಳು ಮಾತನಾಡಿದರು. ಅಭಿನಂದನಾ ಸಮಾರಂಭದಲ್ಲಿ ಶ್ರೀ ಜಂಪಾ ಲೋಕ್ಸನ್ ಗುರೂಜಿ ಮಾತನಾಡುತ್ತಾ ಇಂದು ಕನ್ನಡ ರಾಜ್ಯದ ಪ್ರಾದೇಶಿಕ ಭಾಷೆಯಾಗಿದ್ದು ನಮ್ಮ ಟಿಬೆಟಿನಲ್ಲಿ ಮುಂಡಗೋಡ್ನಲ್ಲಿ ಮತ್ತು ಇತರೆ ಪ್ರದೇಶಗಳಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಅರ್ಪಿಸುತ್ತೇನೆ ಇಂತಹ ಸಮ್ಮೇಳನಗಳು ಪ್ರತಿ ಜಿಲ್ಲೆಯಲ್ಲಿ ನಡೆಯಲಿ ಕನ್ನಡ ಶಾಶ್ವತವಾಗಿ ಈ ನೆಲದಲ್ಲಿ ಉಳಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಹಾವೇರಿ ಎರಡನೇ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಶ್ರೀ ಜಿಎಂ ಓಂಕಾರ್ಣ್ಣನವರು ಮಾತನಾಡುತ್ತಾ ಮಂಡಗೋಡ್ ಇಂದ ಆಗಮಿಸಿ ಹಾವೇರಿಯಲ್ಲಿ ಹಲವು ಕಷ್ಟಗಳು ಅನುಭವಿಸಿ ಅತ್ಯಂತ ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟ ಶ್ರೀ ಎಸ್ ಡಿ ಮುಡಣ್ಣನವರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ ನನ್ನನ್ನು ಸರ್ವಾಧ್ಯಕ್ಷನಾಗಿ ಆಯ್ಕೆ ಮಾಡಿದ್ದಕ್ಕೆ ರಾಜ್ಯ ಸಮಿತಿ ಎಲ್ಲ ಸದಸ್ಯರಿಗೆ ಧನ್ಯವಾದಗಳು ಅರ್ಪಿಸುತ್ತೇನೆ.

ಅಭಿನಂದನಾ ಸಮಾರಂಭದಲ್ಲಿಸನ್ಮಾನ ಸ್ವೀಕರಿಸಿ ಶ್ರೀ. ಎಸ್. ಡಿ ಮುಡೆಣ್ಣವರ ಮಾತನಾಡುತ್ತಾ ಹಾವೇರಿಯಲ್ಲಿ ನಡೆದ ರಾಜ್ಯಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯ ಸಾಹಿತ್ಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಿದ್ದಾರೆ ಹಾಗಾಗಿ ನಮ್ಮ ಬಳಗದ ಪರವಾಗಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಹೇಳುತ್ತೇನೆ ಹಾಗೆ ಎಲ್ಲಾ ಜಿಲ್ಲೆಗಳಿಂದ ಆಗಮಿಸಿ ಸಮ್ಮೇಳನವನ್ನು ಚೆನ್ನಾಗಿ ನಡೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಾರುತಿ ಶಿಡ್ಲಾಪುರ ರವರು ಅಧ್ಯಕ್ಷೀಯ ಭಾಷಣವನ್ನು ಮಾತನಾಡುತ್ತಾ ಹಾವೇರಿಯ ಸಮ್ಮೇಳನವು ರಾಜ್ಯಮಟ್ಟದ ಯಾವ ಸಮ್ಮೇಳನಕ್ಕೂ ಕಡಿಮೆ ಇರಲಿಲ್ಲ ಹೆಚ್ಚು ಜನಸಂಖ್ಯೆ ಸೇರಿ ವಿವಿಧ ಗೋಷ್ಠಿಗಳನ್ನು ಅತ್ಯಂತ ಚನ್ನಾಗಿ ನಡೆಸಿ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ ಒಂದು ಉತ್ತಮ ಕನ್ನಡ ಸೇವೆಯನ್ನು ಸಲ್ಲಿಸುತ್ತಿರುವುದು ತುಂಬಾ ಖುಷಿ ವಿಚಾರ ಈ ಬಳಗದ ಪ್ರಯಾಣ ಹೀಗೆ ಮುಂದುವರೆಯಲಿ ಮತ್ತು ಇಂದು ನಾವು ಹಾವೇರಿಯಿಂದ ಆಗಮಿಸಿ ಶ್ರೀ ಎಸ್ ಡಿ ಮುಡೆಣ್ಣವರ ರವರಿಗೆ ಅಭಿನಂದನೆ ಸಲ್ಲಿಸಿ ಅವರ ಈ  ಕನ್ನಡ ಸೇವೆಗೆ ನಾವು ಬೆಂಬಲವಾಗಿರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ರಾಜ್ಯಾಧ್ಯಕ್ಷರಾದ ಶ್ರೀ ಎಸ್ ಡಿ ಮುಡಣ್ಣವರ ಮತ್ತು ಶ್ರೀಮತಿ ವೈಶಾಲಿ ಮುಡಣ್ಣವರ್ ಈ ದಂಪತಿಗಳಿಗೆ ಹಾವೇರಿಯ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು ಹಾಗೆ ಮಂಡಗೋಡ ತಾಲೂಕ ಆಂಗ್ಲ ಭಾಷಾ ವೇದಿಕೆ ವತಿಯಿಂದ ಮತ್ತು ತಾಲೂಕ ಕನ್ನಡ ವಿಷಯ ಬೋಧಕರ ವೇದಿಕೆಯಿಂದ ಮತ್ತು ಶ್ರೀ ರಘು ತಲೆಗೇರಿ ಮತ್ತು ಅರ್ಚನಾ ತಲೆಗೇರಿ ಮತ್ತು ಹಾವೇರಿಯ ಅಮ್ಮ ಸಂಸ್ಥೆಯ ವತಿಯಿಂದ ಮತ್ತು ಶ್ರೀಮತಿ ವೀಣಾ ರಾಥೋಡ್ ದಂಪತಿಗಳಿಂದ ಶ್ರೀ. ಎಸ್. ಡಿ ಮುಡೆಣ್ಣವರರಿಗೆ ಸನ್ಮಾನ ಮಾಡಿ ಶುಭ ಕೋರಿದರು  ಹಾವೇರಿಯ ಸಾಹಿತ್ಯ ಆಸಕ್ತರು ಬಳಗ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಮಾಡಿ ಗೌರವಿಸಿದರು . ಈ ಸಂದರ್ಭದಲ್ಲಿ ಶ್ರೀ ಜಿ ಟಿ ಕಡೆಮನಿ, ಹುಲಗಪ್ಪ ಬೋವಿ ವಡ್ಡರ್, ಮಂಜುನಾಥ್ ಕಲಾಲ್,ಸುಭಾಷ್ ವಡ್ಡರ್ ವಾಸುದೇವ್ ಮಡ್ಲಿ, ಪಾಂಡುರಂಗ ಟಿಕ್ಕೋಜಿ, ರವಿ ಅಕ್ಕಿವಳ್ಳಿ, ಕೃಷ್ಣ ಗುಜಮಾಗಡಿ ಶ್ರೀಮತಿ ಸವಿತಾ ವರ್ಣೇಕರ್,  ಮಧುಮತಿ ಹಿರೇಮಠ,  ವಾಣಿಶ್ರೀ ನಾಗಮ್ಮನವರ, ನಟೇಶ್. ಬಿ.ಕೆ, ಶ್ರೀ ದುರ್ಗಪ್ಪ ಮುಡೇಣ್ಣವರ, ಶ್ರೀಮತಿ ಗಂಗಾ ಹೊಸಮನಿ, ಸ್ನೇಹ ಹಾಗೂ ಸಾನಿಯಾ ಪ್ರಣಮ್ಯಾ ಮುಂತಾದವರು ಹಾಜರಿದ್ದರು ಕಾರ್ಯಕ್ರಮದಲ್ಲಿ ಸಿ ಎನ್ ಸುರ್ಕೋಡ್  ಪ್ರಾರ್ಥನೆ ಸಲ್ಲಿಸಿದರು ಶ್ರೀ ರಮೇಶ್ ಪವಾರ್ ಸ್ವಾಗತ  ಮಾಡಿದರು ಶ್ರೀ ಬಾಲಚಂದ್ರ ಹೆಗಡೆ ನಿರೂಪಿಸಿದರು..

ವರದಿಗಾರರು: ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ